Dhanush: ಡಿವೋರ್ಸ್ ಕೊಟ್ಟಿರೋ ಧನುಷ್ ಹಾಗೂ ಗಂಡನನ್ನು ಕಳೆದುಕೊಂಡಿರೋ ನಟಿ ಮೀನಾ ಅತೀ ಶೀಘ್ರದಲ್ಲೇ ಮದುವೆ?

Actress Meena ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸೂಪರ್ ಸ್ಟಾರ್ ರಜನಿಕಾಂತ್(Superstar Rajinikanth) ರವರ ಮಗಳು ಐಶ್ವರ್ಯ ಹಾಗೂ ನಟ ಧನುಷ್(Actor Dhanush) ಅವರು ಕೆಲವು ತಿಂಗಳುಗಳ ಹಿಂದಷ್ಟೇ ತಮ್ಮ ಸುದೀರ್ಘಕಾಲದ ದಾಂಪತ್ಯ ಜೀವನಕ್ಕೆ ವಿವಾಹ ವಿಚ್ಛೇದನ ನೀಡುವ ಮೂಲಕ ಪೂರ್ಣ ವಿರಾಮ ಇಟ್ಟಿದ್ದರು. ಇದಾದ ನಂತರ ಇವರಿಬ್ಬರ ದಾಂಪತ್ಯ ಜೀವನದ ಕುರಿತಂತೆ ಆಗಾಗ ಗಾಳಿ ಸುದ್ದಿಗಳು ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಿ ಬರುತ್ತಲೇ ಇದ್ದವು.

ಅದರಲ್ಲೂ ವಿಶೇಷವಾಗಿ ಇತ್ತೀಚಿಗಷ್ಟೇ ರಜನಿಕಾಂತ್(Rajinikanth) ಅವರ ಮಧ್ಯಸ್ಥಿಕೆಯಲ್ಲಿ ಇಬ್ಬರೂ ಕೂಡ ಮಾತುಕತೆ ನಡೆಸಿ ಇನ್ನೇನು ಮತ್ತೊಮ್ಮೆ ಮಕ್ಕಳಿಗಾಗಿ ಒಂದಾಗಿ ಜೀವನ ನಡೆಸಲು ಸಿದ್ಧರಾಗಿದ್ದಾರೆ ಎನ್ನುವ ಸುದ್ದಿಗಳು ಕೂಡ ಕೇಳಿ ಬಂದಿತ್ತು. ಆದರೆ ಈಗ ಅದರ ನಡುವಲ್ಲಿಯೇ ಮತ್ತೊಂದು ಸುದ್ದಿ ಕೇಳಿ ಬಂದಿದ್ದು ಎಲ್ಲರೂ ಕೂಡ ಆಶ್ಚರ್ಯ ಚಕಿತರಾಗುವಂತೆ ಮಾಡಿದೆ.

ಹೌದು ತಮಿಳು ಚಿತ್ರರಂಗದ ಬೈಲ್ವಾನ್ ರಂಗನಾಥ್(Bayilwan Ranganath) ಎನ್ನುವವರು ನೀಡಿರುವಂತಹ ವಿವಾ’ ದಾತ್ಮಕ ಹೇಳಿಕೆ ತಮಿಳು ಚಿತ್ರರಂಗದಲ್ಲಿ ದೊಡ್ಡಮಟ್ಟದ ಸಂಚಲನವನ್ನು ಸೃಷ್ಟಿಸಿದೆ. ಹೌದು ತಮ್ಮ ಹೆಂಡತಿಯನ್ನು ಬಿಟ್ಟು ನಟಿ ಮೀನಾ(Actress meena) ಅವರನ್ನು ಧನುಷ್ ಮದುವೆಯಾಗಲು ಹೊರಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಹೌದು ಇತ್ತೀಚಿಗಷ್ಟೇ ನಟಿ ಮೀನಾ ಸಾಗರ್(Meena Sagar) ಅವರು ತಮ್ಮ ಪತಿ ವಿದ್ಯಾಸಾಗರ್ ಅವರನ್ನು ಕಳೆದುಕೊಂಡಿದ್ದರು. ಬೈಲ್ವಾನ್ ರಂಗನಾಥ್ ಅವರು ಹೇಳುವ ಪ್ರಕಾರ ಅತಿ ಶೀಘ್ರದಲ್ಲಿಯೇ ನಟಿ ಮೀನಾ ಹಾಗೂ ನಟ ಧನುಷ್(Dhanush) ಇಬ್ಬರು ಕೂಡ ಮದುವೆಯಾಗಲಿದ್ದಾರೆ ಅಥವಾ ಮದುವೆ ಆಗದೇನೆ ಜೊತೆಯಲ್ಲಿ ಇರಲಿದ್ದಾರೆ ಎನ್ನುವ ಹೇಳಿಕೆಯನ್ನು ನೀಡುವ ಮೂಲಕ ಇಡೀ ಚಿತ್ರರಂಗವೇ ಅಲುಗಾಡುವಂತೆ ಮಾಡಿದ್ದಾರೆ.

Leave a Comment

error: Content is protected !!