Leelavathi: ಲೀಲಾವತಿಯವರನ್ನು ಕಂಡು ಅದೊಂದು ಸಂದರ್ಭದಲ್ಲಿ ಅವರ ಕೈ ಹಿಡಿದುಕೊಂಡು ರಾಜಕುಮಾರ ಅವರು ಗಳಗಳನೆ ಅತ್ತಿದ್ದರಂತೆ!

Dr Rajkumar ರಾಜಕುಮಾರ್(Rajkumar) ಕನ್ನಡ ಚಿತ್ರರಂಗದ ಆಸ್ತಿ ಕನ್ನಡ ಚಿತ್ರರಂಗವೇ ಅವರು ಎನ್ನುವಷ್ಟರ ಮಟ್ಟಿಗೆ ಕನ್ನಡ ಚಿತ್ರರಂಗವನ್ನು ದೇಶಿಯ ಮಟ್ಟದಲ್ಲಿ ದೊಡ್ಡ ಮಟ್ಟಕ್ಕೆ ಎತ್ತರಕ್ಕೆ ಕೊಂಡೊಯ್ದಂತಹ ಶ್ರೇಯ ಅವರಿಗೆ ಸಲ್ಲುತ್ತದೆ. ಯಾವುದೇ ಪಾತ್ರಗಳನ್ನು ನೀಡಿದರು ಕೂಡ ಅದಕ್ಕೆ ತಕ್ಕದಾದ ನಟನೆಯನ್ನು ತೋರ್ಪಡಿಸಬಲ್ಲಂತಹ ಏಕೈಕ ಕನ್ನಡದ ಅಪರೂಪದ ಕಲಾವಿದ.

ಪ್ರತಿಯೊಬ್ಬ ಕಲಾವಿದರನ್ನು ಕೂಡ ತನಗಿಂತ ಹಿರಿಯರೇ ಆಗಿರಲಿ ಅಥವಾ ತನಗಿಂತ ಕಿರಿಯರೆ ಆಗಿರಲಿ ಅವರಿಗೆ ಗೌರವವನ್ನು ಸೂಚಿಸಿ ನಿಜ ಜೀವನದಲ್ಲಿ ಕೂಡ ಅದೇ ರೀತಿ ಇದ್ದಂತಹ ಕಲಾವಿದ ನಮ್ಮೆಲ್ಲರ ನೆಚ್ಚಿನ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್. ರಾಜಕುಮಾರ್(Rajkumar) ಅವರು ನಿಜಕ್ಕೂ ಕೂಡ ಬಿಳಿ ಬಟ್ಟೆಯಷ್ಟೇ ಶುಭ್ರವಾಗಿದ್ದರು ಎಂದು ಹೇಳಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ರಾಜಕುಮಾರ್ ಹಾಗೂ ಲೀಲಾವತಿ(leelavathi) ಅವರ ಕುರಿತಂತೆ ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗುತ್ತಿವೆ. ಆದರೆ ಇಂದಿನ ಲೇಖನಿಯಲ್ಲಿ ನಾವು ಒಂದು ಸಮಯದಲ್ಲಿ ಲೀಲಾವತಿಯವರ ಕೈಯನ್ನು ಹಿಡಿದುಕೊಂಡು ರಾಜಕುಮಾರ್ ಅವರು ಗಳನೆ ಅತ್ತಿದ್ದರು ಎನ್ನುವ ಸುದ್ದಿಯ ಬಗ್ಗೆ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಇದು ಯಾವ ಸಂದರ್ಭದಲ್ಲಿ ನಡೆದಿತ್ತು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ರಾಜಕುಮಾರ್ ಅವರ ಬಲಗೈ ಹಾಗೂ ಅವರ ಸ್ವಂತ ಸಹೋದರ ಆಗಿದಂತಹ ವರದಪ್ಪ ಅವರು ಇಹಲೋಕ ತ್ಯಜಿಸಿದ ಸಂದರ್ಭದಲ್ಲಿ ಅವರನ್ನು ನೋಡಲು ಮನೆಗೆ ಬಂದ ಲೀಲಾವತಿ(Leelavathi) ಅವರನ್ನು ಕಂಡು ಭಾವುಕರಾಗಿ ರಾಜಕುಮಾರ್ ಅವರು ಈ ವಿಚಾರವನ್ನು ಹಂಚಿಕೊಂಡಿದ್ದರು ಎಂಬುದಾಗಿ ತಿಳಿದು ಬಂದಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದು ತಿಳಿದಿಲ್ಲ ಆದರೆ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಓಡಾಡುತ್ತಿದೆ.

Leave a Comment

error: Content is protected !!