ತಂಗಿ ಧೃತಿ ಪುನೀತ್ ರಾಜಕುಮಾರ್ ಅವರಿಗೆ ಬಹಳ ವಿಶೇಷವಾದ ಉಡುಗೊರೆ ಒಂದನ್ನು ನೀಡಿದ ಯುವರಾಜ್ ಕುಮಾರ್!

ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneethrajkumar) ನಮ್ಮೆಲ್ಲರಿಂದ ಅಗಲಿ ವರ್ಷಗಳೇ ಉರುಳಿದರು ಕೂಡ ಅವರ ನೆನಪು ಮಾತ್ರ ಯಾವ ಅಭಿಮಾನಿಗಳ ಮನಸ್ಸಿನಿಂದಲೂ ಚಿಂಚುತ್ತು ಮಾಸಿಲ್ಲ. ಅಪ್ಪು ಇಂದಿಗೂ ಕೂಡ ಅವರ ಅದ್ಭುತ ಸಿನಿಮಾಗಳು ಹಾಗೂ ಮಹತ್ಕಾರ್ಯಗಳ ಮೂಲಕ ನಮ್ಮೊಂದಿಗೆ ಜೀವಿಸುತ್ತಿದ್ದಾರೆ ಎಂಬ ನಂಬಿಕೆ ಹಲವರಲ್ಲಿ ಮನೆಮಾಡಿದೆ. ಪುನೀತ್ ರಾಜಕುಮಾರ್(Puneethrajkumar) ಅವರ ಪತ್ನಿ ಅಶ್ವಿನಿ ಹಾಗೂ ಮಕ್ಕಳು ಮಾಡುವಂತಹ ಕೆಲಸದಲ್ಲಿ ತನ್ನ ನೆಚ್ಚಿನ ನಟನನ್ನು ಕಾಣುತ್ತಿರುವಂತಹ ಅಭಿಮಾನಿಗಳು ಇಂದು ಅಪ್ಪು ಇಲ್ಲದ ಮತ್ತೊಂದು ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ಇದರ ಬೆನ್ನೆಲ್ಲೇ ದೊಡ್ಮನೆಯಲ್ಲಿಯೂ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ವಿಶೇಷವಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಾರ್ಚ್ 15ನೇ ತಾರೀಕಿನಂದು ಯುವ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು ಆ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಮಗಳು ಧೃತಿ ಪುನೀತ್ ರಾಜಕುಮಾರ್ ಅವರು ವೇದಿಕೆಯ ಮೇಲೆ ನಿಂತು ಮಾತನಾಡುವುದರ ಜೊತೆಗೆ ತನ್ನ ಅಣ್ಣನಿಗೆ ಹಾಗೂ ಅವರ ಸಿನಿಮಾಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.

ಸಂತೋಷ ಆನಂದ್ ರಾಮ್ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವಂತಹ ಈ ಸಿನಿಮಾವನ್ನು ಪುನೀತ್ ರಾಜಕುಮಾರ್( Puneethrajkumar) ಅವರಿಗಾಗಿ ತಯಾರಾಗಿತ್ತು ಅವರ ಅಗಲಿಕೆ.ಯ ನಂತರ ಈ ಚಿತ್ರವನ್ನು ಯುವರಾಜ್ ಕುಮಾರ್ ಮಾಡುತ್ತಿದ್ದು ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಳ್ಳಲಿದ್ದಾರೆ ಅದಾಗಲೇ ಸಿನಿಮಾದ ಹಾಡುಗಳೆಲ್ಲವೂ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲಾಗುತ್ತಿದ್ದು ನೋಡುಗರ ಗಮನ ಸೆಳೆಯುತ್ತಿದೆ‌.

ಇನ್ನು ಕಾರ್ಯಕ್ರಮಕ್ಕೆ ಧೃತಿ ಪುನೀತ್ ರಾಜಕುಮಾರ್(Druthi Puneethrajkumar) ಅವರನ್ನು ತಮ್ಮೊಂದಿಗೆ ವೇದಿಕೆಯ ಮೇಲೆ ನಿಲ್ಲಿಸಿಕೊಂಡು ಮಾತನಾಡಿದಂತಹ ಯುವರಾಜ್ ಕುಮಾರ್ ವಿಶೇಷವಾದ ಫೋಟೋ ಫ್ರೇಮ್ ಒಂದನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಹೌದು ಗೆಳೆಯರೇ ಫೋಟೋದಲ್ಲಿ ಅಪ್ಪು ತಮ್ಮ ಇಬ್ಬರು ಮಕ್ಕಳನ್ನು ಅಕ್ಕಪಕ್ಕ ಮಲಗಿಸಿ ಕೊಂಡು ಸೆಲ್ಫಿ ತೆಗೆದಿದ್ದು ಮೂವರ ನಗು ಬಹಳ ಸುಂದರವಾಗಿ ಮೂಡಿಬಂದಿದೆ. ಬೃಹತಾಕಾರದ ಫೋಟೋ ಫ್ರೇಮ್ ಹಿಡಿದು ದೃತಿ ಸಂತಸಪಟ್ಟಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!