Shivanna: ಶಿವಣ್ಣ ಹಾಗೂ ಗೀತಕ್ಕ ನಡುವಿನ ವಯಸ್ಸಿನ ಅಂತರ ಎಷ್ಟು ನೀವೇ ನೋಡಿ!

Geethakka ಕರುನಾಡ ಚಕ್ರವರ್ತಿ ಶಿವಣ್ಣ(Shivanna) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮದುವೆಯಾದ ನಂತರ ಅದೇ ವರ್ಷ ಚಿತ್ರರಂಗಕ್ಕೆ ಕಾಲಿಟ್ಟಿದ್ದು. 1986ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆಗಿರುವಂತಹ ಬಂಗಾರಪ್ಪ ಅವರ ಮಗಳಾಗಿರುವ ಗೀತಾ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಅದೇ ವರ್ಷ ಆನಂದ್ ಸಿನಿಮಾದ(Anand Cinema) ಜೊತೆಗೆ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಾರೆ.

ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ಮೂರು ಜನರೇಶನ್ ಗಳಿಂದಲೂ ಕೂಡ ಟಾಪ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಶಿವಣ್ಣ(Shivanna) ವಯಸ್ಸು 60 ಆಗಿದ್ದರೂ ಕೂಡ ಇಂದಿಗೂ ಪ್ರತಿಯೊಬ್ಬರಿಗೂ ಕೂಡ ಮಾದರಿಯಾಗುವಂತೆ ನಟನೆ ಹಾಗೂ ನೃತ್ಯವನ್ನು ಮಾಡುತ್ತಾರೆ. ಪ್ರತಿಯೊಬ್ಬ ಯುವ ಕಲಾವಿದನಿಗೂ ಕೂಡ ಶಿವಣ್ಣ ಸ್ಪೂರ್ತಿಯ ಚಿಲುಮೆ ಎಂದರು ಕೂಡ ಅತಿ ಶಯೋಕ್ತಿ ಎನಿಸಲಾರದು.

ಸದ್ಯಕ್ಕೆ ಶಿವಣ್ಣ ನಟನೆಯ ಹಲವಾರು ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿದ್ದು, ಅದರಲ್ಲಿಯೂ ವಿಶೇಷವಾಗಿ ಘೋಸ್ಟ್, ಬೈರತಿ ರಣಗಲ್ಲು(Bhairathi Ranagallu) ಸಿನಿಮಾಗಳು ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟು ಹಾಕಿದ್ದು ಎರಡು ಸಿನಿಮಾಗಳು ಕೂಡ ಮುಂದಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗುವುದರಲ್ಲಿ ಯಾವುದೇ ಅನುಮಾನವೇ ಎಂದು ಹೇಳಬಹುದಾಗಿದೆ. ಇಂದಿನ ಲೇಖನಿಯ ಪ್ರಮುಖ ವಿಷಯವಾಗಿರುವ ಶಿವಣ್ಣ ಹಾಗೂ ಗೀತಕ್ಕ ಅವರ ನಡುವಿನ ವಯಸ್ಸಿನ ಅಂತರವನ್ನು ತಿಳಿದುಕೊಳ್ಳೋಣ ಬನ್ನಿ.

1986 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಇವರಿಬ್ಬರ ವಿನ ವಯಸ್ಸಿನ ಅಂತರ 10 ವರ್ಷಗಳಾಗಿವೆ. ಶಿವಣ್ಣ 60 ವರ್ಷದವರಾಗಿದ್ದರೆ ಗೀತಕ್ಕ 50 ವರ್ಷದವರಾಗಿದ್ದಾರೆ. ಕಳೆದ ಸಾಕಷ್ಟು ದಶಕಗಳಿಂದಲೂ ಕೂಡ ಇಬ್ಬರು ಎಲ್ಲರೂ ಮೆಚ್ಚುವಂತೆ ದಾಂಪತ್ಯ ಜೀವನವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದು ಶಿವಣ್ಣ(Shivarajkumar) ಒಬ್ಬ ತಂದೆ ನಿರ್ಮಾಪಕ ನಟನಾಗಿ ಎಲ್ಲಾ ಜವಾಬ್ದಾರಿಯನ್ನು ಕೂಡ ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ ಎನ್ನುವುದು ಶ್ಲಾಘನೀಯ ವಿಚಾರವಾಗಿದೆ.

Leave a Comment

error: Content is protected !!