ಗೋಲ್ಡನ್ ಸ್ಟಾರ್ ದಂಪತಿಗಳಿಂದ ನಟಿ ಅಮೂಲ್ಯ ಅವರ ಅವಳಿ ಮಕ್ಕಳಿಗೆ ಅಮೂಲ್ಯವಾದ ಗೋಲ್ಡ್ ಗಿಫ್ಟ್ !

ನಟಿ ಅಮೂಲ್ಯ ಅವರು ಚೆಲುವಿನ ಚಿತ್ತಾರ, ನಾನು ನನ್ನ ಕನಸು, ಚೈತ್ರದ ಚಂದ್ರಮ, ಶ್ರಾವಣಿ ಸುಬ್ರಮಣ್ಯ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡ ಜನತೆಯ ಪ್ರೀತಿಯನ್ನು ಗೆದ್ದು, ಕರ್ನಾಟಕದ ಮನೆ ಮಗಳಂತೆ ಆಗಿದ್ದಾರೆ. ಉದ್ಯಮಿಯಾದ ಜಗದೀಶ್ ಅವರನ್ನು ಕೈ ಹಿಡಿಯುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಮೂಲ್ಯ ಅವರು ನಂತರದಲ್ಲಿ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸಿಲ್ಲ. ಆದರೆ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡುತ್ತಲೇ ಬಂದಿದ್ದಾರೆ.

ಅವಳಿ ಗಂಡು ಮಕ್ಕಳ ತಾಯಿಯಾದ ಅಮೂಲ್ಯ ಅವರು, ಅವರ ಮುದ್ದಾದ ಕಂದಮ್ಮಗಳ ಫೋಟೋಗಳನ್ನು ಅಭಿಮಾನಿಗಳಿಗಾಗಿ ಶೇರ್ ಮಾಡುತ್ತಿದ್ದರು. ವೀವ್ಸ್, ಲೈಕ್ಸ್, ಕಮೆಂಟ್ಸ್ ಗಳು ಜೋರಾಗಿಯೇ ಇರುತ್ತಿತ್ತು. ಮಕ್ಕಳು ಜನಸಿ 7 ತಿಂಗಳ ಬಳಿಕ ಗುರೂಜಿಗಳ ಆಶೀರ್ವಾದದೊಂದಿಗೆ ಗುರುಗಳು ಸೂಚಿಸಿದಂತೆ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನೆರವೇರಿದ್ದ ನಾಮಕರಣ ಶಾಸ್ತ್ರದ ಅದ್ದೂರಿ ಕಾರ್ಯಕ್ರಮದ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದೆ.

ನಟಿ ಅಮೂಲ್ಯ ಅವರ ಅವಳಿ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಕನ್ನಡ ಚಿತ್ರರಂಗದ ನಟ ನಟಿಯರ ದಂಡೇ ಹರಿದು ಬಂದಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪ ದಂಪತಿಗಳು ಅಂದದ ಉಡುಗೆ ಉಟ್ಟು ಬಂದಿದ್ದರು. ತನ್ನ ಮಗಳೊಂದಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಬಂದಿದ್ದರು. ಕನ್ನಡದ ಡಿ ಬಾಸ್ ದರ್ಶನ್ ಕೂಡ ಉಪಸ್ಥಿತರಿದ್ದು, ಅಮೂಲ್ಯ ದಂಪತಿ ಹಾಗೂ ಮಕ್ಕಳೊಂದಿಗೆ ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಮಳೆ ಚಿತ್ರದಲ್ಲಿ ಅಮೂಲ್ಯ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದ ಲವ್ಲಿ ಸ್ಟಾರ್ ಪ್ರೇಮ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅದ್ದೂರಿ ಚಿತ್ರದ ಬಹದ್ದೂರ್, ಧ್ರುವ ಸರ್ಜಾ ಅಮೂಲ್ಯ ಅವರ ಅವಳಿ ಮಕ್ಕಳನ್ನು ಮುದ್ದಾಡಿದ್ದಾರೆ.

ನೆರೆದಿದ್ದ ಸಂಬಂಧಿಕರು ಕನ್ನಡ ಕಲಾವಿದರು ಅಮೂಲ್ಯ ಅವರ ಅವಳಿ ಮಕ್ಕಳಿಗೆ ಚಂದದ ಉಡುಗೊರೆಯನ್ನು ನೀಡುತ್ತಾ, ಉಜ್ವಲ ಭವಿಷ್ಯಕ್ಕಾಗಿ ಆಶೀರ್ವಾದ ಮಾಡಿ ಹೋಗಿದ್ದಾರೆ. ಚೆಲುವಿನ ಚಿತ್ತಾರ, ಶ್ರಾವಣಿ ಸುಬ್ರಮಣ್ಯ, ಖುಷಿಖುಷಿಯಾಗಿ, ಮುಗುಳುನಗೆ ಚಿತ್ರಗಳಲ್ಲಿ ಗಣೇಶ್ ಅವರೊಂದಿಗೆ ಪರದೆಯ ಮೇಲೆ ಕಾಣಿಸಿಕೊಂಡ ನಟಿ ಅಮೂಲ್ಯ ಅವರ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಆಗಮಿಸಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅವರ ಪತ್ನಿ ಶಿಲ್ಪ ಅವರು ಸುಂದರವಾಗಿ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ, ಅವಳಿ ಗಂಡು ಮಕ್ಕಳಿಗೆ ಕಾಸ್ಟ್ಲಿ ಗಿಫ್ಟನ್ನು ನೀಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅವರು ಒಂದು ಮಗುವಿನ ಕುತ್ತಿಗೆಗೆ ಗೋಲ್ಡ್ ಚೈನ್ ಅನ್ನು ಉಡುಗೊರೆಯಾಗಿ ಹಾಕಿದ್ದರೆ, ಅವರ ಪತ್ನಿ ಶಿಲ್ಪಾ ಅವರು ಇನ್ನೊಂದು ಮಗುವಿನ ಎರಡು ಕೈಗಳಿಗೆ ಗೋಲ್ಡ್ ಬಳೆಗಳನ್ನು ತೊಡಿಸಿದರು. ಪುಟ್ಟ ಮಕ್ಕಳ ದೇಹದ ಮೇಲೆ ಬಂಗಾರವು ಮತ್ತಷ್ಟು ಪ್ರಕಾಶಮಾನವಾಗಿ ಮಿನುಗುತ್ತಿತ್ತು. ನಾಮಕರಣದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳು ಖುಷಿಯಾಗಿದ್ದಾರಂತೆ.

Leave a Comment

error: Content is protected !!