Jaggesh: ಅಪ್ಪು ರವರ ಜೊತೆಗೆ ಬರ್ತಡೇ ಆಚರಿಸಿಕೊಳ್ಳುತ್ತಿರುವ ಜಗ್ಗೇಶ್ ರವರ ನಿಜವಾದ ವಯಸ್ಸು ಇಲ್ಲಿದೆ ನೋಡಿ.

Jaggesh Age ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿರುವ ನಟರಲ್ಲಿ ನವರಸ ನಾಯಕ ಜಗ್ಗೇಶ್(Jaggesh) ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಸಹ ಕಲಾವಿದನಾಗಿ ಚಿತ್ರರಂಗದಲ್ಲಿ ತಮ್ಮ ಜರ್ನಿಯನ್ನು ಪ್ರಾರಂಭಿಸುವ ಅವರು ನಂತರ ಖಳನಾಯಕನಾಗಿ ಹಾಸ್ಯ ಕಲಾವಿದನಾಗಿ ತಮ್ಮ ಸಿನಿಮಾ ಜರ್ನಿಯನ್ನು ಮುಂದುವರಿಸುತ್ತಾರೆ‌. ನಂತರ ನಾಯಕನಟನಾಗಿ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಾರೆ.

ಆರಂಭದಲ್ಲಿ ಯಶಸ್ಸು ಸಿಗದಿದ್ದರೂ ಕೂಡ ಕಂಡುಬಂದಂತಹ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು ನಂತರ ಒಂದಾದ ಮೇಲೆ ಒಂದರಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾರೆ. ಪ್ರತಿಭೆ ಇದ್ದರೆ ಯಾರು ಕೂಡ ನಾಯಕ ನಟ ಆಗಬಹುದು ಎಂಬುದನ್ನು ಜಗ್ಗೇಶ್(Jaggesh) ಕನ್ನಡ ಚಿತ್ರರಂಗಕ್ಕೆ ಸಾಬೀತುಪಡಿಸಿ ತೋರಿಸುತ್ತಾರೆ. ಇನ್ನು ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಕೂಡ ನವರಸ ನಾಯಕ ಜಗ್ಗೇಶ್ ಹೆಸರು ಸಂಪಾದಿಸಿದ್ದಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಬಿಜೆಪಿ(BJP) ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜಗ್ಗೇಶ್ ಅವರ ಹೆಸರು ಕೇಳಿ ಬರುತ್ತಿದ್ದು ಹುಟ್ಟು ಹಬ್ಬದ ಮುಂಚಿತವಾಗಿ ನರೇಂದ್ರ ಮೋದಿ ಅವರೊಂದಿಗೆ ವಿಶೇಷವಾಗಿ ಇತ್ತೀಚಿಗಷ್ಟೇ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಸುದ್ದಿಯಾಗಿದ್ದರು. ಇನ್ನು ಇಷ್ಟೊಂದು ವರ್ಷಗಳಿಂದ ಚಿತ್ರರಂಗದಲ್ಲಿ ಇರುವಂತಹ ಜಗ್ಗೇಶ್(Jaggesh) ಅವರ ವಯಸ್ಸು ಎಷ್ಟು ಎಂಬುದಾಗಿ ಹಲವರಲ್ಲಿ ಗೊಂದಲ ಇರಬಹುದು.

ಬನ್ನಿ ಗೆಳೆಯರೇ ನಟ ಜಗ್ಗೇಶ್ ಅವರ ನಿಜವಾದ ವಯಸ್ಸು ಎಷ್ಟು ಎಂದು ತಿಳಿಯೋಣ. ಮೂರು ದಶಕಗಳಿಗಿಂತಲೂ ಅಧಿಕಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಜಗ್ಗೇಶ್ ರವರ ನಿಜವಾದ ವಯಸ್ಸು 60 ವರ್ಷ. ಪುನೀತ್ ರಾಜಕುಮಾರ್(Puneeth Rajkumar) ಅವರೊಂದಿಗೆ ಹುಟ್ಟು ಹಬ್ಬದ ದಿನಾಂಕವನ್ನು ಹಂಚಿಕೊಳ್ಳುವ ನಟ ಜಗ್ಗೇಶ್ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಹಲವಾರು ಕೊಡಗೆಗಳನ್ನು ನೀಡಿದ್ದಾರೆ ಎಂಬುದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕಾಗುತ್ತದೆ.

Leave a Comment

error: Content is protected !!