Shivanna: ಅಪ್ಪು ಬರ್ತಡೆ ದಿನ ತಮ್ಮನನ್ನು ನೆನೆಸಿಕೊಂಡು ಶಿವಣ್ಣ ಕಣ್ಣೀರು ಹಾಕಿ ಬರೆದಿದ್ದೇನು ಗೊತ್ತಾ?

Puneeth Rajkumar ಮಾರ್ಚ್ 17 ಬಂತೆಂದರೆ ಸಾಕು ಪ್ರತಿಯೊಬ್ಬರೂ ಕೂಡ ಸದಾಶಿವನಗರದಲ್ಲಿರುವ ಅಪ್ಪು(Appu) ಅವರ ಮನೆಯ ಎದುರುಗಡೆ ತಮ್ಮ ನೆಚ್ಚಿನ ನಟನನ್ನು ಕಾಣಬೇಕು ಅವರಿಗೆ ಜನ್ಮದಿನದ ಶುಭಾಶಯಗಳು ತಿಳಿಸಬೇಕು ಎನ್ನುವುದಾಗಿ ಲಕ್ಷ ಸಾವಿರ ಸಂಖ್ಯೆಯಲ್ಲಿ ಕೂಡುತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಈ ಸಂಭ್ರಮ ಸಂಪೂರ್ಣವಾಗಿ ಕಳೆಹೀನವಾಗಿ ಹೋಗಿದೆ.

ಇನ್ನು ಈ ಬಾರಿ ಕೂಡ ಕುಟುಂಬಸ್ಥರು ಸೇರಿ ಅಪ್ಪು ಅವರ ಸಮಾಧಿ ಬಳಿ ಪೂಜೆ ಸಲ್ಲಿಸಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಇನ್ನು ಹುಟ್ಟು ಹಬ್ಬದ ಸಂದರ್ಭದಲ್ಲಿ ಪುನೀತ್ ರಾಜಕುಮಾರ್(Puneeth Rajkumar) ಅವರ ಅಣ್ಣ ನಾಗಿರುವ ಶಿವರಾಜ್ ಕುಮಾರ್(Shivaraj Kumar) ಅವರು ಸೋಶಿಯಲ್ ಮೀಡಿಯಾದಲ್ಲಿ ಭಾವುಕರಾಗಿ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಏನಿತ್ತು ಎಂಬುದನ್ನು ತಿಳಿಯೋಣ ಬನ್ನಿ.

” ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಹರಿಯುತ್ತಿತ್ತು. ನಿನ್ನ ಕಣ್ಣಲ್ಲಿರುವ ಹೊಳಪು ನೀನು ಪವರ್ ಸ್ಟಾರ್ ಆಗೋದನ್ನ ಆವಾಗ್ಲೇ ಹೇಳ್ತಾ ಇತ್ತು. ನೀನು ನಕ್ಕರೆ ಎಲ್ಲರೂ ನಗ್ತಾ ಇದ್ರು ನೀನು ಕುಣಿದರೆ ಎಲ್ಲರೂ ಕೂಡ ರೋಮಾಂಚಿತರಾಗುತ್ತಿದ್ದರು. ಮನೆಗೆ ಬಂದ ನೆಂಟರುಗಳಿಗೆಲ್ಲ ನೀನೇ ಬೇಕಿತ್ತು. ಅಂತಹ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮುಂದೆ ಬಂದು ಹೆಮ್ಮರವಾಗಿ ಕೋಟ್ಯಾಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ.

ನಿನ್ನನ್ನು ಎತ್ತಿ ಆಡಿಸಿದ ಅಣ್ಣನಾಗಿ ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ ನಿನ್ನ ಕೆಲಸಗಳನ್ನು ನೋಡಿ ಮೆಚ್ಚಿಕೊಂಡ ಕನ್ನಡಿಗನಾಗಿ ಹಬ್ಬ ಯಾವುದೇ ಆಗಿದ್ರು ನಿನ್ನ ಹೆಸರಿನಲ್ಲಿ ಪಟಾಕಿ ಹಚ್ಚುವ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಾ ಇದೀನಿ ನೀನು ಹುಟ್ಟಿದ್ದೆ ಒಂದು ಉತ್ಸವ ಬೆಳೆದಿದ್ದೆ ಇತಿಹಾಸ ನಿನ್ನ ಜೀವನ ಒಂದು ದಂತಕಥೆ. ನಿನ್ನ ನೆನಪುಗಳು ಎಂದಿಗೂ ಅಮರ ಜನ್ಮದಿನದ ಶುಭಾಶಯಗಳು ಅಪ್ಪು. ಈ ರೀತಿ ಭಾವನಾತ್ಮಕವಾಗಿ ಪತ್ರವನ್ನು ಬರೆಯುವ ಮೂಲಕ ತಮ್ಮ ಸಹೋದರ ಅಪ್ಪು(Appu) ಅವರಿಗೆ ಜನ್ಮದಿನದ ಶುಭಾಶಯಗಳು ಕೋರಿದ್ದಾರೆ.

Leave a Comment

error: Content is protected !!