ಮುಗಿಲು ಮುಟ್ಟಿದ ದರ್ಶನ್ ಅವರ ಕಾಟೇರ ಕ್ರೇಜ್, ಎಲ್ಲಾ ಥಿಯೇಟರ್ ಗಳು ಹೌಸ್ ಫುಲ್! ಟಿಕೆಟ್ ಸಿಗದೇ ಅಭಿಮಾನಿಗಳ ಪರದಾಟ

ಸ್ನೇಹಿತರೆ ಸದ್ಯ ರಾಜ್ಯದಾದ್ಯಂತ ಎಲ್ಲೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಟೇರ ಸಿನಿಮಾದ ಹಾವಳಿ, 28ನೇ ತಾರೀಕು ಡಿಸೆಂಬರ್ 2023ರ ಮಧ್ಯರಾತ್ರಿ ಬಿಡುಗಡೆಗೊಂಡಂತಹ ಈ ಸಿನಿಮಾ ಅಂದಿನಿಂದ ಇಂದಿನವರೆಗೂ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದ್ದು, ಅಭಿಮಾನಿಗಳು ತನ್ನ ನೆಚ್ಚಿನ ದಾಸನನ್ನು ಕಣ್ತುಂಬಿಕೊಳ್ಳಲು ಟಿಕೆಟ್ ಸಿಗದೆ ಪರದಾಡುವಂತಹ ಪರಿಸ್ಥಿತಿಯು ಎದುರಾಗಿದೆ. ಈ ಕಾರಣದಿಂದ ಸಿನಿಮಾ ಮಂದಿರಗಳಲ್ಲಿ ಸಾಕಷ್ಟು ಶೋ ಗಳನ್ನು ಹೆಚ್ಚಿಸಲಾಗಿದೆ ಒಂದೊಂದು ಥಿಯೇಟರ್ ನಲ್ಲಿಯೂ ಐದಾರು ಶೋಗಳನ್ನು ಹಾಕಲಾಗಿದೆ.

ಹೌದು ಗೆಳೆಯರೇ ಚೌಕ ಮತ್ತು ರಾಬರ್ಟ್ ಎರಡು ಸಿನಿಮಾಗಳಲ್ಲಿ ದರ್ಶನವರೊಂದಿಗೆ ತರುಣ್ ಸುದೀರ್ ಕೆಲಸ ಮಾಡಿದ್ದರು, ಅದರಂತೆ ಮತ್ತೊಮ್ಮೆ ತರುಣ್ ದರ್ಶನ (Darshan) ಅವರಿಗೆ ಆಕ್ಷನ್ ಕಟ್ ಹೇಳಿದ್ದು, ಸಿನಿಮಾಗೆ ರಾಕ್ ಲೈನ್ ವೆಂಕಟೇಶ್ ಹಣ ಹೂಡಿಕೆ ಮಾಡಿದ್ದಾರೆ‌. ಹಿಂದೆಂದೂ ಕಾಣಿಸಿಕೊಳ್ಳದಂತಹ ಖಡಕ್ ರಾಜ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಿಂಚಿದ್ದು ಅವರ ಅಭಿನಯಕ್ಕೆ ಶಿಕ್ಷಕರು ಮನಸೋತು ಹೋಗಿದ್ದಾರೆ ಸಿನಿಮಾದ ಕುರಿತು ಅಭಿಮಾನಿಗಳು ಹಾಗೂ ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿತ್ತು, ದಿನದಿಂದ ದಿನಕ್ಕೆ ಚಿತ್ರ ಭರ್ಜರಿ ಗೆಲುವನ್ನು ಸಾಧಿಸುತ್ತಿದೆ.

ಕೇವಲ ಕನ್ನಡ ಭಾಷೆಯಲ್ಲಿ ಬಿಡುಗಡೆಗೊಂಡಿರುವಂತಹ ಕಾಟೇರ ಸಿನಿಮಾ ಕರ್ನಾಟಕದಾದ್ಯಂತ ಮೊದಲ ದಿನ ಬರೋಬ್ಬರಿ 389 ಸಿಂಗಲ್ ಸ್ಕ್ರೀನ್ ಗಳು ಹಾಗೂ 72 ಮಲ್ಟಿಪ್ಲೆಕ್ಸ್ (multiplex) ಗಳಲ್ಲಿ, 1670 ಪ್ರದರ್ಶನಗಳನ್ನು ಕಂಡಿದ್ದು ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಇನ್ನಷ್ಟು ಶೋಗಳನ್ನು ಏರಿಸುವಂತೆ ಒತ್ತಾಯ ಮಾಡುತ್ತಿದ್ದಾರೆ.

ಇದರ ಜೊತೆ ಜೊತೆಗೆ ಮೊದಲ ದಿನವೇ ಬರೋಬ್ಬರಿ 19.72 ಕೋಟಿ ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ಕಾಟೇರ ಚಿತ್ರ(Katera movie) ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಾ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡುತ್ತ ಅದ್ಭುತ ಯಶಸ್ಸನ್ನು ಕಾಣುತ್ತಿರುವ ಈ ಸಿನಿಮಾವನ್ನು ಬೇರೆ ಭಾಷೆಗೂ ಡಬ್ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕುತ್ತಿದೆ.

ಇದೆಲ್ಲದರ ನಡುವೆ ನೆನ್ನೆ ವೀರೇಶ್ ಸಿನಿಮಾ ಮಂದಿರಕ್ಕೆ(Veeresh cinema theater) ಆಗಮಿಸಿದಂತಹ ತರುಣ್ ಸುಧೀರ್ ಅವರು ಸಿನಿಮಾ ಮಂದಿರ ಹೌಸ್ ಫುಲ್ ಆಗಿರುವಂತಹ ಬೋರ್ಡ್(Housefull board) ಹಿಡಿದು ಖಡಕ್ಕಾಗಿ ಫೋಟೋಗೆ ಪೋಸ್ ನೀಡಿ, ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ವಿಶೇಷವಾಗಿ ದರ್ಶನ್ ಅವರ ಈ ವರ್ಷದ ಎರಡನೇ ಸಿನಿಮಾ ಇದಾಗಿದ್ದು

ಎರಡನೇ ಬಾರಿ ತನ್ನ ಪ್ರೀತಿಯ ದಾಸನನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಖುಷಿಯಿಂದ ಸಿನಿಮಾ ನೋಡಲು ಬಂದಂತಹ ವೀಕ್ಷಕರಿಗೆ ಮುದ್ದೆ ನಾಟಿ ಕೋಳಿ ಸಾರು ಹಾಗೂ ಚಿಕ.ನ್ ಬಿರಿಯಾನಿ ಮುಂತಾದ ವಿಶೇಷ ಅಡುಗೆಗಳನ್ನು ಉಣಬಡಿಸಿ ಡಿ ಬಾಸ್ ಚಿತ್ರವನ್ನು ಹಬ್ಬದಂತೆ ಆಚರಿಸಿದ್ದಾರೆ.

Leave a Comment

error: Content is protected !!