Pathaan: 1000 ಕೋಟಿ ಗಳಿಸಿದ್ರು ಕೂಡ ಶಾರುಖ್ ಖಾನ್ ರವರ ಪಠಾಣ್ ಸಿನಿಮಾದ ಬಗ್ಗೆ ಕಿಚ್ಚ ಹೇಳಿದ್ದು ಶಾ’ ಕಿಂಗ್!

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಹಿಂದಿ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಕೂಡ ದೊಡ್ಡಮಟ್ಟದ ಬೇಡಿಕೆಯನ್ನು ಹಾಗೂ ಅಭಿಮಾನಿ ಬಳಗವನ್ನು ಹೊಂದಿರುವಂತಹ ನಟ. ಸದ್ಯಕ್ಕೆ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಾಗೂ ಉಪೇಂದ್ರ(Upendra) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಕಬ್ಜಾ ಸಿನಿಮಾ(Kabzaa Film) ಇದೇ ಮಾರ್ಚ್ 17ಕ್ಕೆ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಈಗಾಗಲೇ ಕಬ್ಜ ಸಿನಿಮಾದ ಟ್ರೈಲರ್ ಅನ್ನೋ ಎಲ್ಲರೂ ಮೆಚ್ಚಿಕೊಂಡಿದ್ದು ಸಿನಿಮಾ ಪರಭಾಷೆಗಳಲ್ಲಿ ಕೂಡ ದೊಡ್ಡ ಮಟ್ಟದ ಬುಕಿಂಗ್ ಅನ್ನು ಪಡೆಯುತ್ತಿದ್ದು ಬಿಡುಗಡೆಯಾದ ನಂತರ ಬೇರೆ ಭಾಷೆಯ ಪ್ರೇಕ್ಷಕರನ್ನು ಕೂಡ ಸಿನಿಮಾ ಇನ್ನಷ್ಟು ಆಕರ್ಷಿಸಲಿದೆ ಎನ್ನುವ ಲೆಕ್ಕಾಚಾರವನ್ನು ಈಗಾಗಲೇ ಬಾಕ್ಸ್ ಆಫೀಸ್ ಪಂಡಿತರು ಹಾಕಿದ್ದಾರೆ. ಯಲಕಿದ ಪ್ರಮುಖವಾಗಿ ಕಬ್ಜಾ(Kabzaa) ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಬಾಲಿವುಡ್ ಸಿನಿಮಾದ ಕುರಿತಂತೆ ಕಿಚ್ಚ(Kiccha) ನೀಡಿರುವ ಹೇಳಿಕೆ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ನಿಮಗೆಲ್ಲರಿಗೂ ಈಗಾಗಲೇ ಗೊತ್ತೇ ಇರುವ ಹಾಗೆ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪಠಾಣ್(Pathaan) ಸಿನಿಮಾ ಬಿಡುಗಡೆಯಾಗಿ ಈಗಾಗಲೇ ವಿಶ್ವ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಸಂಪೂರ್ಣವಾಗಿ ನೆಲಕಚ್ಚಿದ ಬಾಲಿವುಡ್ ಚಿತ್ರರಂಗವನ್ನು ಪಠಾಣ್ ಸಿನಿಮಾ ಮೇಲಕ್ಕೆ ಎತ್ತಿದೆ. ಈ ಕುರಿತಂತೆ ಕಿಚ್ಚ ಸುದೀಪ್(Kiccha Sudeep) ಕೂಡ ತಮ್ಮದೇ ಆದ ರೀತಿಯಲ್ಲಿ ಚಿತ್ರದ ಕುರಿತಂತೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶಾರುಖ್ ಖಾನ್(Shah Rukh Khan) ಹಾಗೂ ದೀಪಿಕಾ ಪಡುಕೋಣೆ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಪಠಣ ಸಿನಿಮಾ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ಡೈನಾಮಿಕ್ಸ್ ಅನ್ನು ತಂದಿದೆ ಎಂಬುದಾಗಿ ಚಿತ್ರದ ಗುಣಗಾನವನ್ನು ಕಿಚ್ಚ ಸುದೀಪ್(Kiccha Sudeep) ಮಾಡಿದ್ದಾರೆ. ಇನ್ನು ಕಬ್ಜಾ ಸಿನಿಮಾದಲ್ಲಿ ಸುದೀಪ್ ರವರು ಭಾರ್ಗವ್ ಬಕ್ಷಿ(Bhargav Bakshi) ಎನ್ನುವ ಪೊಲೀಸ್ ಕಮಿಷನರ್ ಪಾತ್ರವನ್ನು ಮಾಡುತ್ತಿದ್ದು ಎಲ್ಲರೂ ಕೂಡ ಈ ಪಾತ್ರವನ್ನು ವೀಕ್ಷಿಸಲು ಕಾತುರರಾಗಿದ್ದಾರೆ.

Leave a Comment

error: Content is protected !!