Kiccha Sudeep: ಎಲೆಕ್ಷನ್ ಪ್ರಚಾರದ ಸಂದರ್ಭದಲ್ಲಿಯೇ ಕೆಲಸ ಮಾಡದಿದ್ದರೆ ಒದ್ದು ಓಡಿಸಿ ಎಂದ ಕಿಚ್ಚ ಸುದೀಪ್!

Kiccha Sudeep ಕರ್ನಾಟಕದ ಯುವಕರಲ್ಲಿ ಅತ್ಯಂತ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವಂತಹ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಕಿಚ್ಚ ಸುದೀಪ್(Kiccha Sudeep) ರವರು ಈಗಾಗಲೇ ಹಲವಾರು ಬಿಜೆಪಿ(BJP) ಪಕ್ಷದ ಅಭ್ಯರ್ಥಿಗಳ ಪರವಾಗಿ ತಮ್ಮ ಬೆಂಬಲವನ್ನು ಸೂಚಿಸಿ ಪ್ರಚಾರವನ್ನು ನಡೆಸುತ್ತಿದ್ದಾರೆ.

ಆರಂಭಿಕ ದಿನಗಳಲ್ಲಿ ಕಿಚ್ಚ ಸುದೀಪ್ ರವರು ರಾಜಕೀಯವಾಗಿ ಪ್ರಚಾರ ನಡೆಸುತ್ತಿದ್ದಾರೆ ಎನ್ನುವ ಸುದ್ದಿಯ ಬಗ್ಗೆ ಪ್ರತಿಯೊಬ್ಬರು ಕೂಡ ಅಸಮಾಧಾನವನ್ನು ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ತಮ್ಮ ತಮ್ಮ ಊರಿನಲ್ಲಿ ಕೂಡ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಆದರೆ ಈಗ ನೀವು ನೋಡುತ್ತಿರುವ ಹಲವಾರು ವಿಡಿಯೋಗಳಲ್ಲಿ ಕೂಡ ಅವರು ಪ್ರತಿಯೊಬ್ಬ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಲು ಅವರ ಊರಿಗೆ ಬಂದಾಗ ಸಾವಿರಾರು ಜನರ ಸಂಖ್ಯೆಯಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡಲು ಅವರು ಸೇರುತ್ತಿರುವ ರೀತಿಯಲ್ಲಿ ತಿಳಿಯುತ್ತದೆ ಅವರು ಕಿಚ್ಚ ಸುದೀಪ್ ರವರನ್ನು ಎಷ್ಟು ಪ್ರೀತಿಸುತ್ತಿದ್ದಾರೆ ಎಂಬುದು. ಕಿಚ್ಚ ಸುದೀಪ್(Kiccha Sudeep) ಕೂಡ ತಮ್ಮ ಅಭಿಮಾನಿಗಳ ಪರವಾಗಿ ಕಾಳಜಿಯನ್ನು ಹೊಂದಿದ್ದಾರೆ.

ಯಾಕೆಂದರೆ ಇಂದು ಪ್ರಚಾರ ಮಾಡುತ್ತಿರುವ ಸಂದರ್ಭದಲ್ಲಿ ನಿಮಗೆ ಒಳ್ಳೆಯದಾಗಬೇಕು ಎನ್ನುವ ಕಾರಣಕ್ಕಾಗಿ ಸರಿಯಾದ ಅಭ್ಯರ್ಥಿಯ ಪರವಾಗಿ ನಾನು ಪ್ರಚಾರ ಮಾಡುತ್ತಿದ್ದೇನೆ. ಒಂದು ವೇಳೆ ಕೆಲಸ ಮಾಡಿಲ್ಲ ಅಂದ್ರೆ ಒದ್ದು ಓಡಿಸಿ ಎನ್ನುವುದಾಗಿ ನೇರವಾಗಿ ಕಿಚ್ಚ ಸುದೀಪ್(Sudeep) ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.

Leave a Comment

error: Content is protected !!