Leelavathi Health: ನಟಿ ಲೀಲಾವತಿಯವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

Leelavathi Health: ಸ್ನೇಹಿತರೆ, ಕನ್ನಡ ಚಿತ್ರ ರಂಗದ ಹಿರಿಯ ನಟಿ ಲೀಲಾವತಿ(Leelavathi) ಹಲವು ವರ್ಷಗಳಿಂದ ವಯೋ ಸಹಜ ಕಾಯಿ.ಲೆಯಿಂದ ಬಳಲುತ್ತಿದ್ದರು. ಆದರೆ ಇತ್ತೀಚಿನ ದಿನದಲ್ಲಿ ಲೀಲಾವತಿ ಅಮ್ಮನವರ ಆರೋಗ್ಯ ದಿನೇದಿನೇ ಕ್ಷೀಣಿಸುತ್ತಿದ್ದು, ಕನ್ನಡ ಚಿತ್ರರಂಗದ ಸಾಕಷ್ಟು ನಟ ನಟಿಯರು ಅವರ ಮನೆಗೆ ಭೇಟಿ ನೀಡಿ ಆರೋಗ್ಯ ಕ್ಷೇಮವನ್ನು ವಿಚಾರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಹೀಗಿರುವಾಗ ಮೊನ್ನೆಯಷ್ಟೇ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ

ಆಗಿರುವಂತಹ ಸಿದ್ದರಾಮಯ್ಯನವರು ನೆಲಮಂಗಲದ ಸೋಲದೇವನ (Soladevanahalli) ಹಳ್ಳಿಯಲ್ಲಿ ಇರುವಂತಹ ಲೀಲಾವತಿ (Leelavathi) ಮತ್ತು ವಿನೋದ್ ರಾಜಕುಮಾರ್ ಅವರ ನಿವಾಸಕ್ಕೆ ತೆರಳಿ ಅವರ ಆರೋಗ್ಯ ಕ್ಷೇಮವನ್ನು ವಿಚಾರಿಸುವುದರ ಜೊತೆಗೆ ದೊಡ್ಡ ಆಸ್ಪತ್ರೆಗೆ ಸೇರಿಸಿ ಅವರು ಗುಣಮುಖರಾಗುವಂತೆ ಚಿಕಿತ್ಸೆ ನೀಡುವುದಾಗಿ ಸಿದ್ದರಾಮಯ್ಯನವರು ಮಗನಿಗೆ ಭರವಸೆ ನೀಡಿದ್ದಾರೆ.

ಬ್ಲಾಕ್ ಅಂಡ್ ವೈಟ್ ಸಿನಿಮಾಗಳ ಕಾಲದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವಂತಹ ನಟಿ ಲೀಲಾವತಿ ಅಮ್ಮನವರು ಎಂತಹ ಪಾತ್ರ ನೀಡಿದರು ಬಹಳ ಲೀಲಾಜಾಲವಾಗಿ ಅಭಿನಯಿಸುತ್ತಾ ಬರೋಬ್ಬರಿ 6 ನೂರಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದಾರೆ. ಅಂತಹ ನಟಿಯ ಮಗನಾದ ವಿನೋದ್ ರಾಜಕುಮಾರ್ ಅವರಿಗೆ ಚಿತ್ರರಂಗದಲ್ಲಿ ಎದುರಾದ ಕೆಲ ಕಿರುಕು.ಳಕ್ಕೆ ಅಂಜಿ ಚಿತ್ರರಂಗದ ಸಹವಾಸವೇ ಬೇಡವೆಂದು

ಬಣ್ಣದ ಬದುಕಿನಿಂದ ಅಂತರ ಕಾಯ್ದುಕೊಂಡ ಅಮ್ಮ ಮಗನೊಂದಿಗೆ ಬೆಂಗಳೂರಿಗೆ ಸಮೀಪವಿರುವ ನೆಲಮಂಗಲದ ಸೋಲದೇವನ ಹಳ್ಳಿಯಲ್ಲಿ ಜಮೀನನ್ನು ಖರೀದಿಸಿ ಮನೆ ಒಂದನ್ನು ಕಟ್ಟಿಕೊಂಡು ಕೃಷಿ ಮಾಡುತ್ತಾ ಅದರಿಂದ ಬಂದಂತಹ ಅರ್ಧದಷ್ಟು ಹಣದಲ್ಲಿ ಜನ ಸೇವೆ ಮಾಡುತ್ತಾ ಕಾಲ ಕಳೆದರೂ. ಅದರಿಗ ತಮ್ಮ 87ನೇ ವಯಸ್ಸಿನಲ್ಲಿ ಲೀಲಾವತಿ(Leelavathi) ಅಮ್ಮನವರ ಆರೋಗ್ಯ ದಿನೇ ದಿನೇ ತೀವ್ರ ಹದಗಿಡುತ್ತಿದ್ದು,

ಅವರ ಯೋಗ ಕ್ಷೇಮ ವಿಚಾರಿಸಲು ಗಣ್ಯ ವ್ಯಕ್ತಿಗಳು ಮನೆಗೆ ಬಂದು ಹೋಗುತ್ತಿದ್ದಾರೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ(siddaramaiah) ನವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವ ಲೀಲಾವತಿ ಅಮ್ಮನವರನ್ನು ಭೇಟಿ ಮಾಡಲು ಬಂದು 15ಕ್ಕೂ ಹೆಚ್ಚು ದಿನಗಳಿಂದ ಹಾಸಿಗೆ ಹಿಡಿದಿರುವ ಲೀಲಾವತಿಯವರ ಎದ್ದು ಓಡಾಡಲಾಗದ ಪರಿಸ್ಥಿತಿಯನ್ನು ಕಂಡು ಬೇಸರ ವ್ಯಕ್ತಪಡಿಸುತ್ತಾ ಅವರನ್ನು ತಕ್ಷಣವೇ ದೊಡ್ಡ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಅದರ ಸಂಪೂರ್ಣ ಚಿಕಿತ್ಸೆಯ ಖರ್ಚು ವೆಚ್ಚವನ್ನು ಸರ್ಕಾರವೇ ಬಯಸುವುದಾಗಿ ತಿಳಿಸುತ್ತಿದ್ದೇನೆ ಎಂದಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!