Weekend With Ramesh: ಈ ಬಾರಿ ವೀಕೆಂಡ್ ವಿತ್ ರಮೇಶ್ ನಲ್ಲಿ ಅತಿಥಿಗಳಾಗಿ ಬಂದಿರುವ ಮಂಡ್ಯ ರಮೇಶ್ ಹಾಗೂ ಅವಿನಾಶ್ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ?

Mandaya Ramesh Avinash ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕುತ್ತಿದೆ ಹಾಗೂ ಪ್ರತಿಯೊಬ್ಬರ ಮೆಚ್ಚುಗೆಗೆ ಕೂಡ ಕಾರಣವಾಗುತ್ತಿದೆ. ಈಗಾಗಲೇ ಪ್ರತಿಯೊಬ್ಬರ ಜೀವನಕ್ಕೆ ಪಾಠ ಹೇಳಿಕೊಡುವಂತಹ ಹಲವಾರು ಎಪಿಸೋಡ್ಗಳು ಕೂಡ ಇದರಲ್ಲಿ ಪ್ರಸಾರವಾಗಿವೆ.

ಅದರಲ್ಲೂ ವಿಶೇಷವಾಗಿ ಕೆಲವರಿಗೆ ದತ್ತಣ್ಣನ ಎಪಿಸೋಡ್ ಇಷ್ಟವಾದರೆ ಇನ್ನು ಕೆಲವರಿಗೆ ಡಾಲಿ ಧನಂಜಯ್(Daali Dhananjay) ಎಪಿಸೋಡ್ ಇಷ್ಟವಾಗುತ್ತದೆ. ಸಾಕಷ್ಟು ಜನರಿಗೆ ರಮ್ಯಾ ಹಾಗೂ ಪ್ರಭುದೇವ ಅವರ ಜೀವನ ಚರಿತ್ರೆ ಕೂಡ ಇಷ್ಟವಾಗಿದೆ. ಡಾ ಸಿ ಎನ್ ಮಂಜುನಾಥ್ ಅವರ ಡಾಕ್ಟರ್ ಜೀವನದ ಸಾರಾಂಶ ಕೂಡ ಇದೇ ವೀಕೆಂಡ್ ವೇದಿಕೆಯ ಮೇಲೆ ಸಾಧಕರ ಸೀಟಿನಲ್ಲಿ ಕುಳಿತ ನಂತರವೇ ಅರ್ಥವಾಗಿದ್ದು.

ಇನ್ನು ಈ ಬಾರಿಯ ವೀಕೆಂಡ್ ವಿತ್ ರಮೇಶ್ ವೇದಿಕೆಗೆ ಸಾಧಕರ ಸೀಟಿನಲ್ಲಿ ಕೂರಲು ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾಗಿರುವಂತಹ ಹಾಸ್ಯ ಕಲಾವಿದ ಮಂಡ್ಯ ರಮೇಶ್(Mandya Ramesh) ಹಾಗೂ ಪೋಷಕ ಕಲಾವಿದ ಅವಿನಾಶ್(Avinash) ಅವರು ಆಗಮಿಸುತ್ತಿದ್ದಾರೆ. ಇಂದಿನ ಈ ಲೇಖನಿಯಲ್ಲಿ ನಿಮಗೆ ನಾವು ಇವರಿಬ್ಬರು ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರಲು ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಎನ್ನುವುದರ ಕುರಿತಂತೆ ತಿಳಿಸಲು ಹೊರಟಿದ್ದೇವೆ.

ಹೌದು ಮಿತ್ರರೇ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳಲು ಮಂಡ್ಯ ರಮೇಶ್ ಅವರು ಮೂರರಿಂದ ನಾಲ್ಕು ಲಕ್ಷ ರೂಪಾಯಿ ಹಾಗೂ ಅವಿನಾಶ್ ಅವರು ಆರರಿಂದ ಎಂಟು ಲಕ್ಷ ರೂಪಾಯಿ ಸಂಬಾವನೆಯನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇವರಿಬ್ಬರ ಸಂಚಿಕೆಯನ್ನು ನೋಡಲು ನೀವು ಎಷ್ಟು ಕಾತರರಾಗಿದ್ದೀರಿ ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!