Kiccha Sudeep: ಕಿಚ್ಚ ಸುದೀಪ್ ರವರ ಜೊತೆಗಿನ ಪ್ರೀತಿ ಬಗ್ಗೆ ನಟಿ ಮೀನಾ ಏನು ಹೇಳಿದ್ರು ಗೊತ್ತಾ?

Meena ಟೈಟಲ್ ಅನ್ನು ನೋಡಿ ಬೈದುಕೊಳ್ಳುವುದಕ್ಕೆ ಹೋಗಬೇಡಿ ಇದು ಒಂದು ಕಾಲದಲ್ಲಿ ನಡೆದಿರುವಂತಹ ಘಟನೆಯಾಗಿದ್ದು ಅದರ ಕುರಿತಂತೆ ಇಂದು ನಾವು ಈ ಲೇಖನಿಯಲ್ಲಿ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ಹೌದು ಕಿಚ್ಚ ಸುದೀಪ್(Kiccha Sudeep) ಹಾಗೂ ನಟಿ ಮೀನಾ(Actress Meena) ಅವರ ಕುರಿತಂತೆ ಕೇಳಿ ಬಂದಿರುವ ಈ ಸುದ್ದಿ ಒಂದು ಕಾಲದಲ್ಲಿ ನಡೆದಿರುವುದಂತೂ ನಿಜ.

ಆರಂಭಿಕ ದಿನಗಳಲ್ಲಿ ಕಿಚ್ಚ ಸುದೀಪ್(Kiccha Sudeep) ರವರು ಅತ್ಯಂತ ಹ್ಯಾಂಡ್ಸಮ್ ಹಾಗೂ ಯುವ ಸಿನಿಮಾ ಪ್ರೇಮಿಗಳ ನೆಚ್ಚಿನ ನಾಯಕ ನಟನಾಗಿದ್ದರು. ನಟಿ ಮೀನಾ(Meena Sagar) ಅವರು ಕೂಡ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ಇನ್ನು ಇವರಿಬ್ಬರು ಒಟ್ಟಾಗಿ ಕೂಡ ಮೈ ಆಟೋಗ್ರಾಫ್ ಪ್ಲೀಸ್ ಮತ್ತು ಸ್ವಾತಿಮುತ್ತು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಸತತವಾಗಿ 2 ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದಾಗ ಆ ನಾಯಕ ಹಾಗೂ ನಾಯಕನಟಿಯ ನಡುವೆ ಏನೋ ಇದೆ ಎಂಬುದಾಗಿ ಪ್ರತಿ ಚಿತ್ರರಂಗದಲ್ಲಿಯೂ ಕೂಡ ಗಾಳಿ ಸುದ್ದಿಗಳು ಓಡಾಡುತ್ತವೆ ಇಲ್ಲೂ ಕೂಡ ಹಾಗೆ ಆಗಿತ್ತು. ಆಗ ನಟಿ ಮೀನಾ ಅವರೇ ಮುಂದೆ ಬಂದು ಈ ಕುರಿತಂತೆ ಸ್ಪಷ್ಟೀಕರಣವನ್ನು ನೀಡಿದರು.

ನಾನು ಹಾಗೂ ಸುದೀಪ್(Sudeep) ಇಬ್ಬರೂ ಕೂಡ ಸಾಕಷ್ಟು ಒಳ್ಳೆಯ ಸ್ನೇಹಿತರು ಅವರ ಜೊತೆಗೆ ಸಿನಿಮಾದಲ್ಲಿ ನಟಿಸಲು ಹಾಗೂ ಕೆಲಸ ಮಾಡಲು ನನಗೆ ತುಂಬಾನೇ ಇಷ್ಟ ಅದನ್ನು ನೀವು ಬೇರೆ ರೀತಿಯಲ್ಲಿ ಬಿಂಬಿಸುವ ಅಗತ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ. ಮಹಿಳೆಯರಿಗೆ ಗೌರವ ನೀಡುವ ವಿಚಾರದಲ್ಲಿ ಕಿಚ್ಚ ಸುದೀಪ್ ರವರನ್ನು ನೋಡಿ ಪ್ರತಿಯೊಬ್ಬರೂ ಕೂಡ ಕಲಿಯಬೇಕು ಎನ್ನುವುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Leave a Comment

error: Content is protected !!