Narthan: ಯಶ್ ಬಿಟ್ಟು ಶಿವಣ್ಣನಿಗೆ ಮಣೆ ಹಾಕಿದ ನರ್ತನ್. ಅನೌನ್ಸ್ ಆಯ್ತು ಭೈರತಿ ರಣಗಲ್.

Bhairathi Ranagal ರಾಕಿಂಗ್ ಸ್ಟಾರ್ ಯಶ್(Rocking Star Yash) ನಾಯಕ ನಟನಾಗಿ ನಟಿಸಲಿರುವ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಸಾಕಷ್ಟು ಪುಕಾರುಗಳು ಎದ್ದಿದ್ದವು. ಅವುಗಳಲ್ಲಿ ನರ್ತನ್(Narthan) ನಿರ್ದೇಶನದಲ್ಲಿ ಮೂಡಿಬರುವಂತಹ ಸಿನಿಮಾ ಕೂಡ ಒಂದು ಎಂಬುದಾಗಿ ಮಾತನಾಡಲಾಗುತ್ತಿತ್ತು. ಆದರೆ ಈಗ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾವನ್ನು ನರ್ತನ್ ಅವರು ನಿರ್ದೇಶನ ಮಾಡುತ್ತಾರೋ ಇಲ್ಲವೋ ಆದರೆ ನರ್ತನ ಅವರ ಮುಂದಿನ ಸಿನಿಮಾ ಮಾತ್ರ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ಅಲ್ಲ ಎಂಬುದು ಖಾತ್ರಿ ಯಾಗಿದೆ.

ಹೌದು ಗೆಳೆಯರೇ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣ ನಾಯಕ ನಟರಾಗಿ ನಟಿಸಿರುವಂತಹ ಮಫ್ತಿ(Mufti) ಸಿನಿಮಾದಲ್ಲಿ ನಿರ್ದೇಶಕನಾಗಿ ಪಾದಾರ್ಪಣೆ ಮಾಡುವ ನರ್ತನ್ ರವರು ಮೊದಲ ಸಿನಿಮಾದಲ್ಲಿ ಇಬ್ಬರು ನಟರುಗಳನ್ನು ಸರಿಯಾಗಿ ನಿಭಾಯಿಸಿಕೊಂಡು ಸೂಪರ್ಹಿಟ್ ಸಿನಿಮಾವನ್ನು ನೀಡುತ್ತಾರೆ. ಹೀಗಾಗಿ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಡೆದುಕೊಂಡು ಬರುತ್ತಿತ್ತು. ಯಶ್(Yash) ಅವರ ಜೊತೆಗೆ ತಮ್ಮ ಮುಂದಿನ ಸಿನಿಮಾವನ್ನು ಮಾಡಲಿದ್ದಾರೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿತ್ತು.

Shivanna Bhairathi Ranagal

ಆದರೆ ಅದು ಇಂದು ಅಧಿಕೃತವಾಗಿಯೇ ಸುಳ್ಳಾಗಿದೆ ಎಂದು ಹೇಳಬಹುದಾಗಿದೆ. ಹೌದು ನರ್ತನ್ ರವರು ತಮ್ಮ ಮುಂದಿನ ಸಿನಿಮಾ ಭೈರತಿ ರಣಗಲ್ ಅನ್ನು ಕರುನಾಡ ಚಕ್ರವರ್ತಿ ಶಿವಣ್ಣನಿಗಾಗಿ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಮಫ್ತಿ ಸಿನಿಮಾದ ಹಿಂದಿನ ಭಾಗ ಹಾಗೂ ಬೈರತಿ ರಣಗಲ್(Bhairathi Ranagal) ಪಾತ್ರದ ಆಧಾರಿತವಾಗಿರುವ ಸಿನಿಮಾ ಆಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಶಿವಣ್ಣ ಮತ್ತೊಮ್ಮೆ ಬೈರತಿ ರಣಗಲ್ ಪಾತ್ರದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.

ಇನ್ನು ಈ ಸಿನಿಮಾ ಗೀತಾ ಪ್ರೊಡಕ್ಷನ್ಸ್ ನಲ್ಲಿ ಮೂಡಿ ಬರುತ್ತಿರುವಂತಹ ಎರಡನೇ ಸಿನಿಮಾ ಆಗಿದೆ. ನರ್ತನ್ ಹಾಗೂ ಶಿವಣ್ಣ(Shivanna) ಕಾಂಬಿನೇಷನ್ ಮತ್ತೊಮ್ಮೆ ಬಾಕ್ಸ್ ಆಫೀಸ್ ನಲ್ಲಿ ಗುಡುಗಲು ಸಜ್ಜಾಗಿ ನಿಂತಿದೆ. ಸಿನಿಮಾದ ಮೇಲೆ ನಿರೀಕ್ಷೆ ಸಾಕಷ್ಟು ಹೆಚ್ಚಾಗಿದ್ದು ನಿರೀಕ್ಷೆಯಂತೆ ಸಿನಿಮಾ ಮೂಡಿಬರಲಿ ಎಂಬುದಾಗಿ ಹಾರೈಸೋಣ. ಭೈರತಿ ರಣಗಲ್ ಸಿನಿಮಾದ ಬಗ್ಗೆ ನಿಮಗಿರುವಂತಹ ನಿರೀಕ್ಷೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!