Ind Vs Aus: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಬೆನ್ನು ಬಿಡಲಿಲ್ಲ ಗ್ರಹಚಾರ.

Virat Kohli ವಿರಾಟ್ ಕೊಹ್ಲಿ(Virat Kohli) ಅತ್ಯಂತ ನತದೃಷ್ಟ ಕ್ರಿಕೆಟಿಗ ಎಂದರೆ ತಪ್ಪಾಗಲಾರದು ಯಾಕೆಂದರೆ ಕೆಲವು ವರ್ಷಗಳ ಹಿಂದಷ್ಟೇ ನೋಡಿದರೆ ರನ್ ಗಳಿಸಲು ಪರದಾಡಿ ಶೂನ್ಯಕ್ಕೆ ಸತತವಾಗಿ ಔಟ್ ಆಗಿದ್ದರು. 2019 ರಲ್ಲಿ ಕೊನೆಯ ಬಾರಿಗೆ ಶತಕವನ್ನು ಬಾರಿಸಿ ಅದಾದ ನಂತರ ಒಂದೇ ಒಂದು ಶತಕವನ್ನು ಬಾರಿಸಲು ಸಾಧ್ಯವಾಗಿರಲಿಲ್ಲ. ನಾಯಕತ್ವದಿಂದ ಕೂಡ ಕೆಳಗಿಳಿಯ ಬೇಕಾದಂತಹ ಪರಿಸ್ಥಿತಿ ಎದುರಾಗಿತ್ತು. ತಮ್ಮ ಕ್ರಿಕೆಟ್ ಜೀವನದಲ್ಲಿ ದೊಡ್ಡ ಮಟ್ಟದ ಅಧೋ ಗತಿಯನ್ನು ಕಂಡಿದ್ದರು.

ಅದಾದ ನಂತರ ಕಳೆದ ಟಿ20 ವಿಶ್ವಕಪ್ ನಲ್ಲಿ ಹಾಗೂ ಏಷ್ಯಾ ಕಪ್ ನಲ್ಲಿ ಮತ್ತೊಮ್ಮೆ ಮರಳಿ ಫಾರ್ಮ್ ಗೆ ಬರುವ ಮೂಲಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಲೋಕಕ್ಕೆ ತಾನು ಯಾರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು. ಈಗ ಮತ್ತೆ ಟೆಸ್ಟ್ ಕ್ರಿಕೆಟ್ ನಲ್ಲಿ ಪದೇಪದೇ ವಿರಾಟ್ ಕೊಹ್ಲಿ ವಿಫಲರಾಗುತ್ತಿರುವುದು ಸ್ವತಹ ಅವರೇ ಹತಾಶರಾಗುವಂತೆ ಮಾಡಿದೆ.

ಕೇವಲ ಇಷ್ಟು ಸಾಲದು ಎನ್ನುವಂತೆ ಈಗ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಔಟ್ ಅಲ್ಲದಿದ್ದರೂ ಕೂಡ ಗ್ರಹಚಾರ ಕೆಟ್ಟವರಂತೆ ಔಟ್ ಆಗಿದ್ದಾರೆ. ಕ್ರಿಕೆಟ್ ನಿಯಮದ ಪ್ರಕಾರ ಪ್ಯಾಡ್ ಹಾಗೂ ಬ್ಯಾಟ್ ಗೆ ಏಕಕಾಲದಲ್ಲಿ ಬೌಲ್ ತಾಗಿದರೆ ಅನುಮಾನದ ದೃಷ್ಟಿಯಲ್ಲಿ lbw ನಾಟ್ ಔಟ್ ಅನ್ನು ನೀಡಲಾಗುತ್ತದೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್(Border Gavaskar Trophy) ಟೆಸ್ಟ್ ನ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಈ ನಿಯಮ ಲಗತ್ತಾಗಿಲ್ಲ.

ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ(Virat Kohli) ಅವರ ಅದೃಷ್ಟ ಮತ್ತೊಮ್ಮೆ ಕೈ ಕೊಡುತ್ತಿರುವುದು ಹಾಗೂ ಈ ರೀತಿಯ ಔಟ್ ಅಲ್ಲದಿದ್ದರೂ ಕೂಡ ಸನ್ನಿವೇಶಗಳು ಎದುರಾಗುತ್ತಿರುವುದು ನಿಜಕ್ಕೂ ಕೂಡ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಾಕಷ್ಟು ಬೇಸರವನ್ನು ತಂದಿದೆ. ವಿಶ್ವ ಕ್ರಿಕೆಟ್ನ ದಿಗ್ಗಜರು ಕೂಡ ವಿರಾಟ್ ಕೊಹ್ಲಿ ಅವರಿಗೆ ಈ ಔಟ್ ಅಲ್ಲದ ಔಟ್ ಅನ್ನು ನೀಡಿರುವುದು ಅಂಪೈರ್ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದ್ದಾರೆ.

Leave a Comment

error: Content is protected !!