Pawan Kalyan: ಬ್ರೋ ದಿ ಅವತಾರ್ ಫಿಲಂನಲ್ಲಿ ನಟಿಸಲು ಪವನ್ ಕಲ್ಯಾಣ್ ಪಡೆದ ಸಂಭಾವನೆ ಕೇಳಿದರೆ ನೀವು ಕೂಡ ಬೆರಗಾಗ್ತೀರಾ.

Pawan Kalyan ತೆಲುಗು ಚಿತ್ರರಂಗದ ಪವರ್ ಸ್ಟಾರ್ ಆಗಿರುವಂತಹ ಪವನ್ ಕಲ್ಯಾಣ್(Pawan Kalyan) ರವರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಇಡೀ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವ ನಟರಲ್ಲಿ ಪವನ್ ಕಲ್ಯಾಣ್ ಕೂಡ ಒಬ್ಬರಾಗಿದ್ದಾರೆ.

ಇತ್ತೀಚಿನ ಅವರ ಸಿನಿಮಾಗಳು ಸಾಕಷ್ಟು ಸೋಲನ್ನು ಕಂಡಿದ್ದರು ಕೂಡ ತೆಲುಗು ಚಿತ್ರರಂಗದಲ್ಲಿ ಅವರಿಗಿರುವಂತಹ ಬೇಡಿಕೆ ಹಾಗೂ ಅವರ ಸಿನಿಮಾಗಳಗಿರುವ ಬೇಡಿಕೆ ಇನ್ನೂ ಕೂಡ ಕಡಿಮೆಯಾಗಿಲ್ಲ. ಅವರ ಕೊನೆಯ ಸಿನಿಮಾ ಭೀಮ್ಲಾನಾಯಕ್(Bheemla Nayak) ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿತ್ತು. ಈಗಾಗಲೇ ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ.

ಇತ್ತೀಚಿಗಷ್ಟೇ ಅವರ ಸಂಬಂಧಿ ಆಗಿರುವಂತಹ ಸಾಯಿ ಧರ್ಮತೇಜ(Sai Dharmateja) ನಾಯಕತ್ವದಲ್ಲಿ ಮೂಡಿ ಬರುತ್ತಿರುವ ಬ್ರೋ(Bro The Avatar) ಸಿನಿಮಾದಲ್ಲಿ ಈ ಹಿಂದೆ ನಟಿಸಿರುವಂತೆ ದೇವರ ಪಾತ್ರದಲ್ಲಿ ಪವನ್ ಕಲ್ಯಾಣ್ ರವರು ಕಾಣಿಸಿಕೊಳ್ಳುತ್ತಿದ್ದು ಇದು ತಮಿಳು ಸಿನಿಮಾ ಆಗಿರುವಂತಹ ವಿನೋದಯ ಸೀತಂ ಎನ್ನುವ ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾದಲ್ಲಿ ನಟಿಸಲು ಪವನ್ ಕಲ್ಯಾಣ್ ರವರು 20 ದಿನಗಳ ಕಾಲ್ ಶೀಟ್ ಅನ್ನು ನೀಡಿದ್ದರು.

ಕೇವಲ 20 ದಿನಗಳ ಕಾಲ ಸೀಟ್ ಗಾಗಿ ಪವನ್ ಕಲ್ಯಾಣ್ ರವರು ಭರ್ಜರಿ 45 ಕೋಟಿ ರೂಪಾಯಿ ಹಣವನ್ನು ಸಂಭಾವನೆ ರೂಪದಲ್ಲಿ ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ತೆಲುಗು ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವವರಲ್ಲಿ ಪವನ್ ಕಲ್ಯಾಣ್ ರವರ ಹೆಸರು ಕೂಡ ಆಗ್ರಪಂಕ್ತಿಯಲ್ಲಿದೆ.

Leave a Comment

error: Content is protected !!