Prabhas: ಸಲಾರ್ ಸಿನಿಮಾದ ಸಂಭಾವನೆ ವಿಚಾರದಲ್ಲಿ ಭಾರಿ ಬದಲಾವಣೆ ಮಾಡಿಕೊಂಡ ಪ್ರಭಾಸ್.

Prabhas ತೆಲುಗು ಚಿತ್ರರಂಗದ ನಾಯಕ ನಟ ಪ್ರಭಾಸ್ ಅವರು ಮೊದಲ ಬಾರಿಗೆ ಕನ್ನಡ ಚಿತ್ರರಂಗದ ಫಿಲಂ ಪ್ರೊಡಕ್ಷನ್ ಕಂಪನಿ ಆಗಿರುವಂತಹ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವಂತಹ ಸಲಾರ್(Salaar) ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಸಿನಿಮಾ ರಿಜಿಸ್ಟರ್ ಆಗಿರೋದು ಕನ್ನಡ ಫಿಲಂ ಚೇಂಬರ್ ನಲ್ಲಿ.

ಇನ್ನು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರಬಹುದು ಸಾಹೋ ರಾಧೇಶ್ಯಾಮ್ ಹಾಗೂ ಇತ್ತೀಚಿಗಷ್ಟೇ ಬಿಡುಗಡೆ ಆಗಿರುವಂತಹ ಆದಿಪುರುಷ್ ಸಿನಿಮಾ ಕೂಡ ಸಂಪೂರ್ಣವಾಗಿ ನೆಲಕಚ್ಚಿದೆ. ಬಾಹುಬಲಿ ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಾಯಕ ನಟರಲ್ಲಿ ಪ್ರಭಾಸ್(Prabhas) ಮೊದಲನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದರು.

ಆದಿಪುರುಷ್(Adipurush) ಸಿನಿಮಾದಲ್ಲಿ ಕೂಡ 125 ಕೋಟಿ ಸಂಭಾವನೆ ಪಡೆದುಕೊಂಡಿದ್ದ ಪ್ರಭಾಸ್ ಸಲಾರ್ ಸಿನಿಮಾದಲ್ಲಿ ಮಾತ್ರ ಸಂಭಾವನೆಯನ್ನು 100 ಕೋಟಿ ರೂಪಾಯಿಗೆ ಇಳಿಸಿಕೊಂಡಿದ್ದಾರೆ. ಇದಕ್ಕೆ ಒಂದು ಕಾರಣ ಕೂಡ ಇದೆ. ಆ ಕಾರಣ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಈಗಾಗಲೇ ಈ ಹಿಂದಿನ ಮೂರು ಸಿನಿಮಾಗಳನ್ನು ಕೂಡ ನಷ್ಟವೇ ಆಗುತ್ತಿದ್ದು ಅದೇ ಕಾರಣಕ್ಕಾಗಿ ಸಲಾರ್ ಸಿನಿಮಾದ ವಿಚಾರದಲ್ಲಿ ಸಂಭಾವನೆಯನ್ನು ಕಡಿಮೆ ಮಾಡಿಕೊಂಡು ನಂತರ ಬಂದಂತಹ ಲಾಭದಲ್ಲಿ ಪಾಲನ್ನು ಪಡೆದುಕೊಳ್ಳುವ ಯೋಚನೆಯನ್ನು ಪ್ರಭಾಸ್ ರವರು ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಕಾರಣದಿಂದಾಗಿ ಚಿತ್ರತಂಡದ ಮೇಲೆ ಸ್ವಲ್ಪಮಟ್ಟಿಗೆ ಭಾರ ಕಡಿಮೆಯಾಗಬಹುದು ಎಂಬುದು ಅವರ ಅನಿಸಿಕೆ ಆಗಿರಬಹುದು.

Leave a Comment

error: Content is protected !!