Shakthi Yojane: ಉಚಿತ ಬಸ್ ಯೋಜನೆಯಲ್ಲಿ ನಡೆಯುತ್ತಿರುವ ತಪ್ಪು ಘಟನೆಗಳಿಗೆ ಸಚಿವರು ನೀಡಿದ ಪರಿಹಾರವೇನು ಗೊತ್ತಾ?

Shakthi Yojane ಈಗಾಗಲೇ ರಾಜ್ಯ ಸರ್ಕಾರ ನಿಮಗಿಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕದಲ್ಲಿ ಕರ್ನಾಟಕ ರಾಜ್ಯದ ಒಳಗೆ ಓಡಾಡಲು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು(Free Bus Service) ನೀಡಲಾಗಿದೆ. ಇದನ್ನು ಜೂನ್ 11ರಿಂದ ಪ್ರಾರಂಭಿಸಿದ್ದು ಶಕ್ತಿ ಯೋಜನೆಯ ಹೆಸರಿನಲ್ಲಿ ಇದನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದೆ.

ಈ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಮಹಿಳೆಯರಿಗೆ ಜಾರಿಗೆ ತಂದ ಮೇಲಿಂದ ಕೋಟ್ಯಾಂತರ ಮಹಿಳೆಯರು ಇದರ ಲಾಭವನ್ನು ಪಡೆದು ದೈನಂದಿನ ಸಂಚಾರದಲ್ಲಿ ಈ ಯೋಜನೆಯ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಮಿತಿಮೀರಿದೆ ಎಂದು ಹೇಳಬಹುದಾಗಿದೆ.

ಹೌದು ಮಿತ್ರರೇ ಉಚಿತ ಬಸ್ ಯೋಜನೆಯ ರೂಪದಲ್ಲಿ ಕೇವಲ ಸೀಟಿನಲ್ಲಿ ಕುಳಿತುಕೊಳ್ಳುವಂತಹ ಮಹಿಳೆಯರು ಮಾತ್ರವಲ್ಲದೆ ನಿಂತುಕೊಂಡು ಹೌಸ್ ಫುಲ್ ಬಸ್ಗಳಲ್ಲಿ ಓಡಾಡುವಂತಹ ಮಹಿಳೆಯರ ಸಂಖ್ಯೆ ಕೂಡ ಹೆಚ್ಚಾಗಿದ್ದು ಇದರಿಂದಾಗಿ 50 ಪ್ರತಿಶತ ಪುರುಷರಿಗೆ ಸೀಟಿಂಗ್ ವ್ಯವಸ್ಥೆ ಎಲ್ಲೂ ಕೂಡ ಕಂಡು ಬರುತ್ತಿಲ್ಲ. ಇದಕ್ಕಾಗಿ ಸಾರಿಗೆ ಸಚಿವ ಆಗಿರುವಂತಹ ರಾಮಲಿಂಗ ರೆಡ್ಡಿ(Ramalinga Reddy) ಅವರು ಒಂದು ಸಲಹೆಯನ್ನು ನೀಡಿದ್ದಾರೆ.

50 ಪ್ರತಿಶತ ಸೀಟಿಂಗ್ ವ್ಯವಸ್ಥೆಯನ್ನು ಪುರುಷರಿಗೆ ನೀಡಬೇಕು ಹಾಗೂ ಅದಕ್ಕಿಂತಲೂ ಪ್ರಮುಖವಾಗಿ ವಾರಂತ್ಯದಲ್ಲಿ ಹಾಗೂ ವಾರದ ದಿನದಲ್ಲಿ ಉಚಿತ ಬಸ್ ಪ್ರಯಾಣವನ್ನು ಪಡೆದುಕೊಳ್ಳುವಂತಹ ವ್ಯವಸ್ಥೆಯನ್ನು ಹೊಸ ನಿಯಮಗಳ ಅನುಸಾರವಾಗಿ ಜನರಿಗೆ ತಲುಪುವಂತೆ ಮಾಡಬೇಕು ಎಂಬುದಾಗಿ ರಾಮಲಿಂಗ ರೆಡ್ಡಿ ಹೇಳಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವ ಬದಲಾವಣೆಯನ್ನು ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!