Ragini: ಯಾವ ಹೀರೋಯಿನ್ ಗೂ ಕಡಿಮೆ ಇಲ್ಲದ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ?

Prajwal Devaraj ನಟ ಪ್ರಜ್ವಲ್ ದೇವರಾಜ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗಕ್ಕೆ 2007ರಲ್ಲಿ ಬಿಡುಗಡೆಯಾದಂತಹ ಸಿಕ್ಸರ್ ಸಿನಿಮಾದ(Sixer) ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಾರೆ. ಆರಂಭಿಕ ದಿನಗಳಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಭರವಸೆಯ ಯುವ ಉದಯೋನ್ಮುಖ ನಾಯಕ ನಟನಾಗಿ ತಮ್ಮನ್ನು ತಾವು ರೂಪಿಸಿಕೊಳ್ಳುತ್ತಾರೆ.

ಅದಾಗಲೇ ಅವರ ತಂದೆ ಡೈನಮಿಕ್ ಸ್ಟಾರ್ ದೇವರಾಜ್(Actor Devaraj) ಅವರು ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಪೋಷಕ ಕಲಾವಿದನಾಗಿ ಹಾಗೂ ಖಳನಾಯಕನಾಗಿ ಕೂಡ ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದರು. ಚಿತ್ರರಂಗದಲ್ಲಿ ತಂದೆಯ ಪ್ರಭಾವ ಇದ್ದರೂ ಕೂಡ ಪ್ರಜ್ವಲ್ ದೇವರಾಜ್ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದು ಮಾತ್ರ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ.

ಇನ್ನು ಪ್ರಜ್ವಲ್ ದೇವರಾಜ್ ಅವರ ದಾಂಪತ್ಯ ಜೀವನದ ಕುರಿತಂತೆ ಮಾತನಾಡುವುದಾದರೆ ರಾಗಿಣಿ(Ragini Prajwal Devaraj) ರವರನ್ನು ಚಿಕ್ಕವಯಸ್ಸಿನಿಂದಲೇ ಪ್ರೀತಿಸಿ ನಂತರ ಮನೆಯವರ ಒಪ್ಪಿಗೆಯ ಮೇರೆಗೆ ಅದ್ದೂರಿಯಾಗಿ ಎಲ್ಲರ ಸಮ್ಮುಖದಲ್ಲಿ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ನೃತ್ಯದಲ್ಲಿ ಸಾಕಷ್ಟು ಆಸಕ್ತಿಯನ್ನು ಹೊಂದಿರುವಂತಹ ರಾಗಿಣಿ ಅವರು ಕನ್ನಡ ಚಿತ್ರರಂಗದ ಯಾವುದೇ ಹೀರೋಯಿನ್ ಗೂ ಕೂಡ ಕಡಿಮೆ ಇಲ್ಲದಂತೆ ಸೌಂದರ್ಯ ವತಿಯಾಗಿದ್ದಾರೆ. ಇನ್ನು ರಾಗಿಣಿ(Ragini) ಅವರ ವಯಸ್ಸನ್ನು ನೋಡುವುದಾದರೆ 33 ವರ್ಷ ವಯಸ್ಸಾಗಿದೆ. ಇಂದಿಗೂ ಕೂಡ ಯಾವುದೇ ಸಿನಿಮಾದಲ್ಲಿ ಟಾಪ್ ನಾಯಕ ನಟಿಯ ಹಾಗೆ ನಟಿಸಬಲ್ಲಂತಹ ಸಾಮರ್ಥ್ಯ ಅವರಲ್ಲಿದೆ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ.

Leave a Comment

error: Content is protected !!