Rashmika Mandanna: ರಶ್ಮಿಕ ಮಂದಣ್ಣ ಇದುವರೆಗೂ ರಿಜೆಕ್ಟ್ ಮಾಡಿರುವ ಬಿಗ್ ಸಿನಿಮಾಗಳು ಯಾವೆಲ್ಲ ಗೊತ್ತಾ?

Rashmika Mandanna ರಶ್ಮಿಕ ಮಂದಣ್ಣ ಅವರಿಗೆ ಕೇವಲ 27 ವರ್ಷ ವಯಸ್ಸಾಗಿದ್ದು ಆದಾಗ ಕನ್ನಡ ಚಿತ್ರರಂಗದಲ್ಲಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡಮಟ್ಟದ ಬೇಡಿಕೆಯನ್ನು ಸ್ಥಾಪಿಸಿಕೊಂಡಿದ್ದು ತಮ್ಮದೇ ಆದಂತಹ ಅಭಿಮಾನಿಗಳ ಸಾಮ್ರಾಜ್ಯವನ್ನು ಹೊಂದಿದ್ದಾರೆ. ಅದಕ್ಕಾಗಿ ಎಲ್ಲರೂ ಕೂಡ ಪ್ರೀತಿಯಿಂದ ರಶ್ಮಿಕ ಮಂದಣ್ಣ(Rashmika Mandanna) ಅವರನ್ನು ನ್ಯಾಷನಲ್ ಕೃಶ್ ಎನ್ನುವುದಾಗಿ ಕರೆಯುತ್ತಾರೆ.

ಇನ್ನು ರಶ್ಮಿಕ ಮಂದಣ್ಣ(Rashmika Mandanna) ತಮ್ಮ ಸಿನಿಮಾ ಜೀವನದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಸಿನಿಮಾಗಳ ಆಫರ್ ಅನ್ನು ಕೂಡ ರಿಜೆಕ್ಟ್ ಮಾಡುವ ಮೂಲಕ ಸುದ್ದಿಯಾಗಿದ್ದರು ಆದರೆ ಅದರ ಕುರಿತಂತೆ ಸಂಪೂರ್ಣ ಮಾಹಿತಿ ಯಾರಿಗೂ ಕೂಡ ಇರಲಿಲ್ಲ ಹೀಗಾಗಿ ಬನ್ನಿ ಇಂದಿನ ಲೇಖನಿಯಲ್ಲಿ ಆ ರಿಜೆಕ್ಟ್ ಮಾಡಿರುವ ಸಿನಿಮಾಗಳು ಯಾವುವು ಎಂಬುದನ್ನು ತಿಳಿಯೋಣ.

ಮೊದಲಿಗೆ ಕಿರಿಕ್ ಪಾರ್ಟಿ ಸಿನಿಮಾದ ರಿಮೇಕ್ ಅನ್ನು ಬೇರೆ ಭಾಷೆಯಲ್ಲಿ ಮಾಡುವಾಗ ಅವರು ಒಪ್ಪಿಕೊಂಡಿರಲಿಲ್ಲ. ತೆಲುಗಿನ ಜರ್ಸಿಯನ್ನು ಹಿಂದಿಯಲ್ಲಿ ಶಾಹಿದ್ ಕಪೂರ್(Shahid Kapoor) ಅವರು ಮಾಡುವಾಗ ಆ ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ಹುಡುಕಿಕೊಂಡು ಬಂದಿದ್ದರು ಕೂಡ ತಿರಸ್ಕರಿಸಿದ್ದರು. ರಾಮ್ ಚರಣ್(Ramcharan) ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಗೇಮ್ ಚೇಂಜಸ್ ಸಿನಿಮಾದಲ್ಲಿ ಕೂಡ ಮೊದಲಿಗೆ ನಿರ್ಮಾಪಕರು ರಶ್ಮಿಕಾ ಮಂದಣ್ಣ ಅವರನ್ನು ನಾಯಕಿಯಾಗಿ ಹಾಕಿಕೊಳ್ಳಬೇಕು ಎಂಬುದಾಗಿ ಭಾವಿಸಿದ್ದರು ಆದರೆ ಅದು ಸಾಧ್ಯವಾಗಲಿಲ್ಲ.

ತಮಿಳಿನ ತಳಪತಿ ವಿಜಯ್(Thalapathy Vijay) ನಟನೆಯ ಮಾಸ್ಟರ್ ಸಿನಿಮಾದಲ್ಲಿ ಮೊದಲಿಗೆ ರಶ್ಮಿಕ ಮಂದಣ್ಣ ನಟಿಸಬೇಕು ಎಂಬುದಾಗಿ ನಿರ್ಧಾರವಾಗಿತ್ತು ಆದರೆ ಅಲ್ಲಿಂದ ಹೊರಬಂದ ರಶ್ಮಿಕ ಮಂದಣ್ಣ ನಂತರ ವಾರಿಸು ಸಿನಿಮಾದಲ್ಲಿ ನಾಯಕಿ ಆಗಿ ಅವರಿಗೆ ಕಾಣಿಸಿಕೊಳ್ಳುತ್ತಾರೆ. ಅದಾದ ನಂತರ ಹಿಂದಿಯ ಸಂಜೆ ಲೀಲಾ ಬನ್ಸಾಲಿ(Leela Bansali) ಅವರ ಆಫೀಸ್ ನಲ್ಲಿ ಕೂಡ ಹಲವಾರು ಬಾರಿ ಕಾಣಿಸಿಕೊಂಡಿದ್ದ ರಶ್ಮಿಕ ಮಂದಣ್ಣ(Rashmika Mandanna) ನಂತರ ಅವರ ಸಿನಿಮಾದಿಂದ ಹೊರಬಂದರು ಎನ್ನುವ ಸುದ್ದಿಗಳು ಕೂಡ ಓಡಾಡುತ್ತಿವೆ.

Leave a Comment

error: Content is protected !!