Actress Prema: ಆತ್ಮಹ’ ತ್ಯೆ ಬಗ್ಗೆ ಮೊದಲ ಬಾರಿಗೆ ನಟಿ ಪ್ರೇಮ ಮೌನ ಮುರಿದು ಹೇಳಿದ್ದೇನು?

Prema ನಟಿ ಪ್ರೇಮ(Prema) ಅವರು ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಯಶಸ್ವಿ ನಾಯಕ ನಟಿಯರಲ್ಲಿ ಒಬ್ಬರಾಗಿದ್ದರು ಕೂಡ ನಂತರ ಅವರು ಚಿತ್ರರಂಗದಿಂದ ಒಂದೇ ಸಮನೆ ದೂರ ಆಗಿದ್ದು ನಿಜಕ್ಕೂ ಕೂಡ ಅವರ ಅಭಿಮಾನಿಗಳು ಸೇರಿದಂತೆ ಕನ್ನಡ ಪ್ರೇಕ್ಷಕರಲ್ಲಿ ಆಶ್ಚರ್ಯದ ಮನೆ ಮಾಡಿಸಿತ್ತು. ಯಾಕೆಂದರೆ ಅಷ್ಟೊಂದು ಸಿನಿಮಾಗಳಲ್ಲಿ ಸತತವಾಗಿ ನಟಿಸಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಟಿ ಒಂದೇ ಸಮನೆ ಚಿತ್ರರಂಗದಿಂದ ಕಣ್ಮರೆಯಾದರೆ ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯ ಆಗುತ್ತದೆ.

ನಿಜಕ್ಕೂ ಕೂಡ ಒಂದು ಕಾಲದಲ್ಲಿ ಅವರಿಗೆ ಇದ್ದಂತಹ ಬೇಡಿಕೆ ಕನ್ನಡ ಚಿತ್ರರಂಗದ ಕೆಲವೊಂದು ಸ್ಟಾರ್ ನಟರಿಗೂ ಕೂಡ ಇಲ್ಲ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಮುಕ್ತವಾಗಿ ಹೇಳಿಕೊಳ್ಳಬಹುದಾಗಿದೆ. ಆದರೆ ಇದಕ್ಕೆ ನಿಜವಾಗಿಯೂ ಕಾರಣವಾಗಿದ್ದು ಅವರ ವೈಯಕ್ತಿಕ ಜೀವನ.

ಹೌದು ಮಿತ್ರರೇ ತಮ್ಮ ಮೊದಲ ವಿವಾಹ ವಿಚ್ಛೇದನದ ನಂತರ ನಿಜಕ್ಕೂ ಕೂಡ ಪ್ರೇಮ ಅವರು ಸಂಪೂರ್ಣವಾಗಿ ಮುರಿದು ಬಿದ್ದಿದ್ದರು. ಬೇರೆ ಯಾರೇ ಆಗಿದ್ರೂ ಕೂಡ ಖಂಡಿತವಾಗಿ ಅವರ ಜಾಗದಲ್ಲಿ ಇದ್ದಿದ್ರೆ ತಮ್ಮ ಜೀವನವನ್ನೇ ಮುಗಿಸಿಕೊಳ್ಳುವ ನಿರ್ಧಾರವನ್ನು ಮಾಡಿಕೊಳ್ಳುತ್ತಿದ್ದರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಪ್ರೇಮ(Prema) ಹೇಳ್ತಾರೆ.

ಆದರೆ ಈ ಸಂದರ್ಭದಲ್ಲಿ ನಾನು ನನ್ನನ್ನು ಇನ್ನೆಷ್ಟು ಗಟ್ಟಿಯಾಗಿ ಮಾಡಿಸಿಕೊಂಡು ಈ ಪರಿಸ್ಥಿತಿಯಿಂದ ನಾನು ಹೊರಬಂದೆ. ಇಂದಿನ ದಿನಗಳಲ್ಲಿ ಚಿಕ್ಕ ಚಿಕ್ಕ ವಿಚಾರಕ್ಕೂ ಕೂಡ ತಮ್ಮ ಜೀವನವನ್ನು ಮುಗಿಸಿಕೊಳ್ಳುವ ಯುವಕರಿಗೂ ಕೂಡ ಸಮಸ್ಯೆಯನ್ನು ಗೆಲ್ಲುವುದನ್ನು ಕಲಿಯಿರಿ ಸಮಸ್ಯೆಯಿಂದ ಹೆದರಿ ಓಡಿ ಹೋಗುವುದನ್ನಲ್ಲ ಎಂಬುದಾಗಿ ಪ್ರೇಮ ಅವರು ಹೇಳಿದ್ದಾರೆ.

Leave a Comment

error: Content is protected !!