Puneeth Rajkumar: ಮದುವೆಗೂ ಮುಂಚೆ ಅಪ್ಪು ಅವರ ವರ್ತನೆಯ ಬಗ್ಗೆ ನಟಿ ಪ್ರೇಮ ಹೇಳಿದ್ದೇನು ಗೊತ್ತಾ?

Prema ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ನಮ್ಮನೆಲ್ಲ ಅಗಲಿದ್ದರೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವ ಕೆಲಸವನ್ನು ಮಾಡಿ ಹೋಗಿದ್ದಾರೆ. ಇನ್ನು ಪುನೀತ್ ರಾಜಕುಮಾರ್(Puneeth Rajkumar) ಅವರ ಬಗ್ಗೆ ಕೆಲವೊಂದು ವಿಚಾರಗಳನ್ನು ನಟಿ ಪ್ರೇಮ ಇತ್ತೀಚಿಗೆ ಹಂಚಿಕೊಂಡಿದ್ದು ಅದರ ಕುರಿತಂತೆ ತಿಳಿಯೋಣ ಬನ್ನಿ.

ಹೌದು ಮಿತ್ರರೇ ನಟಿ ಪ್ರೇಮ(Prema) ಅವರು ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡುತ್ತಾ ಮದುವೆಗೂ ಮುಂಚೆ ಪುನೀತ್ ರಾಜಕುಮಾರ್(Puneeth Rajkumar) ರವರು ಹೀಗಿರಲಿಲ್ಲ ಮದುವೆಯಾದ ಮೇಲೆ ಅವರಿಗೆ ಜವಾಬ್ದಾರಿ ಹಾಗೂ ಅವರಲ್ಲಿ ಕೆಲವೊಂದು ಸಕಾರಾತ್ಮಕ ಬದಲಾವಣೆಗಳು ಬಂದವು ಎನ್ನುವುದಾಗಿ ಇದಕ್ಕೆಲ ಕಾರಣ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ರವರೇ ಎಂಬುದಾಗಿ ಹೇಳಿದ್ದಾರೆ.

ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಗ್ರಾನೈಟ್ ಬಿಸಿನೆಸ್ ಮೂಲಕ ಬಿಜಿನೆಸ್ ಮ್ಯಾನ್ ಆಗಲು ಅಪ್ಪು(Appu) ಹೊರಟಿದ್ದರು. ಈ ಸಂದರ್ಭದಲ್ಲಿ ಕೇಳಿ ಬಂದಂತಹ ಅಪವಾದಗಳಿಂದ ಅದನ್ನು ಕೂಡ ಬಿಟ್ಟು ತಾಯಿಯ ಜೊತೆಗೆ ಸಿನಿಮಾ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಜೀವನದ ಬಗ್ಗೆ ಅವರಿಗೆ ಯಾವುದೇ ಜವಾಬ್ದಾರಿಗಳು ಅಥವಾ ಕಮಿಟ್ಮೆಂಟ್ ಗಳು ಇರಲಿಲ್ಲ. ಸ್ನೇಹಿತರ ಜೊತೆಗೆ ಟ್ರಿಪ್ ಹೊಡಿದುಕೊಂಡು ಶೂ’ ಟಿಂಗ್ ಸೆಟ್ಗಳಲ್ಲಿ ಹೋಗಿ ಬರುತ್ತಾ ಇದ್ದರಂತೆ ಎಂಬುದಾಗಿ ಪ್ರೇಮ ಹೇಳಿದ್ದರು.

ಚಿತ್ರೀಕರಣದ ಸೆಟ್ ನಲ್ಲಿ ಬಂದಾಗ ಸಾಕಷ್ಟು ಕೋಪವನ್ನು ತೋರಿತ್ತಿದ್ದರು ಹಾಗೂ ಒಮ್ಮೆ ಕ್ಲೋಸ್ ಆದರೆ ಸಾಕು ಹೋಗಲೇ ಬಾರಲೇ ಎನ್ನುವುದಾಗಿ ಮಾತನಾಡಿಸುತ್ತಿದ್ದರು ಆದರೆ ಮದುವೆ ಆದ ನಂತರ ಪ್ರತಿಯೊಬ್ಬರನ್ನು ಕೂಡ ಗೌರವದಿಂದ ಮಾತನಾಡಿಸಿಕೊಳ್ಳುವುದು ಹಾಗೂ ಕೋಪವನ್ನು ಸಂಪೂರ್ಣವಾಗಿ ಕಂಟ್ರೋಲ್ ಮಾಡುತ್ತಾರೆ ಎಂಬುದಾಗಿ ಅಪ್ಪು(Appu) ಅವರಲ್ಲಿ ಆದಂತಹ ಬದಲಾವಣೆಗಳನ್ನು ನಟಿ ಪ್ರೇಮ(Actress Prema) ಹೇಳುತ್ತಾರೆ.

Leave a Comment

error: Content is protected !!