Puneeth Rajkumar: ಅಪ್ಪು ಅವರ ಇದೊಂದು ಕೊನೆಯ ಆಸೆಯನ್ನು ತೀರಿಸುವಂತಹ ಜವಾಬ್ದಾರಿ ದೊಡ್ಮನೆ ಅವರ ಮೇಲಿದೆ.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರು ಕನ್ನಡ ಚಿತ್ರರಂಗದಲ್ಲಿ ತಾವಿದ್ದಷ್ಟು ವರ್ಷಗಳ ಕಾಲ ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳು ಹಾಗೂ ಕನ್ನಡ ಪ್ರೇಕ್ಷಕರ ಮನಸ್ಸನ್ನು ರಂಜಿಸುತ್ತ ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಬಡಜನರ ಕಷ್ಟವನ್ನು ನಿವಾರಿಸುವ ಕಾರ್ಯದಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ.

ಬದುಕಿದ್ದು 46 ವರ್ಷಗಳೇ ಆಗಿದ್ದರೂ ಕೂಡ ಅವರ ಜೀವಿತಾವಧಿಯಲ್ಲಿ ಪ್ರಮುಖ ಸಮಯವನ್ನು ತಮ್ಮ ಸಿನಿಮಾಗಳ ಮೂಲಕ ಜನರಿಗೆ ಸಾಮಾಜಿಕ ಸಂದೇಶವನ್ನು ನೀಡುವ ಕೆಲಸ ಹಾಗೂ ನಿಜ ಜೀವನದಲ್ಲಿ ಸಮಾಜದಲ್ಲಿ ಬೇಕಾಗುವಂತಹ ಸಹಾಯವನ್ನು ಯಾವ ಪ್ರಚಾರವಿಲ್ಲದೆ ನೀಡುವಂತಹ ಕೆಲಸವನ್ನು ಅಪ್ಪು(Appu) ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರ ಸನ್ಮಾನಿಸಿದೆ.

ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಒಂದು ಆಸೆಯನ್ನು ಮಾತ್ರ ಅವರು ತೀರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅಭಿಮಾನಿಗಳು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಆಸೆ ಆಗಿರುವ ಅದೊಂದು ಆಸೆಯನ್ನು ತೀರಿಸಬೇಕು ಎನ್ನುವುದಾಗಿ ದೊಡ್ಮನೆ ಅವರ ಬಳಿ ಕೋರಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಆ ಆಸೆ ಯಾವುದು ಎಂಬುದನ್ನು ತಿಳಿಯೋಣ ಬನ್ನಿ.

ಅಣ್ಣಾವ್ರು ಹುಟ್ಟಿ ಬೆಳೆದಿರುವಂತಹ ಗಾಜನೂರಿನ ಮನೆಯನ್ನು ದುರಸ್ತಿಗೊಳಿಸಿ ಅದನ್ನು ಮ್ಯೂಸಿಯಂ ಮಾಡುವಂತಹ ಪುನೀತ್ ರಾಜಕುಮಾರ್(Puneeth Rajkumar) ಅವರ ಕನಸು ಕೊನೆಗೂ ಕೂಡ ತೀರಲಿಲ್ಲ ಹೀಗಾಗಿ ಅಪ್ಪು ಅವರ ಈ ಆಸೆಯನ್ನು ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಇಲ್ಲವೇ ಅವರ ಸಹೋದರರು ಇದನ್ನು ಪೂರೈಸಲಿ ಎಂಬುದಾಗಿ ಪ್ರತಿಯೊಬ್ಬ ಅಭಿಮಾನಿ ಕೂಡ ಕಾಯುತ್ತಿದ್ದಾರೆ.

Leave a Comment

error: Content is protected !!