Radhika Pandit: ಪ್ರೇಮಿಗಳ ದಿನದ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಮುದ್ದಾದ ಜೋಡಿ ಹಕ್ಕಿಗಳು ರಾಧಿಕಾ ಪಂಡಿತ್(Radhika Pandit) ಮತ್ತು ರಾಕಿಂಗ್ ಸ್ಟಾರ್ ಯಶ್ರವರು ಪ್ರತಿ ವಿಶೇಷ ದಿನವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಿ, ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಆಗಾಗ ಭಾರಿ ಸದ್ದು ಮಾಡುತ್ತಿರುತ್ತಾರೆ. ಅದರಂತೆ ಪ್ರೇಮಿಗಳ ದಿನವನ್ನು ವಿಶೇಷವಾದ ರೆಸಾರ್ಟ್ ಒಂದರಲ್ಲಿ ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿಗಳು ಆಚರಿಸಿಕೊಂಡಿದ್ದು,

ಇದರ ಕೆಲ ಸುಂದರ ಫೋಟೋಗಳನ್ನು ರಾಧಿಕಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಫೋಟೋ ಬಾರಿ ವೈರಲ್ ಆಗುತ್ತಾ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿದೆ. ಹೌದು ಗೆಳೆಯರೇ ತಮ್ಮ ತಮ್ಮ ವೃತ್ತಿ ಬದುಕಿನಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ಪರಸ್ಪರರಿಗೆ ಸಮಯ ಕೊಡುವುದನ್ನು ಎಂದಿಗೂ ಮರೆಯದಂತಹ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್(Yash and Radhika Pandit) ದಂಪತಿಗಳು ಕ್ಯಾಲೆಂಡರ್ ನಲ್ಲಿ ಬರುವಂತಹ ಎಲ್ಲಾ ವಿಶೇಷ ದಿನಗಳನ್ನು ಸೆಲೆಬ್ರೇಟ್ ಮಾಡುತ್ತಾರೆ.

ಅದರಂತೆ ತಮ್ಮ ಟಾಕ್ಸಿಕ್ ಸಿನಿಮಾ ಶೂಟಿಂಗ್ ಒತ್ತಡದ ನಡುವೆಯೂ ಹೆಂಡತಿ ಮಕ್ಕಳ ಜೊತೆಗೆ ಸಮಯ ಕಳೆಯಲು ನಿರ್ಧಾರ ಮಾಡಿ ಶೂಟಿಂಗ್ ಕೆಲಸಗಳಿಂದ ಕೊಂಚ ಬ್ರೇಕ್ ಪಡೆದು ಹೆಂಡತಿ ಹಾಗೂ ಇಬ್ಬರು ಮುದ್ದಾದ ಮಕ್ಕಳಾದ ಐರಾ ಮತ್ತು ಯಥರ್ವಾರನ್ನು ಜೊತೆಗೆ ಕರೆದುಕೊಂಡು ಹೊರ ಹೋಗಿ ವಿಶೇಷವಾದ ಖಾನಾವಳಿಗಳನ್ನು ಸವಿದಿದ್ದಾರೆ. ಫೆಬ್ರವರಿ 14 ಪ್ರೇಮಿಗಳ ದಿನ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪಾಲಿಗೆ ಮತ್ತಷ್ಟು ವಿಶೇಷ ಎಂದರೆ ತಪ್ಪಾಗಲಾರದು.

ಹೀಗಾಗಿ ಈ ದಿನವನ್ನು ಮತ್ತಷ್ಟು ಸುಂದರವಾಗಿಸಲು ಹಾರ್ಟ್ ಬಲೂನ್ ಗಳಿಂದ ಸಿಂಗರಿಸಲಾಗಿದಂತಹ ರೆಸ್ಟೋರೆಂಟ್ ಒಂದಕ್ಕೆ ರಾಧಿಕಾ ಪಂಡಿತ್(Radhika Pandit) ಹಾಗು ಯಶ್ ದಂಪತಿಗಳು ತಮ್ಮ ಮಕ್ಕಳೊಂದಿಗೆ ಭೇಟಿ ನೀಡಿ ವ್ಯಾಲೆಂಟೈನ್ಸ್ ಡೇ ಆಚರಿಸಿದ್ದಾರೆ. ಫೋಟೋದಲ್ಲಿ ನಾಲ್ವರು ಬಹಳ ಕ್ಲಾಸಿಕ್ ಆಗಿ ಕಾಣಿಸಿಕೊಂಡಿದ್ದು ರಾಧಿಕಾ ಪಂಡಿತ್ ಮತ್ತು ಯಶ್(Radika Pandit and Yash) ಇಬ್ಬರು ತಮ್ಮ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸ್ಟೈಲಿಶ್ ಆಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ‘ನನ್ನ ಶಾಶ್ವತ ಪ್ರೇಮಿಗಳೊಂದಿಗೆ ವ್ಯಾಲೆಂಟೈನ್ಸ್ ಡೇ ಲಂಚ್’ ಎಂಬ ಕ್ಯಾಪ್ಶನ್ ಬರೆದು ರಾಧಿಕಾ ತಮ್ಮ ಮುದ್ದಾದ ಚಿತ್ರಣಗಳನ್ನು ಹಂಚಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!