ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಸುಂದರ ಕುಟುಂಬ

ಸ್ನೇಹಿತರೆ ಕನ್ನಡ ಚಲನಚಿತ್ರ ರಂಗದ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿರುವಂತಹ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith Shetty) ಅವರ ಕುರಿತಾದಂತಹ ಒಂದಲ್ಲ ಒಂದು ವಿಚಾರಗಳು ಸಾಮಾಜಿಕ ಮಾಧ್ಯಮದಲ್ಲಿ ಸದಾ ಹರಿದಾಡುತ್ತಲೇ ಇರುತ್ತದೆ. ಇನ್ಸ್ಟಾಗ್ರಾಮ್ ಫೇಸ್ಬುಕ್ ಮತ್ತು ಟ್ವಿಟರ್ ನಂತರ ಜಾಲಗಳಲ್ಲಿ ತಮ್ಮ ವೈಯಕ್ತಿಕ ಹಾಗೂ ಸಿನಿಮಾ ಕುರಿತಾದ ಪೋಸ್ಟ್ಗಳನ್ನು ಹಂಚಿಕೊಳ್ತಾ ಒಡನಾಟದಲ್ಲಿ ಇರುತ್ತಾರೆ.

ಬಾಲ್ಯದಿಂದಲೂ ನಟನೆಯ ಮೇಲೆ ಬಹಳ ಆಸಕ್ತಿ ಇದ್ದ ಕಾರಣ NMAM ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಕಮ್ಯುನಿಕೇಷನ್ ಪದವಿಯನ್ನು ಅಭ್ಯಾಸಸುತ್ತಿರುವಾಗ ರಂಗಭೂಮಿಯತ್ತ ಒಲವನ್ನು ತೋರಿದರು. ವಿದ್ಯಾಭ್ಯಾಸ ಮುಗಿದ ನಂತರ ರಂಗಭೂಮಿಯಲ್ಲಿ ಹರಿಕಾರ ನಟರಾಗಿ ಎರಡು ವರ್ಷಗಳ ಕಾಲ ಕಲೆಯನ್ನು ಕಲೆತರು. ಅನಂತರ ಸಾಫ್ಟ್ವೇರ್ ಉದ್ಯಮದಲ್ಲಿ ಕೆಲಸ ಮಾಡತೊಡಗಿದರು.

ಆದರೆ ಸಿನಿಮಾ ರಂಗದಿಂದ ರಕ್ಷಿತ್ ಶೆಟ್ಟಿ(Rakshith Shetty) ಅವರಿಗೆ ಕೆಲ ಅವಕಾಶಗಳು ಹರಸಿ ಬಂದ ಕಾರಣ ತಮ್ಮ ಐಟಿ ಉದ್ಯಮದಿಂದ ಹೊರಬಂದು ನಟನಾಗಿ ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಹೌದು ಗೆಳೆಯರೇ 2010ರಲ್ಲಿ ತೆರೆಗೆ ಬಂದ ನಮ್ಮ ಏರಿಯಾದಲ್ಲಿ ಒಂದಿನ ಎಂಬ ಚಿತ್ರದ ಮೂಲಕ ನಾಯಕ ನಟನಾಗಿ ಬಣ್ಣದ ಲೋಕವನ್ನು ಪ್ರವೇಶ ಮಾಡಿದ ರಕ್ಷಿತ್ ಶೆಟ್ಟಿ(Rakshith Shetty) ಅವರಿಗೆ ಸಕ್ಸಸ್ ತಂದು ಕೊಟ್ಟಂತಹ ಸಿನಿಮಾ ಎಂದರೆ ಸಿಂಪಲ್ ಆಗಿ ಒಂದು ಲವ್ ಸ್ಟೋರಿ.

ಅನಂತರ ರಕ್ಷಿತ್ ಮತ್ತೊಂದು ಹಿಂದಿರುಗಿ ನೋಡಲೇ ಇಲ್ಲ, ತಮ್ಮದೇ ಆದ ವಿಶೇಷ ಜನರ್ರಿರುವ ಚಿತ್ರಗಳ ಮೂಲಕ ತಮ್ಮ ಅಭಿಮಾನಿ ಬಳಗವನ್ನು ರಂಜಿಸುತ್ತಾ ಹೋದರು. ಇನ್ನೂ ಕಳೆದ ಕೆಲವು ದಿನಗಳ ಹಿಂದಷ್ಟೇ ರಕ್ಷಿತ್ ಅವರು ತಮ್ಮ ಸಹ ಕುಟುಂಬದ ಸುಂದರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ರಕ್ಷಿತ್ ಅವರ ತಂದೆ ಶ್ರೀಧರ್ ಶೆಟ್ಟಿ, ತಾಯಿ ರಂಗಮ್ಮ ಶೆಟ್ಟಿ(Sridhar Shetty and Rangamma Shetty) ಸಹೋದರ ಮತ್ತು ಸಹೋದರಿಯದ ರಂಜಿತ್ ಮತ್ತು ರಶ್ಮಿ ಶೆಟ್ಟಿಯ ಜೊತೆಗೆ ಪುಟಾಣಿ ಮಕ್ಕಳು ಇರುವಂತಹ ಸುಂದರ ಫೋಟೋ ಹಂಚಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!