Ramesh Aravind: ರಮೇಶ್ ಅರವಿಂದ್ ದಂಪತಿಗಳಿಗೆ 32ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮ, ಮುದ್ದಾದ ಜೋಡಿಹಕ್ಕಿಗಳ ಫೋಟೋಸ್!

Ramesh Aravind: ತಮ್ಮ ಮನೋಜ್ಞ ನಟನೆ ಮಾತುಗಾರಿಕೆ ಹಾಗೂ ವರ್ಚಸ್ಸಿನಿಂದ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಹೆಂಗಳೆಯರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವ ರಮೇಶ್ ಅರವಿಂದ್(Ramesh Aravind) ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇರುತ್ತಾರೆ. ಹೌದು ಗೆಳೆಯರೇ ತಮ್ಮ ಮನೋಜ್ಞ ನಟನೆ ಹಾಗೂ ಯಶಸ್ವಿ ಸಿನಿಮಾಗಳಿಂದಾಗಿ ಅಭಿಮಾನಿಗಳ ಮನ ಗೆದ್ದಿದ್ದರೂ.

ಆದರೆ ಇತ್ತೀಚಿನ ದಿನಮಾನ ಗಳಲ್ಲಿ ಅದ್ಬುತವಾಗಿ ನಿರೂಪಣೆ ಮಾಡುವುದರ ಜೊತೆಗೆ ತಮ್ಮ ಸ್ಪೂರ್ತಿದಾಯಕ ಮಾತುಗಳಿಂದ ಯುವಕರಲ್ಲಿ ಭವಿಷ್ಯದ ಅರಿವು ಮೂಡಿಸುವುದರ ಜೊತೆಗೆ ಯಶಸ್ಸಿನ ಉರಿದುಂಬಿಸುತ್ತಿರುತ್ತಾರೆ. ಈಗಿರುವ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ರಮೇಶ್ ಅರವಿಂದ್ (Ramesh Aravind) ಮತ್ತು ಅವರ ಪತ್ನಿ ಅರ್ಚನಾ ಅವರ ಫೋಟೋಗಳು ಸಿಕ್ಕಾಪಟ್ಟೆ ವೈರಲಾಗುತ್ತಿವೆ. 32 ವರ್ಷಗಳ ಹಿಂದೆ ರಮೇಶ್ ಅರವಿಂದ್ ಮತ್ತು ಅರ್ಚನಾ ಇಬ್ಬರು ಪ್ರೀತಿಯಲ್ಲಿ

ಬಿದ್ದು ಮನೆಯವರೆಲ್ಲರ ಒಪ್ಪಿಗೆ ಪಡೆದು 1991 ಜುಲೈ 7ನೇ ತಾರೀಕಿನಂದು ಅಗ್ನಿ ಸಾಕ್ಷಿಯಾಗಿ ಗುರುಹಿರಿಯರ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ನಂತರ ನಟನೆ ಹಾಗೂ ನಿರ್ದೇಶನದಲ್ಲಿ ರಮೇಶ್ ಅರವಿಂದ್ (Ramesh Aravind) ಅವರಿಗೆ ಪತ್ನಿ ಅರ್ಚನಾ ಅವರ ಸಾತ್ ಸಿಗುತ್ತದೆ. ಹೀಗಾಗಿ ಸಾಕಷ್ಟು ಸಂದರ್ಶನಗಳಲ್ಲಿ ತಮ್ಮ ಈ ಮಟ್ಟದ ಯಶಸ್ಸು ಹಾಗೂ ಗೆಲುವಿಗೆ ತಮ್ಮ ಧರ್ಮಪತ್ನಿ ಅರ್ಚನಾ(Archana) ಅವರೇ ಕಾರಣ ಎಂದು ರಮೇಶ್ ಅರವಿಂದ್ ಹಲವು ಬಾರಿ ಹೇಳಿದ್ದಾರೆ.

ಹೀಗೆ ಅನೇಕರಿಗೆ ಸ್ಪೂರ್ತಿಯ ಚಿಲುಮೆಯಾಗಿರುವಂತಹ ರಮೇಶ್ ಅರವಿಂದ್ ಅವರಿಗೆ ಸ್ಪೂರ್ತಿಯಾಗಿ ಅವರ ಧರ್ಮಪತ್ನಿ ಇರುವುದು ವಿಶೇಷವೇ ಸರಿ. ಇನ್ನು ಕ್ಯಾಮೆರಾದ ಮುಂದೆ ಕಾಣಿಸಿಕೊಳ್ಳಲು ಹೆಚ್ಚು ಇಷ್ಟಪಡುವಂತಹ ಅರ್ಚನಾ ಅವರು ಸ್ವತಃ ರಮೇಶ್ ಅರವಿಂದ್ ಅವರೇ, ಒತ್ತಾಯ ಮಾಡಿದರೂ ಕೂಡ ಮಾಧ್ಯಮದ ಮುಂದೆ ಬರಲು ಇಷ್ಟಪಡುವುದಿಲ್ಲವಂತೆ.

ಹೀಗಾಗಿ ಎಲ್ಲೋ ಕೆಲವೇ ಕೆಲವು ಸಂದರ್ಶನಗಳಲ್ಲಿ ಮಾತ್ರ ರಮೇಶ್ ಅರವಿಂದ್ (Ramesh Aravind) ಅವರ ಜೊತೆಗೆ ಅರ್ಚನಾ ಕಾಣಸಿಗುತ್ತಾರೆ. ಇನ್ನೂ ವಿಶೇಷ ಸಂದರ್ಭಗಳೆಲ್ಲ ತಮ್ಮ ಪತ್ನಿಯೊಂದಿಗೆ ಫೋಟೋ ತೆಗೆಸಿಕೊಂಡು ಅದೆಲ್ಲವನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ರಮೇಶ್ ಅರವಿಂದ್ ಮತ್ತು ಅರ್ಚನಾ ದಂಪತಿಗಳ(Ramesh Aravind and Archana Couples) ಫೋಟೋ ಭಾರಿ ವೈರಲ್ ಆಗುತ್ತಿದ್ದು, ಆದರ್ಶ ದಂಪತಿಗಳಿಗೆ ಅಭಿಮಾನಿಗಳು ಲೈಕ್ಸ್ ಗಳ ಮೂಲಕ ತಮ್ಮ ಪ್ರೀತಿ ಗೌರವವನ್ನು ವ್ಯಕ್ತಪಡಿಸುತ್ತಿದ್ದಾರೆ.

Leave a Comment

error: Content is protected !!