Leelavathi: ನಟಿ ಲೀಲಾವತಿಯವರ ನಿಜವಾದ ಗಂಡ ಯಾರು ಗೊತ್ತಾ? ದಾಖಲೆ ಸಮೇತ ಹೊರಬಿತ್ತು ಅಸಲಿ ವಿಚಾರ.

Leelavathi ನಟಿ ಲೀಲಾವತಿಯವರು(Actress Leelavathi) ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುವಂತಹ ಹೆಸರಾಗಿದ್ದು ಪ್ರಾರಂಭದಲ್ಲಿ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಟಿಯಾಗಿ ಕಾಣಿಸಿಕೊಂಡು ನಂತರ ಪೋಷಕ ಕಲಾವಿದರಾಗಿ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ.

ಇನ್ನು ಅವರ ಮಗ ಆಗಿರುವಂತಹ ವಿನೋದ್ ರಾಜ್(Vinod Raj) ಕೂಡ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದ ಆದರೆ ಹೇಳಿಕೊಳ್ಳುವಷ್ಟು ಅವಕಾಶ ಅವರಿಗೆ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಸಿಗಲಿಲ್ಲ ಎನ್ನುವುದಷ್ಟೇ ಪ್ರತಿಯೊಬ್ಬರು ಬೇಸರ ಪಟ್ಟುಕೊಳ್ಳುವಂತಹ ವಿಚಾರ. ಇನ್ನು ಸಾಕಷ್ಟು ವರ್ಷಗಳಿಂದಲೂ ಕೂಡ ಲೀಲಾವತಿ ಅವರ ಪತಿ ರಾಜ್ ಕುಮಾರ್(Rajkumar) ಎನ್ನುವುದಾಗಿ ಸುದ್ದಿಗಳು ಕೇಳಿ ಬರುತ್ತಲೇ ಇತ್ತು.

ಆದರೆ ಯಾರೂ ಕೂಡ ಇದರ ಕುರಿತಂತೆ ಸರಿಯಾದ ಪುರಾವೆಗಳನ್ನು ತೋರಿಸಿರಲಿಲ್ಲ ಹೀಗಿದ್ದರೂ ಕೂಡ ಸಾಕಷ್ಟು ವರ್ಷಗಳಿಂದ ರಾಜಕುಮಾರ್(Rajkumar) ಈ ಆರೋಪಕ್ಕೆ ಒಳಗಾಗಲೇ ಬೇಕಾಯಿತು. ಬಿಳಿ ಬಟ್ಟೆಯಂತೆ ಶುಭ್ರವಾಗಿದ್ದ ಅವರ ವ್ಯಕ್ತಿತ್ವಕ್ಕೆ ಅದೊಂದು ಕಳಂಕ ಮಾತ್ರ ಯಾವತ್ತೂ ಕೂಡ ಹೋಗಲೇ ಇಲ್ಲ. ಆದರೆ ಕೊನೆಗೂ ಕೂಡ ಇದರ ಕುರಿತಂತೆ ಸರಿಯಾದ ಅಧಿಕೃತ ಮಾಹಿತಿಗಳು ದೊರಕಿದ್ದು ಲೀಲಾವತಿ ಅವರ ನಿಜವಾದ ಗಂಡ ಯಾರೆಂಬುದು ಈಗ ತಿಳಿದು ಬಂದಿದೆ.

ಹೌದು ಮಿತ್ರರೇ ನಟಿ ಲೀಲಾವತಿ ಅವರ ನಿಜವಾದ ಗಂಡ ಮಹಾಲಿಂಗ ಭಾಗವತ್(Mahalinga Bhagavath) ಎನ್ನುವುದು ಸಂಪೂರ್ಣವಾಗಿ ಅಧಿಕೃತವಾಗಿದೆ ಯಾಕೆಂದರೆ, ನಟಿ ಲೀಲಾವತಿಯವರ ತಮಿಳುನಾಡಿನ ಜಮೀನಿನ ಆಸ್ತಿ ಪತ್ರದಲ್ಲಿ ಅವರ ಹೆಸರಿನ ಜಾಗದಲ್ಲಿ ಮಹಾಲಿಂಗ ಭಾಗವತ್ ಅವರ ಹೆಸರು ಬರೆದಿದ್ದು ಈ ಮೂಲಕ ನಟಿ ಲೀಲಾವತಿಯವರ ಗಂಡ ಹಾಗೂ ವಿನೋದ್ ರಾಜ್(Vinod Raj) ಅವರ ತಂದೆ ಮಹಾಲಿಂಗ ಭಾಗವತ್ ಎನ್ನುವುದು ಸ್ಪಷ್ಟವಾಗಿದೆ.

Leave a Comment

error: Content is protected !!