Rashmika Mandanna: ಆ ನಟನ ಬಗ್ಗೆ ಕೇಳಿದಾಗ ಓಪನ್ ಆಗಿಯೇ ಲವ್ ಎಂದ ರಶ್ಮಿಕ ಮಂದಣ್ಣ! ಸಿಕ್ಕಿಬಿದ್ರಾ ನಟಿ?

Rashmika Mandanna ನಟಿ ರಶ್ಮಿಕ ಮಂದಣ್ಣ(Rashmika Mandanna) ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಹುಭಾಷಾ ನಟಿಯಾಗಿ ಇಡೀ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದಂತಹ ದೊಡ್ಡ ಮಟ್ಟದ ಅಭಿಮಾನಿ ಬಳಗ ಹಾಗೂ ದೊಡ್ಡ ಮಟ್ಟದ ಮಾರುಕಟ್ಟೆಯ ಬೇಡಿಕೆಯನ್ನು ಕೂಡ ಹೊಂದಿದ್ದಾರೆ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ಅಷ್ಟೊಂದು ಸಾಮಾನ್ಯದ ವಿಚಾರವೇನಲ್ಲ.

ಮುಂದಿನ ದಿನಗಳಲ್ಲಿ ಖಂಡಿತವಾಗಿ ರಶ್ಮಿಕ ಮಂದಣ್ಣ(Rashmika Mandanna) ದಕ್ಷಿಣ ಭಾರತದ ಚಿತ್ರ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿ ಮರೆದರೂ ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ಇನ್ನು ಇತ್ತೀಚಿಗಷ್ಟೇ ರಶ್ಮಿಕಾ ಮಂದಣ್ಣ ಟ್ವಿಟರ್ ನಲ್ಲಿ ಪ್ರಶ್ನೋತ್ತರ ಸೆಷನ್ ಅನ್ನು ಇಟ್ಟುಕೊಂಡಿದ್ದರು.

ಈ ಸಂದರ್ಭದಲ್ಲಿ ಒಬ್ಬ ನಟನ ಕುರಿತಂತೆ ಕೇಳಿದಾಗ ರಶ್ಮಿಕ ಮಂದಣ್ಣ ನೇರವಾಗಿ ಆ ನಟನನ್ನು ಲವ್ ಎಂಬುದಾಗಿ ಕರೆದಿದ್ದಾರೆ. ಹೀಗೆಂದ ಮಾತ್ರಕ್ಕೆ ನೀವು ವಿಜಯ್ ದೇವರಕೊಂಡ(Vijay Devarakonda) ಅವರ ಬಗ್ಗೆ ಹೇಳಿದ್ದಾರೆ ಎಂಬುದಾಗಿ ಭಾವಿಸಬೇಡಿ. ರಶ್ಮಿಕ ಮಂದಣ್ಣ ಮಾತನಾಡಿರುವುದು ತಮಿಳು(Tamil) ಚಿತ್ರರಂಗದ ಖ್ಯಾತ ನಟರೊಬ್ಬರ ಬಗ್ಗೆ.

ಹೌದು ತಮಿಳು ಚಿತ್ರ ರಂಗದ ಖ್ಯಾತ ನಟ ಆಗಿರುವ ತಲಪತಿ ವಿಜಯ್(Thalapathy Vijay) ಅವರ ಅಭಿಮಾನಿ ಒಬ್ಬ ವಿಜಯ್ ಅವರ ಬಗ್ಗೆ ಒಂದು ಮಾತಿನಲ್ಲಿ ಹೇಳಿ ಎಂಬುದಾಗಿ ಪ್ರಶ್ನೆ ಕೇಳಿದಾಗ ರಶ್ಮಿಕ ಮಂದಣ್ಣ ಗೌರವದಿಂದ ಲವ್ ಎನ್ನುವುದಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನು ತಪ್ಪು ಭಾವಿಸಿಕೊಳ್ಳುವ ಅಗತ್ಯ ಇಲ್ಲ ಎಂಬುದು ಕೂಡ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿರುವಂತಹ ವಿಚಾರ.

Leave a Comment

error: Content is protected !!