Ravichandran: ಕಿರುತೆರೆಯ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲು ರವಿಚಂದ್ರನ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?

Ravichandran ಕ್ರೇಜಿಸ್ಟಾರ್ ರವಿಚಂದ್ರನ್(Crazy Star Ravichandran) ಕನ್ನಡ ಚಿತ್ರರಂಗದಲ್ಲಿ ನಾಯಕ ನಿರ್ಮಾಪಕ ಪೋಷಕ ಕಲಾವಿದ ನಿರ್ದೇಶಕನಾಗಿ ಕೂಡ ಕಾಣಿಸಿಕೊಂಡಂತಹ ಬಹುಮುಖ ಪ್ರತಿಭೆ. ತಂದೆ ವೀರ ಸ್ವಾಮಿ(Veeraswamy) ಅವರ ಕಾರಣದಿಂದಲೇ ಅವರು ಚಿತ್ರರಂಗಕ್ಕೆ ಬಂದಿರಬಹುದು ಆದರೆ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದು ಮಾತ್ರ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ.

ತಮ್ಮ ವಿಭಿನ್ನ ಹಾಗೂ ಹೈ ಬಜೆಟ್ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಫಿಲಂ ಮೇಕರ್ಸ್ ಗಳಿಗೆ ಯಾವ ರೀತಿಯ ಸಿನಿಮಾಗಳನ್ನು ಚಿತ್ರಿಕರಿಸಿದರೆ ಕನ್ನಡ ಚಿತ್ರರಂಗ ಬೆಳೆಯುತ್ತದೆ ಎನ್ನುವ ಕನಸನ್ನು ಕಾಣುವ ಸ್ವಾತಂತ್ರ್ಯವನ್ನು ನೀಡಿದಂತಹ ಕನಸುಗಾರ ನಮ್ಮೆಲ್ಲರ ನೆಚ್ಚಿನ ರವಿಮಾಮ(Ravimama). ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಎನ್ನುವುದು ಅಪಾರವಾಗಿದ್ದು ಅದನ್ನು ಸರಿಗಟ್ಟಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಇನ್ನು ಇತ್ತೀಚಿನ ದಿನಗಳಲ್ಲಿ ಅವರು ಪೋಷಕ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರ ನಡುವೆ ಕೂಡ ಕೆಲವೊಂದು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದು ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮಗಳಿಗಾಗಿ ಒಂದು ಎಪಿಸೋಡ್ಗಾಗಿ ರವಿಚಂದ್ರನ್(Ravichandran) ರವರು ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಈಗಾಗಲೇ ಅವರು ಡ್ರಾಮಾ ಜೂನಿಯರ್ಸ್(Drama Juniors) ಸೇರಿದಂತೆ ಹಲವಾರು ಕಿರುತೆರೆಯ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದು ಕಿರುಚರಿಯ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರತಿ ಎಪಿಸೋಡ್ ಗೆ 5 ರಿಂದ 6 ಲಕ್ಷ ಸಂಭಾವನೆಯನ್ನು ರವಿಚಂದ್ರನ್(Drama Juniors) ರವರು ಪಡೆದುಕೊಳ್ಳುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ರವಿಚಂದ್ರನ್ ರವರ ತೀರ್ಪುಗಾರರಾಗಿ ಕಾಣಿಸಿಕೊಂಡಿರುವಂತಹ ಯಾವ ಕಾರ್ಯಕ್ರಮಗಳು ನಿಮ್ಮ ನೆಚ್ಚಿನ ಕಾರ್ಯಕ್ರಮ ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!