Daali Dhananjay: ಪಿಯುಸಿಯಲ್ಲಿ ನಮ್ಮ ಡಾಲಿ ಧನಂಜಯ್ ಪಡೆದ ಅಂಕ ಎಷ್ಟು? ಅವರ ಟೀಚರ್ರೇ ಹೇಳಿದ್ದು!

Dhananjay PUC Marks ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದಲ್ಲಿ ಈಗಾಗಲೇ ಹಲವಾರು ಸಾಧನೆಗಳನ್ನು ಮಾಡಿರುವಂತಹ ಸೆಲೆಬ್ರಿಟಿಗಳು ಬಂದು ಹೋಗಿದ್ದು ಅವರ ಸಾಲಿಗೆ ಈಗ ಯುವ ಸಾಧಕ ಆಗಿರುವ ಡಾಲಿ ಧನಂಜಯ್(Daali Dhananjay) ಕೂಡ ಸೇರ್ಪಡೆಯಾಗಿರುವುದು, ಕರ್ನಾಟಕದ ಸಾಕಷ್ಟು ಯುವಕರಿಗೆ ಸ್ಪೂರ್ತಿಯನ್ನು ನೀಡಿದೆ. ಡಾಲಿ ಧನಂಜಯ್ ಸಾಧಕರ ಸೀಟಿನಲ್ಲಿ ಕುಳಿತಿರುವ ರೀತಿ ಅಲ್ಲಿಗೆ ಹೋಗಿ ಕುಳಿತುಕೊಳ್ಳುವಂತೆ ಪ್ರತಿಯೊಬ್ಬ ಯುವಕನನ್ನು ಕೂಡ ಪ್ರೇರೇಪಿಸುತ್ತಿದೆ.

ಇನ್ನು ಡಾಲಿ ಧನಂಜಯ್(Daali Dhananjay) ಅವರ ಜೀವನದ ಕುರಿತಂತೆ ಹಲವಾರು ಯಾರಿಗೂ ಕೂಡ ತಿಳಿಯದೆ ಇರುವಂತಹ ವಿಚಾರಗಳು ಕೂಡ ಕಂಡುಬಂದಿದ್ದು ವೀಕೆಂಡ್ ವಿತ್ ರಮೇಶ್ ಎಪಿಸೋಡಿನಲ್ಲಿ ಈ ವಿಚಾರಗಳ ಕುರಿತಂತೆ ತಿಳಿದು ಪ್ರೇಕ್ಷಕರು ಕೂಡ ಆಶ್ಚರ್ಯಪಟ್ಟಿದ್ದಾರೆ. ಚಿತ್ರರಂಗದ ಹಲವಾರು ಗೆಳೆಯರು, ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ಡಾಲಿ ಅವರ ಗೆಳೆಯರಾಗಿದ್ದರು ಎಂಬುದು ಕೂಡ ತಿಳಿದು ಬಂದಿದೆ.

ಎಲ್ಲದಕ್ಕಿಂತ ಪ್ರಮುಖವಾಗಿ ಇಂದು ಡಾಲಿ ಧನಂಜಯ್(Daali Dhananjay) ಜಾಲಿಯಾಗಿ ಕಾಣಿಸಿಕೊಳ್ಳಬಹುದು ಆದರೆ ಅವರು ತಮ್ಮ ಶೈಕ್ಷಣಿಕ ದಿನಗಳಲ್ಲಿ ಯಾವ ರೀತಿಯಲ್ಲಿ ಚುರುಕಾಗಿದ್ದರು ಎನ್ನುವುದಕ್ಕೆ ಅವರು ಪಿಯುಸಿಯಲ್ಲಿ ಪಡೆದುಕೊಂಡಂತಹ ಅಂಕಗಳೇ ಸಾಕ್ಷಿಯಾಗಿದೆ ಎಂದು ಹೇಳಬಹುದಾಗಿದೆ. ಹಾಗಿದ್ದರೆ ಬನ್ನಿ ಪಿಯುಸಿಯಲ್ಲಿ ಡಾಲಿ ಧನಂಜಯ್ ಪಡೆದುಕೊಂಡಿರುವ ಅಂಕಗಳು ಎಷ್ಟು ಎಂಬುದನ್ನು ತಿಳಿಯೋಣ.

ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ಎಪಿಸೋಡಿನಲ್ಲಿ ಡಾಲಿ ಧನಂಜಯ್ ಅವರ ಶಿಕ್ಷಕರು ಹೇಳಿರುವ ಪ್ರಕಾರ ಪಿಯುಸಿಯಲ್ಲಿ ಡಾಲಿ ಧನಂಜಯ್ ಅವರು ಭರ್ಜರಿ 525 ಅಂಕಗಳನ್ನು ಪಡೆದುಕೊಂಡಿದ್ದರು. ಈ ಮೂಲಕ ಅವರು ಶೈಕ್ಷಣಿಕವಾಗಿ ಕೂಡ ಎಷ್ಟೊಂದು ಬುದ್ಧಿವಂತರಾಗಿದ್ದರು ಎಂಬುದು ಸಾಬೀತಾಗಿದೆ. ಹಾಲಿ ಧನಂಜಯ್ ಅವರ ಎಪಿಸೋಡ್ ನೋಡಿದ ನಂತರ ನಿಮಗೇನು ಅನ್ನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!