Upendra House: ರಿಯಲ್ ಸ್ಟಾರ್ ಉಪೇಂದ್ರರವರ ಕೋಟ್ಯಾಂತರ ಬೆಲೆಬಾಳುವ ಐಷಾರಾಮಿ ಬಂಗಲೆ ಹೇಗಿದೆ ನೋಡಿ!

Upendra ರಿಯಲ್ ಸ್ಟಾರ್ ಉಪೇಂದ್ರರವರು(Real Star Upendra) ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಕೂಡ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ಕನ್ನಡದ ಅಪರೂಪದ ನಟರಲ್ಲಿ ಒಬ್ಬರಾಗಿದ್ದಾರೆ. ಅವರ ಕ್ರಿಯೇಟಿವಿಟಿ ಎನ್ನುವುದು ಅವರ ನಿರ್ದೇಶನದ ಸಿನಿಮಾದಲ್ಲಿ ಪ್ರತಿಯೊಬ್ಬರಿಗೂ ಕೂಡ ಕಾಣಿಸುತ್ತದೆ.

ಇದಕ್ಕಾಗಿ ಭಾರತದ ಅತ್ಯಂತ ಜನಪ್ರಿಯ ನಿರ್ದೇಶಕರಲ್ಲಿ ಉಪೇಂದ್ರ ಅವರ ಹೆಸರು ಖಂಡಿತವಾಗಿ ಬಂದೇ ಬರುತ್ತದೆ. ಚಿತ್ರರಂಗಕ್ಕೆ ನಿರ್ದೇಶಕನಾಗಲು ಬಂದಿದ್ದ ಉಪೇಂದ್ರರವರು(Upendra) ಸೂಪರ್ ಸ್ಟಾರ್ ಆಗಿ ರಿಯಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಎನ್ನುವುದು ನಿಜಕ್ಕೂ ಕೂಡ ಪ್ರತಿಯೊಬ್ಬರು ಹೆಮ್ಮೆ ಪಡಬೇಕಾಗಿರುವ ವಿಚಾರ. ಅದರಲ್ಲೂ ಓಂ ನಂತಹ ಸಿನಿಮಾಗಳನ್ನು ಅವರಿಂದ ಮಾತ್ರವಲ್ಲದೆ ಬೇರೆ ಯಾರಿಂದಲೂ ಕೂಡ ಸಾಧ್ಯ ಇಲ್ಲ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಇನ್ನು ನಟಿ ಪ್ರಿಯಾಂಕ ಉಪೇಂದ್ರ(Priyanka Upendra) ಅವರನ್ನು ಮದುವೆ ಆಗಿರುವ ರಿಯಲ್ ಸ್ಟಾರ್ ಉಪೇಂದ್ರ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಬೆಂಗಳೂರಿನ ಕತ್ರಗುಪ್ಪೆನಲ್ಲಿರುವ ತಮ್ಮ ಬಂಗಲೆಯಂತಹ ಮನೆಯಲ್ಲಿ ಆರಾಮವಾಗಿ ಜೀವನ ನಡೆಸುತ್ತಿದ್ದಾರೆ ನಮ್ಮೆಲ್ಲರ ನೆಚ್ಚಿನ ರಿಯಲ್ ಸ್ಟಾರ್ ಉಪೇಂದ್ರ. ನೀವು ಕೂಡ ಉಪೇಂದ್ರ ಅವರ ಮನೆಯ ಫೋಟೋವನ್ನು ಇಲ್ಲಿ ನೋಡಬಹುದಾಗಿದೆ.

ಉಪೇಂದ್ರ ಅವರ ಮನೆಯ(Real Star Upendra House) ಹೆಸರು ಸುಮ್ಮನೆ ಆಗಿದ್ದು, ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮೂಡಿ ಬಂದಿರುವಂತಹ ಈ ಮನೆ ನೋಡಲು ನಿಜಕ್ಕೂ ಕೂಡ ಭೂಮಿಯಲ್ಲಿರುವ ಅರಮನೆಯಂತೆ ಕಾಣಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಉಪೇಂದ್ರ ಅವರ ಮನೆಯ ಈ ಫೋಟೋಗಳನ್ನು ನೋಡಿದ ಮೇಲೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!