Rakshit Shetty: ರಿಚರ್ಡ್ ಆಂಟನಿ ಸಿನಿಮಾಗಾಗಿ ರಕ್ಷಿತ್ ಶೆಟ್ಟಿ ಪಡೆಯುತ್ತಿರೋ ಸಂಭಾವನೆ ಎಷ್ಟು? ಹೊಂಬಾಳೆ ಫಿಲ್ಮ್ಸ್ ಮಹಿಮೆ!

Richard Antony ರಕ್ಷಿತ್ ಶೆಟ್ಟಿ(Rakshit Shetty) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಓಡಾಡುತ್ತಿರುವಂತಹ ಗೆಲುವಿನ ಕುದುರೆಗಳಲ್ಲಿ ಒಬ್ಬರಾಗಿದ್ದಾರೆ. ತಮ್ಮ ವಿಭಿನ್ನ ಆಲೋಚನೆಗಳು ಹಾಗೂ ಕಂಟೆಂಟ್ ಮೂಲಕ ಇಂದಿನ ಕಾಲದ ಪ್ರೇಕ್ಷಕರಿಗೆ ಸರಿಹೊಂದುವಂತಹ ಮನೋರಂಜನಾತ್ಮಕ ಸಿನಿಮಾಗಳನ್ನು ಆಗಾಗ ನೀಡುವ ಮೂಲಕ ಚಿತ್ರರಂಗದ ಯಶಸ್ವಿ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಶೆಟ್ರು ಕಾಲಿಟ್ಟು ಈಗಾಗಲೇ ಸಾಕಷ್ಟು ವರ್ಷಗಳೇ ಕಳೆದಿವೆ.

ಹೀಗಿದ್ದರೂ ಕೂಡ ಕಿರಿಕ್ ಪಾರ್ಟಿ(Kirik Party) ಸಿನಿಮಾದ ನಂತರವೇ ರಕ್ಷಿತ್ ಶೆಟ್ಟಿ, ಗೆಲುವಿನ ಸಿಹಿಯನ್ನು ಕಾಣಲು ಪ್ರಾರಂಭಿಸಿದ್ದು. ಅವರ ಮಂಗಳೂರು ಶೈಲಿಯ ಸಿನಿಮಾಗಳಂತೂ ಖಂಡಿತವಾಗಿ ಪ್ರತಿಯೊಬ್ಬ ಪ್ರೇಕ್ಷಕರನ್ನು ಕೂಡ ನಗುವಿನಿಂದ ಹಿಡಿದು ಅಳುವ ತನಕ ಸಮರ್ಪಕವಾದ ಪರಿಪಕ್ವವಾದಂತಹ ಮನೋರಂಜನೆಯನ್ನು ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ.

ಇನ್ನು ಈಗ ಸದ್ಯಕ್ಕೆ ಅವರು ಹೊಂಬಾಳೆ ಫಿಲಂಸ್(Hombale Films) ನಿರ್ಮಾಣದಲ್ಲಿ ಮೂಡಿ ಬರಲಿರುವಂತಹ ರಿಚರ್ಡ್ ಆಂಟನಿ ಸಿನಿಮಾದಲ್ಲಿ ನಾಯಕ ನಟ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಅವರು ಪಡೆದುಕೊಳ್ಳಲಿರುವಂತಹ ಸಂಭಾವನೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ರಕ್ಷಿತ್ ಶೆಟ್ಟಿ(Rakshit Shetty) ಅವರು ರಿಚರ್ಡ್ ಆಂಟನಿ(Richard Antony) ಸಿನಿಮಾಗಾಗಿ ಪಡೆದುಕೊಳ್ಳುತ್ತಿರುವ ಸಂಭವನ 5ರಿಂದ 6 ಕೋಟಿ ರೂಪಾಯಿ ಎಂಬುದಾಗಿ ತಿಳಿದು ಬಂದಿದ್ದು ಸಿನಿಮಾದ ಬಿಡುಗಡೆಯ ನಂತರ ಲಾಭದಲ್ಲಿ ಕೂಡ ಪಾಲನ್ನು ತೆಗೆದುಕೊಳ್ಳಬಹುದು ಎಂಬುದಾಗಿ ಅಂದಾಜಿಸಲಾಗಿದೆ.

Leave a Comment

error: Content is protected !!