Shine Shetty: ಶೈನ್ ಶೆಟ್ಟಿ ಅವರ ಜೊತೆಗೆ ಕೇಳಿ ಬರ್ತಿದೆ ಹೊಸ ಹುಡುಗಿಯ ಹೆಸರು! ಯಾರದು ಚೆಲುವೆ.

Shine Shetty ಕರಾವಳಿ ಮೂಲದ ಹುಡುಗ ಆಗಿರುವ ಶೈನ್ ಶೆಟ್ಟಿ(Shine Shetty) ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಧಾರವಾಹಿ ಹಾಗೂ ಕಿರುತೆರೆ ಅತ್ಯಂತ ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವ ಬಿಗ್ ಬಾಸ್ ಅನ್ನು ಗೆಲ್ಲುವುದರ ಮೂಲಕ ಸುದ್ದಿಗೆ ಬಂದವರು.

ಆರಂಭಿಕ ದಿನಗಳಲ್ಲಿ ಧಾರವಾಹಿಯಲ್ಲಿ ನಟಿಸುತ್ತಿದ್ದಾಗ ಶೈನ್ ಶೆಟ್ಟಿ ಅವರಿಗೆ ಯಾವುದೇ ತೊಂದರೆ ಇರಲಿಲ್ಲ ಯಶಸ್ವಿಯಾಗಿ ನಟಿಸಿಕೊಂಡು ಬಂದಿದ್ದರು ಆದರೆ ಯಾವಾಗ ಸಿನಿಮಾ ಗೆ ಸೇರಬೇಕು ಎನ್ನುವ ಪ್ರಯತ್ನ ಪಟ್ಟರು ಆಗ ಅವರಿಗೆ ಅವಕಾಶ ಸಿಗದೆ ಗಲ್ಲಿ ಕಿಚನ್(Gully Kitchen) ಮಾಡಬೇಕಾದಂತಹ ಪರಿಸ್ಥಿತಿಯು ಕೂಡ ಒದಗಿಬರುತ್ತದೆ.

ಎಷ್ಟೇ ಕಷ್ಟ ಬಂದರೂ ಕೂಡ ಶೈನ್ ಶೆಟ್ಟಿ ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ಬಿಗ್ ಬಾಸ್ ನಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವ ಮೂಲಕ ವಿಜೇತರಾಗಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಮತ್ತೆ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಕಾಂತಾರ(Kantara) ಸಿನಿಮಾದಲ್ಲಿ ಕೂಡ ಅವರನ್ನು ನಾವು ಅತಿಥಿಪಾತ್ರದಲ್ಲಿ ನಟಿಸಿದ್ದನ್ನು ನೋಡ ಬಹುದಾಗಿದೆ. ಈಗ ಅಚಾನಕ್ಕಾಗಿ ಶೈನ್ ಶೆಟ್ಟಿ ಅವರ ಹೆಸರು ಹೊಸ ಹುಡುಗಿಯ ಜೊತೆಗೆ ಕೇಳಿ ಬರುತ್ತಿದೆ.

ಈಗಾಗಲೇ ಈ ಹಿಂದೆ ದೀಪಿಕಾ ದಾಸ್ ಹಾಗೂ ಮೇಘ ಶೆಟ್ಟಿ ಅವರ ಜೊತೆಗೂ ಕೂಡ ಶೈನ್ ಶೆಟ್ಟಿ(Shine Shetty) ಅವರ ಹೆಸರು ಕೇಳಿ ಬಂದಿತ್ತು ಆದರೆ ಈಗ ಯಾವ ಕಾರಣಕ್ಕಾಗಿ ನಟಿ ಹಾಗೂ ಸಿಂಗರ್ ಆಗಿರುವ ಸಂಗೀತ ರಾಜೀವ್(Sangeetha Rajiv) ಅವರ ಜೊತೆಗೆ ಶೈನ್ ಶೆಟ್ಟಿ ಅವರ ಹೆಸರು ಕೇಳಿ ಬರುತ್ತಿದೆ ಎಂಬುದಾಗಿ ತಿಳಿದು ಬರುತ್ತಿಲ್ಲ. ಆದರೆ ಮೂಲೆಗಳ ಪ್ರಕಾರ ಕೆಲವೊಂದು ಗಾಳಿ ಸುದ್ದಿಗಳು ಹೇಳುವಂತೆ ಮುಂದಿನ ದಿನಗಳಲ್ಲಿ ಇವರು ಮದುವೆ ಆದ್ರೂ ಕೂಡ ಆಗಬಹುದು ಎಂಬುದಾಗಿ ಹೇಳುತ್ತಿವೆ. ಸುದ್ದಿ ನೋಡಿದ್ರೆ ಸುಳ್ಳೇ ಅಂದನಿಸಿದರೂ ಕೂಡ ಯಾಕೆ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿಯ ಹೊಗೆ ಏಳುತ್ತಿದೆ ಎಂಬುದು ತಿಳಿದು ಬರುತ್ತಿಲ್ಲ.

Leave a Comment

error: Content is protected !!