Kiccha Sudeep: ಡಾಲಿ ಧನಂಜಯ್ ಕಿಚ್ಚನ ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿದ್ದೇನು ಗೊತ್ತಾ? ವರ್ಷಕ್ಕೆ ಒಂದ್ಸಲ ಅದನ್ನ ಮಾಡ್ಲೇ ಬೇಕಂತೆ!

Daali Dhananjay ಡಾಲಿ ಧನಂಜಯ್ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗತೊಡದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಯುವ ಪ್ರತಿಭೆಗಳ ಕೊರತೆ ಕನ್ನಡ ಚಿತ್ರರಂಗದಲ್ಲಿ ಎದ್ದು ಕಾಣುತ್ತಿತ್ತು ಈಗ ಆ ಕೊರತೆಯನ್ನು ಧನಂಜಯ್(Dhananjay) ತಮ್ಮ ಸಿನಿಮಾಗಳನ್ನು ನಿವಾರಿಸಿದ್ದಾರೆ.

ಇನ್ನು ಯುವ ನಟ ಆಗಿದ್ದರೂ ಕೂಡ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ಈಗಾಗಲೇ ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಡಾಲಿ(Daali) ಪಾತ್ರದ ಮೂಲಕ ತಮ್ಮ ಯಶಸ್ಸಿನ ಹಾದಿಯನ್ನು ತುಳಿಯಲು ಪ್ರಾರಂಭಿಸಿದ ನಟ ಧನಂಜಯ್ ಅವರು ಇಂದಿಗೂ ಕೂಡ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಯುವ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಮುಂದಿನ ವರ್ಷಗಳಲ್ಲಿ ಕನ್ನಡದ ಫ್ಯೂಚರ್ ಸ್ಟಾರ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಸಿನಿಮಾ ಪಂಡಿತರು ಈಗಾಗಲೇ ಭವಿಷ್ಯವನ್ನು ನುಡಿದಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಟ್ವಿಟರ್ ನಲ್ಲಿ ಪ್ರಶ್ನೋತ್ತರ ಸೆಷನ್ ಅನ್ನು ಡಾಲಿ ಧನಂಜಯ್ ಅವರು ಇಟ್ಟುಕೊಂಡಿದ್ದರು ಈ ಸಂದರ್ಭದಲ್ಲಿ ಕಿಚ್ಚನ ಅಭಿಮಾನಿ(Kiccha Fan) ಒಬ್ಬರು ನೀಡಿರುವ ಪ್ರಶ್ನೆಗೆ ಡಾಲಿ ಧನಂಜಯ್ ನೀಡಿರುವ ಉತ್ತರ ಮಜವಾಗಿತ್ತು. ಹಾಗಿದ್ದರೆ ಆ ಉತ್ತರ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಕಿಚ್ಚ ಸುದೀಪ್(Kiccha Sudeep) ರವರ ಬಗ್ಗೆ ಮಾತನಾಡುತ್ತಾ ಅವರೊಬ್ಬ ಲೀಡರ್ ಆದರೆ ಅವರು ವರ್ಷಕ್ಕೊಂದು ಸಿನಿಮಾ ಮಾಡಿದ್ರೆ ಚೆನ್ನಾಗಿರುತ್ತೆ ಎಂಬ ರೀತಿಯಲ್ಲಿ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಿಚ್ಚ ಸುದೀಪ್ ರವರ ಜೊತೆಗೆ ಡಾಲಿ ಧನಂಜಯ್(Daali Dhananjay) ಸಾಕಷ್ಟು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದು ಅವರಿಬ್ಬರ ನಡುವೆ ಸಹೋದರತ್ವದ ಸಂಬಂಧ ಎಷ್ಟು ಚೆನ್ನಾಗಿದೆ ಎಂಬುದನ್ನು ಸಾಬೀತು ಪಡಿಸುತ್ತದೆ.

Leave a Comment

error: Content is protected !!