Weekend With Ramesh: ವೀಕೆಂಡ್ ವಿತ್ ರಮೇಶ್ ಯಾವಾಗ ಸ್ಟಾರ್ಟ್ ಆಗ್ತಿರೋದು ಗೊತ್ತಾ? ಕೊನೆಗೂ ರಿವೀಲ್ ಆಯ್ತು ನೋಡಿ ಡೇಟ್!

Ramesh Aravind ಕರ್ನಾಟಕದ ಪ್ರತಿಯೊಬ್ಬ ಕಿರುತೆರೆಯ ಪ್ರೇಕ್ಷಕನು ಕೂಡ ಕಾಯುತ್ತಿರುವಂತಹ ಸ್ಪೆಷಲ್ ಪ್ರೋಗ್ರಾಮ್ ಎಂದರೆ ಅದು ಜೀ ಕನ್ನಡ ವಾಹಿನಿಯಲ್ಲಿ ರಮೇಶ್ ಅರವಿಂದ್ ರವರು ನಡೆಸಿಕೊಡುವಂತಹ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ 5ನೇ ಆವೃತ್ತಿ. ಈಗಾಗಲೇ ಪ್ರೊಮೋ ಬಿಡುಗಡೆಯಾಗಿದ್ದು ಕಾರ್ಯಕ್ರಮ ಯಾವಾಗ ಪ್ರಾರಂಭವಾಗುತ್ತಿದೆ ಎನ್ನುವ ಸುಳಿವನ್ನು ವಾಹಿನಿ ಬಿಟ್ಟು ಕೊಟ್ಟಿರಲಿಲ್ಲ.

ಪ್ರತಿಯೊಬ್ಬರೂ ಕೂಡ ಈ ಕಾರ್ಯಕ್ರಮದಲ್ಲಿ ಯಾವೆಲ್ಲ ಅತಿಥಿಗಳು ಬರಬಹುದು ಎನ್ನುವುದಾಗಿ ತಮ್ಮದೇ ಆದಂತಹ ಕಲ್ಪನೆಯನ್ನು ಸೃಷ್ಟಿಸಿಕೊಳ್ಳಲು ಪ್ರಾರಂಭಿಸಿದ್ದರು. ಹಲವಾರು ಖ್ಯಾತನಾಮ ಹೆಸರುಗಳು ಕೂಡ ಈಗಾಗಲೇ ಅಧಿಕೃತವಾಗಿ ಕೇಳಿ ಬಂದಿದ್ದು ರಮೇಶ್ ಅರವಿಂದ್(Ramesh Aravind) ರವರ ನಿರೂಪಣಶೈಲಿಯನ್ನು ಕಿರುತೆರೆಯ ಮೇಲೆ ನೋಡಲು ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಕಾತರರಾಗಿದ್ದಾರೆ.

ಇದು 5ನೇ ಸೀಸನ್ ಆಗಿದ್ದು ವೀಕೆಂಡ್ ವಿತ್ ರಮೇಶ್(Weekend With Ramesh 5) ಕಾರ್ಯಕ್ರಮದಲ್ಲಿ ಯಾವೆಲ್ಲ ಸ್ಟಾರ್ ಗಳು ಬರಲಿದ್ದಾರೆ ಎನ್ನುವ ಕುರಿತಂತೆ ಕೂಡ ಮಾತು ಕಥೆಗಳು ಪ್ರಾರಂಭವಾಗಿದ್ದು ಅಧಿಕೃತ ದಿನಾಂಕ ಇದುವರೆಗೂ ತಿಳಿದು ಬಂದಿರಲಿಲ್ಲ. ಆದರೆ ಕೆಲವೊಂದು ಮೂಲಗಳ ಪ್ರಕಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಸೀಸನ್ ಯಾವಾಗ ಪ್ರಾರಂಭವಾಗಲಿದೆ ಎನ್ನುವ ಮಾಹಿತಿಗಳು ಕೂಡ ದೊರಕಿವೆ.

ಸಿಕ್ಕಿರುವ ಮಾಹಿತಿಗಳ ಪ್ರಕಾರ ವೀಕೆಂಡ್ ವಿತ್ ರಮೇಶ್(Ramesh) ಕಾರ್ಯಕ್ರಮ ಇದೇ ಮಾರ್ಚ್ ಕೊನೆಯ ವಾರದಲ್ಲಿ ಪ್ರಾರಂಭವಾಗಲಿದೆ ಎಂಬುದಾಗಿ ತಿಳಿದು ಬಂದಿದೆ. ಈ ಬಾರಿ ಸಾಧಕರ ಸೀಟ್ ನಲ್ಲಿ ಯಾವೆಲ್ಲ ಸಾಧಕರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದಕ್ಕಾಗಿ ಕಿರುತೆರೆ ಪ್ರೇಕ್ಷಕರು ಈ ಕಾರ್ಯಕ್ರಮಕ್ಕಾಗಿ ಎದುರು ನೋಡುತ್ತಿದ್ದಾರೆ. ಒಂದು ವೇಳೆ ನೀವು ಕೂಡ ಈ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ದಾರೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಶೇರ್ ಮಾಡಿ.

Leave a Comment

error: Content is protected !!