Vinay Gowda: ಬಿಗ್ ಬಾಸ್ ಮನೆಯ ಆನೆಯೊಂದಿಗೆ ಕಾಣಿಸಿಕೊಂಡ ನಿರಂಜನ್ ದೇಶಪಾಂಡೆ ದಂಪತಿಗಳು

ಸ್ನೇಹಿತರೆ ಕನ್ನಡದ ಬಿಗ್ ಬಾಸ್ ಸೀಸನ್ 10ರ ಮೂಲಕ ಹೆಚ್ಚಿನ ಪ್ರಖ್ಯಾತಿ ಪಡೆದುಕೊಂಡಂತಹ ನಟ ವಿನಯ್ ಗೌಡ(Vinay Gowda) ಅವರನ್ನು ಬಿಗ್ ಬಾಸ್ ನ ಆನೆ ಎಂದೆ ಕರೆಯಲಾಗುತ್ತದೆ. ಸೀಸನ್ನ ಉದ್ದಕ್ಕೂ ಎಷ್ಟೇ ಎದುರಾಳಿಗಳು ಎದುರಾದರು ಸಮಸ್ಯೆಗಳ ಟೀಕೆಗಳ ಸುರಿಮಳೆ ಹರಿದು ಬಂದರು ತಮ್ಮ ಗತ್ತು ಗಾಂಭೀರ್ಯವನ್ನು ಬಿಡದೆ ತಮ್ಮತನವನ್ನು ಮೆರೆದಂತಹ ವಿನಯ್ ಗೌಡ ಬಿಗ್ ಬಾಸ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳದೆ ಹೋದರು ಅಸಂಖ್ಯಾತ ಅಭಿಮಾನಿಗಳ ಹೃದಯ ಗೆದ್ದರು ಎಂದರೆ ತಪ್ಪಾಗಲಾರದು.

ಇನ್ನು ಬಿಗ್ ಬಾಸ್ ಕಾರ್ಯಕ್ರಮ ಮುಗಿದ ನಂತರ ಹಲವಾರು ಟಿವಿ ಪ್ರೋಗ್ರಾಮ್ಗಳು ಹಾಗೂ ನ್ಯೂಸ್ ಚಾನೆಲ್ಗಳಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ವಿನಯ್ ಗೌಡ(Vinay Gowda) ಕಳೆದ ಕೆಲವು ದಿನಗಳ ಹಿಂದೆ ತಮ್ಮ ಬಹುಕಾಲದ ಗೆಳೆಯ ನಿರಂಜನ್ ದೇಶಪಾಂಡೆ ಮತ್ತು ಅವರ ಪತ್ನಿ ಜೊತೆಗೆ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ಗೆಳೆಯರೇ ವಿನಯ್ ಗೌಡ ಬಿಗ್ ಬಾಸ್ ಮನೆಯಲ್ಲಿ ಇದ್ದಂತಹ ಸಮಯದಲ್ಲಿ ನಿರೂಪಕ ನಿರಂಜನ್ ದೇಶಪಾಂಡೆ(Niranjan Deshpande) ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಅವರಿಗೆ ವೋಟ್ ಮಾಡಿ ಗೆಲ್ಲಿಸುವಂತೆ ಹತ್ತಾರು ಪೋಸ್ಟ್ಗಳನ್ನು ಹಂಚಿಕೊಂಡು ತಮ್ಮ ಅಭಿಮಾನವನ್ನು ಮೆರೆದಿದ್ದರು.

ಕಳೆದ 15 ವರ್ಷಗಳಿಂದ ಸ್ನೇಹಿತರಾಗಿರುವ ವಿನಯ್ ಗೌಡ(Vinay Gowda) ಅವರ ಯಶಸ್ಸನ್ನು ನಿರಂಜನ್ ದೇಶಪಾಂಡೆ ಎದುರು ನೋಡುತ್ತಿದ್ದರು. ಆದರೆ ಅದೃಷ್ಟ ಕಾರ್ತಿಕ್ ಮಹೇಶ್ ಅವರ ಪರವಾಗಿ ಇದ್ದ ಕಾರಣ ಅತಿ ಹೆಚ್ಚಿನ ವೋಟ್ ಪಡೆದು ಬಿಗ್ ಬಾಸ್ 10ನೇ ಆವೃತ್ತಿಯ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಒಟ್ಟಿಗೆ ಸಿನಿಮಾ ಇಂಡಸ್ಟ್ರಿಯನ್ನು ಪ್ರವೇಶ ಮಾಡಿ ವಿನಯ್ ಮತ್ತು ನಿರಂಜನ್ ಕಷ್ಟ ಸುಖದಲ್ಲಿ ಜೊತೆಗೆ ಇದ್ದಂತಹ ಸ್ನೇಹಿತರು.

ಹೀಗಿರುವಾಗ ಕಳೆದ ಮಾರ್ಚ್ 7 ನೇ ತಾರೀಕು 2024 ರಂದು ವಿನಯ್ ಗೌಡ ಅವರು ತಮ್ಮ 44ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತನ್ನ ಪ್ರಾಣ ಸ್ನೇಹಿತನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ನಿರಂಜನ್ ದೇಶಪಾಂಡೆ(Niranjan Deshpande) ತಮ್ಮ ಹೆಂಡತಿ ಯಶಸ್ವಿನಿ(Yashaswini) ಅವರೊಂದಿಗೆ ವಿನಯ್ ಮನೆಗೆ ತೆರಳಿ ಸಂಭ್ರಮಿಸಿದ್ದಾರೆ. ಆ ಸಮಯದಲ್ಲಿ ತೆಗೆಯಲದಂತಹ ಕೆಲವು ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ನೆಟ್ಟಿಗರನ್ನು ಆಕರ್ಷಿಸುತ್ತಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!