ಹುಟ್ಟುವ ಮೊದಲೆ ಮಗುವಿಗೆ ಹೆಸರಿಟ್ಟು ಇಡೀ ರಾಜ್ಯಕ್ಕೆ ಸಿಹಿ ಸುದ್ದಿ ಕೊಟ್ಟ ಲವ್ ಮಾಕ್ಟೈಲ್ ಜೋಡಿಗಳು!

ಸ್ನೇಹಿತರೆ, ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ(Darling krishna and milana nagraj) ಜೋಡಿಗಳು ಪೋಷಕರಾಗುತ್ತಿರುವಂತಹ ಸಿಹಿ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ಗೆಳೆಯರೇ ಮಗು ಹುಟ್ಟುವ ಮೊದಲೆ ಕೃಷ್ಮೀ ಎಂದು ಹೆಸರಿಟ್ಟು ಇದೆ ಸೆಪ್ಟೆಂಬರ್ ತಿಂಗಳಿನಲ್ಲಿ ಮನೆಗೆ ಮುದ್ದಾದ ಮಗುವಿನ ಆಗಮನವಾಗಲಿರುವಂತಹ ಸಿಹಿ ಸುದ್ದಿಯನ್ನು ದಂಪತಿಗಳು ಹಂಚಿಕೊಂಡು ಬಾರಿ ವೈರಲಾಗುತ್ತಿದ್ದಾರೆ.

ಯಾರಿಗೂ ಗೊತ್ತಾಗದ ಹಾಗೆ ಪ್ರೀತಿಸುತ್ತಿದಂತಹ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿಗಳು ಲಾಕ್ಡೌನ್ ಸಮಯದಲ್ಲಿ ಯಾವುದೇ ರೀತಿಯ ಸಿನಿಮಾಗಳು ಸೀರಿಯಲ್ ಗಳು ಇಲ್ಲದ ಬೇಸತ್ತಿದ್ದಂತಹ ಚಿತ್ರ ಪ್ರೇಕ್ಷಕರಿಗೆ ಲವ್ ಮಾಕ್ಟೈಲ್ ಸಿನಿಮಾದ ಮೂಲಕ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿ ಕನ್ನಡಿಗರ ಮನಸ್ಸನ್ನು ಗೆದ್ದರು. ಅನಂತರ ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸುತ್ತ ತೆರೆಯ ಮೇಲೆ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದಂತಹ ಈ ಜೋಡಿಗಳು ನಿಜ ಜೀವನದಲ್ಲಿ ಒಂದಾಗಬೇಕೆಂದು ನಿರ್ಧರಿಸಿ

ಫೆಬ್ರವರಿ 14ನೇ ತಾರೀಕು 2021ರಂದು ಬಹಳ ಅದ್ದೂರಿಯಾಗಿ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ನಂತರ ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಸಾಕಷ್ಟು ಸಿನಿಮಾಗಳನ್ನು ನೀಡಿ ಬಹಳ ಅನ್ಯೋನ್ಯವಾಗಿ ಜೀವನವನ್ನು ನಡೆಸುತ್ತಾ ಇತರರಿಗೆ ಆದರ್ಶವಾಗುವಂತೆ ಬದುಕುತ್ತಿದ್ದಾರೆ. ಸದ್ಯ ಇಬ್ಬರಿದ್ದಂತಹ ಕುಟುಂಬಕ್ಕೆ ಮತ್ತೊಂದು ಪುಟ್ಟ ಮಗುವನ್ನು ಬರಮಾಡಿಕೊಳ್ಳಲು ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ(Darling krishna and milana nagaraj) ದಂಪತಿಗಳು ಸಜ್ಜ ಸಜ್ಜಾಗಿದ್ದು

ಗರ್ಭಿಣಿ ಆಗಿರುವಂತಹ ಮಿಲನ ಅವರು ಇದೇ ಸಪ್ಟೆಂಬರ್ ತಿಂಗಳಿನಲ್ಲಿ ಪುಟ್ಟ ಕಂದಮ್ಮನನ್ನು ಬರಮಾಡಿಕೊಳ್ಳಲು ಸಿದ್ದರಾಗಿದ್ದಾರೆ. ಈ ಶುಭ ಸುದ್ದಿಯನ್ನು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸಾಮಾಜಿಕ ಜಾಲತಾಣದ ಮೂಲಕ ತಮ್ಮ instagram ಹಾಗೂ facebook ಖಾತೆಯಲ್ಲಿ ಹಂಚಿಕೊಂಡಿರುವ ಲವ್ ಮಾಕ್ಟೈಲ್ ಜೋಡಿಗಳು(love mocktail couples) ಮಗುವಿನ ಹೆಸರನ್ನು ರಿವೀಲ್ ಮಾಡುವುದರ, ಜೊತೆಗೆ ಸೆಪ್ಟೆಂಬರ್ ತಿಂಗಳಿನಲ್ಲಿ ತಮ್ಮ ಮನೆಗೆ ಆಗಮಿಸಲಿರುವ ಹೊಸ ಅತಿಥಿಯ ವಿಚಾರವನ್ನು ರಿವೀಲ್ ಮಾಡಿದ್ದಾರೆ.‌ ಸದ್ಯ ಈ ದಂಪತಿಗಳಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!