Ananth Nag: ಬರೋಬ್ಬರಿ 17 ವರ್ಷಗಳ ಕಾಲ ವಿಷ್ಣುವರ್ಧನ್ ಹಾಗೂ ಅನಂತ್ ನಾಗ್ ಒಟ್ಟಿಗೆ ನಟಿಸಿರಲಿಲ್ಲ! ಅಸಲಿ ಕಾರಣ ಇಲ್ಲಿದೆ ನೋಡಿ!

Vishnuvardhan ಸಾಕಷ್ಟು ವರ್ಷಗಳು ಕಳೆದರೂ ಕೂಡ ಇಂದಿಗೂ ನಟ ಅನಂತನಾಗ್ ಅವರ ನಟನೆಯಲ್ಲಿ ಕಿಂಚಿತ್ತು ಕೂಡ ಕಿಲುಬು ಬಂದಿಲ್ಲ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಪರಿಪಕ್ವವಾಗಿ ಈ ವಯಸ್ಸಿನಲ್ಲಿ ಕೂಡ ಅನಂತನಾಗ್ ರವರು ನಟಿಸುತ್ತಾರೆ. ನಟ ಅನಂತಾಗ್(Ananth Nag) ರವರು 70ರ ದಶಕದಿಂದ ಪ್ರಾರಂಭಿಸಿ ಇಂದಿನವರೆಗೂ ಕೂಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಪ್ರೇಕ್ಷಕ ಬಳಗವನ್ನು ಹೊಂದಿದ್ದಾರೆ.

ಇನ್ನು ಕನ್ನಡ ಚಿತ್ರರಂಗದ ದಿಗ್ಗಜರು ಆಗಿರುವ ಅಂಬರೀಶ್ ವಿಷ್ಣುವರ್ಧನ್ ರಾಜಕುಮಾರ್ ಶಂಕರ್ ನಾಗ್(Shankar nag) ಸೇರಿದಂತೆ ಹಲವಾರು ಕಲಾವಿದರೊಂದಿಗೆ ತೆರೆಯನ್ನು ಹಂಚಿಕೊಂಡಿರುವ ಅನುಭವವನ್ನು ಅನಂತನಾಗ್ ಹೊಂದಿದ್ದಾರೆ. ನಿಜಕ್ಕೂ ಕೂಡ ಅವರನ್ನು ಕನ್ನಡದ ಅನರ್ಘ್ಯ ರತ್ನ ಎಂದರು ಕೂಡ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಅವರ ಕೊಡುಗೆ ಕನ್ನಡ ಚಿತ್ರರಂಗಕ್ಕಿದೆ.

ಇನ್ನು ವಿಷ್ಣುವರ್ಧನ್(Vishnuvardhan) ಹಾಗೂ ಅನಂತನಾಗ್ ವಿಶೇಷ ಸ್ನೇಹ ಬಾಂಧವ್ಯವನ್ನು ಹೊಂದಿದ್ದರು. ಇವರಿಬ್ಬರೂ ಒಂದಾಗಿ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಚಿತ್ರರಂಗಕ್ಕೆ ಬಹುತೇಕ ಕೆಲವು ವರ್ಷಗಳ ಅಂತರದಲ್ಲಿಯೇ ಕಾಲಿಟ್ಟರೂ ಕೂಡ ಇವರಿಬ್ಬರು ಮೊದಲ ಬಾರಿಗೆ ನಟಿಸಲು 17 ವರ್ಷಗಳೇ ಬೇಕಾಯಿತು. ಹೌದು ಗೆಳೆಯರೆ ಇವರಿಬ್ಬರು ಸಿನಿಮಾ ರಂಗಕ್ಕೆ ಕಾಲಿಟ್ಟ ನಂತರ 17 ವರ್ಷಗಳ ನಂತರ ಮತ್ತೆ ಹಾಡಿತು ಕೋಗಿಲೆ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ.

ಚಿ ಉದಯ್ ಶಂಕರ್(Chi Udayshankar) ಅವರ ಕಥೆಯಲ್ಲಿ ಮೂಡಿಬಂದಂತಹ ಈ ಸಿನಿಮಾ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಸಾಕಷ್ಟು ಯಶಸ್ವಿಯಾಯಿತು ಎಂದರು ಕೂಡ ಅತಿಶಯೋಕ್ತಿ ಎನಿಸಲಾರದು. ಈ ಇಬ್ಬರು ಧೀಮಂತ ನಟರು ಒಂದೇ ಸಿನಿಮಾದಲ್ಲಿ ಮೊದಲ ಬಾರಿ ಕಾಣಿಸಿಕೊಂಡಾಗ ಅದರಲ್ಲೂ ಇಂತಹ ಕಥೆಯಲ್ಲಿ ಅಂತಹ ನಟನ ಚಾತುರ್ಯತೆಯನ್ನು ಹೊಂದಿರುವ ಕಲಾವಿದರು ಜೊತೆಯಾಗಿ ಕಾಣಿಸಿಕೊಂಡಾಗ ಆ ಪರದೆ ನಿಜಕ್ಕೂ ಧನ್ಯ ಎಂಬಂತೆ ಭಾವನೆಯಿಂದ ಕೂಡಿತ್ತು. ಇಂದಿಗೂ ಕೂಡ ಪ್ರತಿಯೊಬ್ಬ ಕಲಾವಿದರು ಹಾಗೂ ಕಲಾ ಪ್ರೇಮಿಗಳು ನೆನಪಿಸಿಕೊಳ್ಳುವಂತಹ ಸಿನಿಮಾ ಅದಾಗಿತ್ತು.

Leave a Comment

error: Content is protected !!