Rajkumar: ಯಾರಿಂದಲೂ ಅಳಿಸಲಾಗದ ಅಣ್ಣಾವ್ರ ದಾಖಲೆಯನ್ನು ಮುರಿದಿದ್ದು ನಟಿ ಮಾಲಾಶ್ರೀ ಮಾತ್ರ. ಯಾವ ದಾಖಲೆ ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್!

Malashree ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ಅಣ್ಣಾವ್ರನ್ನು ಸುಮ್ಮನೆ ಕರೆಯುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಇರುವಂತಹ ಬಹುತೇಕ ಎಲ್ಲಾ ದಾಖಲೆಗಳು ಕೂಡ ಅಣ್ಣಾವ್ರ(Annavru) ಹೆಸರಿನಲ್ಲಿ ಖಂಡಿತವಾಗಿ ಇರುತ್ತದೆ. ಇಂದಿಗೂ ಕೂಡ ಪ್ರಸ್ತುತ ಎನಿಸುವಂತಹ ಹಲವಾರು ಅಂತರಾಷ್ಟ್ರೀಯ ಮಟ್ಟದ ಗೌರವ ಸಮಾನಗಳನ್ನು ಕೂಡ ನಟ ರಾಜ್ ಕುಮಾರ್(Rajkumar) ಅವರು ಪಡೆದುಕೊಂಡಿದ್ದಾರೆ. ನಿಜ ಜೀವನದಲ್ಲಿ ಕೂಡ ಅಭಿಮಾನಿಗಳು ಅವರನ್ನು ಹಿಂಬಾಲಿಸುವಂತೆ ಬದುಕಿದವರು ನಮ್ಮೆಲ್ಲರ ನೆಚ್ಚಿನ ನಟಸಾರ್ವಭೌಮ.

ರಾಜಕುಮಾರ್(Rajkumar) ಅವರ ಹಲವಾರು ದಾಖಲೆಗಳಲ್ಲಿ ಇವತ್ತು ನಾವು ಹೇಳಲು ಹೊರಟಿರುವ ದಾಖಲೆ ಕೂಡ ಶಾಮೀಲಾಗಿದ್ದು ಅದನ್ನು ಇದುವರೆಗೂ ಯಾವುದೇ ಕನ್ನಡ ಚಿತ್ರರಂಗದ ನಟ ಮುರಿಯಲು ಸಾಧ್ಯವಾಗಿಲ್ಲ. ಹೌದು ನಾವು ಮಾತನಾಡುತ್ತಿರುವುದು 1968ರಲ್ಲಿ ಅಣ್ಣಾವ್ರು ಒಂದೇ ವರ್ಷದಲ್ಲಿ ಅತ್ಯಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ದಾಖಲೆಯನ್ನು ಮಾಡಿದ್ದಾರೆ.

ಹೌದು ಆ ವರ್ಷದಲ್ಲಿ ರಾಜಕುಮಾರ್ ಅವರು ಭರ್ಜರಿ 19 ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಒಂದೇ ವರ್ಷದಲ್ಲಿ ಅತ್ಯಂತ ಹೆಚ್ಚು ಬಿಡುಗಡೆಯಾದ ಸಿನಿಮಾಗಳ ನಾಯಕ ಎಂಬುದಾಗಿ ದಾಖಲೆಯನ್ನು ನಿರ್ಮಿಸಿದ್ದರು. ಆದರೆ ಅದನ್ನು ಸರಿಗಟ್ಟಲು ಅವರೇ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದ ನಟಿ ಮಾಲಾಶ್ರೀ ಅವರ ಬರಬೇಕಾಯಿತು. ಹೌದು ಗೆಳೆಯರೇ ನಟಿ ಮಾಲಾಶ್ರೀ(Malashree) ಅವರು 90ರ ದಶಕದಲ್ಲಿ ನಾಯಕ ನಟರಿಗಿಂತಲೂ ಕೂಡ ಹೆಚ್ಚಿನ ಬೇಡಿಕೆಯನ್ನು ಹೊಂದಿದ್ದಂತಹ ನಟಿ.

ಹೀಗಾಗಿ 1992ರಲ್ಲಿ ನಟಿ ಮಾಲಾಶ್ರೀ(Actress Malashree) ಅವರು ಒಂದೇ ವರ್ಷದಲ್ಲಿ 19 ಸಿನಿಮಾಗಳಲ್ಲಿ ನಟಿಸುವ ಮೂಲಕ ಅಣ್ಣಾವ್ರ ಸಾಧನೆಯನ್ನು ಸರಿಗಟ್ಟುತ್ತಾರೆ. ಆದರೆ ಇದುವರೆಗೂ ಕೂಡ ಅಣ್ಣಾವ್ರ ಸಾಧನೆಗಳ ಹತ್ತಿರಕ್ಕೂ ಕೂಡ ಹಲವಾರು ಸ್ಟಾರ್ ನಟರಿಗೆ ಸುಳಿಯಲು ಸಾಧ್ಯವಾಗಿಲ್ಲ. ಕೇವಲ ಕನ್ನಡ ಚಿತ್ರರಂಗದ ನಟರು ಮಾತ್ರವಲ್ಲದ ಇಡೀ ಭಾರತೀಯ ಚಿತ್ರರಂಗದಲ್ಲಿ ಕೂಡ ಇಂತಹ ಅದೆಷ್ಟೋ ದಾಖಲೆಗಳನ್ನು ನಟ ರಾಜಕುಮಾರ್ ಹೊಂದಿದ್ದಾರೆ ಎನ್ನುವುದು ಕನ್ನಡಿಗರೆಲ್ಲರೂ ಹೆಮ್ಮೆ ಪಡಬೇಕಾಗಿರುವ ವಿಚಾರ.

Leave a Comment

error: Content is protected !!