ಬಂಧನ ಸಿನಿಮಾ ಗೆ ಮೊದಲು ನಾಯಕನಾಗಿ ಆಯ್ಕೆಯಾಗಿದ್ದು ವಿಷ್ಣು ದಾದಾ ಅಲ್ಲ. ಹಾಗಿದ್ರೆ ಯಾರು ಗೊತ್ತಾ?

Actor vishnuvardhan bandana movie: ಬಂಧನ ಸಿನಿಮಾ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್ ಅವರ ಸಿನಿಮಾ ಕರಿಯರ್ ನಲ್ಲಿ ಒಂದು ಮೈಲಿಗಳನ್ನು ಅಂತಹ ಸಿನಿಮಾ ಆಗಿದೆ ಎಂದರೆ ತಪ್ಪಾಗಲಾರದು ಯಾಕೆಂದರೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಜನರಿಂದ ಮೆಚ್ಚುಗೆಗೆ (Appreciation ) ಒಳಗಾಗಿತ್ತು. ಬಂಧನ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ನಟನೆ ಹಾಗೂ ಅವರ ಪಾತ್ರವನ್ನು ಪ್ರತಿಯೊಬ್ಬ ಕನ್ನಡ ಪ್ರೇಕ್ಷಕನು ಕೂಡ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾನೆ. ಆದರೆ ನಿಜ ಹೇಳಬೇಕೆಂದರೆ ಬಂಧನ ಸಿನಿಮಾ ಗೆ ನಾಯಕನಟನಾಗಿ ಆಯ್ಕೆಯಾಗಿದ್ದು ಮೊದಲು ವಿಷ್ಣುವರ್ಧನ್ ಅವರಲ್ಲ.

Actor vishnuvardhan bandana movie

ಇಂದು ನಿಮಗೆ ಸಿನಿಮಾ ನೋಡುವಾಗ ವಿಷ್ಣುವರ್ಧನ್ ಅವರು ನಾಯಕನಟನಾಗಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ ಎಂಬುದಾಗಿ ಅನ್ನಿಸಬಹುದು ಆದರೆ ಈ ಸಿನಿಮಾಗೆ ಮೊದಲ ಆಯ್ಕೆಯಾಗಿ ವಿಷ್ಣುವರ್ಧನ್ ಅವರು ಕಾಣಿಸಿಕೊಂಡಿರಲಿಲ್ಲ. ಈ ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕ ಆಗಿರುವ ರಾಜೇಂದ್ರ ಸಿಂಗ್ ಬಾಬು ಅವರು ಈ ಕಥೆಯನ್ನು ಬರೆದುಕೊಂಡು ಮೊದಲಿಗೆ ಅವರ ಆಪ್ತ ಸ್ನೇಹಿತರಾಗಿರುವ ಅಂಬರೀಶ್ ಅವರ ಬಳಿಗೆ ಹೋಗುತ್ತಾರೆ. ಅಂಬರೀಶ್ ಅವರ ಬಳಿ ಹೋಗಿ ಈ ಕಥೆಯನ್ನು ನೋಡಲು ಹೇಳುತ್ತಾರೆ ಆಗ ಅಂಬರೀಶ್ ಅವರು ಈ ಕಥೆಯನ್ನು (Story ) ತುಂಬಾ ಇಷ್ಟಪಟ್ಟು ಚೆನ್ನಾಗಿ ಮಾಡಿದ್ದೀಯಾ ಎಂಬುದಾಗಿ ಮೆಚ್ಚುಗೆಯನ್ನು ಕೂಡ ಸೂಚಿಸಿದ್ದರಂತೆ.

ತದನಂತರ ರಾಜೇಂದ್ರ ಸಿಂಗ್ ಬಾಬು ಅವರು ಈ ಸಿನಿಮಾದಲ್ಲಿ ನಾಯಕನಾಗಿ ನೀನೆ ಕಾಣಿಸಿಕೊಳ್ಳಬೇಕು ಎಂಬುದಾಗಿ ರೆವೆಲ್ ಸ್ಟಾರ್ ಅಂಬರೀಶ್ ಅವರಿಗೆ ಹೇಳಿದಾಗ ಅವರು ಸುತಾರಂ ಒಪ್ಪುವುದಿಲ್ಲ. ಈ ಸಿನಿಮಾದಲ್ಲಿ ನಾಯಕ ನಟನ ಪಾತ್ರಕ್ಕೆ ಸಾಫ್ಟ್ ಆಗಿ ಇರಬೇಕು ಆದರೆ ನನ್ನ ಆಟಿಟ್ಯೂಡ್ (Attitude ) ಸಾಫ್ಟ್ ಆಗಿ ಇರಲು ಸಾಧ್ಯವಿಲ್ಲ ಹೀಗಾಗಿ ಈ ಪಾತ್ರಕ್ಕೆ ವಿಷ್ಣುವರ್ಧನ್ ಪರ್ಫೆಕ್ಟ್ (Perfect ) ನಟ ಎಂಬುದಾಗಿ ವಿಷ್ಣುವರ್ಧನ್ ಅವರ ಹೆಸರನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರು ರಾಜೇಂದ್ರ ಸಿಂಗ್ ಬಾಬು ಅವರಿಗೆ ಸೂಚಿಸುತ್ತಾರೆ.

ಬೈಕ್ ಮೇಲೆ ಹುಡುಗಿಯನ್ನು ಕೂರಿಸಿಕೊಂಡು ಡಿಂಗ್ ಡಾಂಗ್ ಪ್ರಾರಂಭಿಸಿದ ಹುಡುಗ ನಂತರ ಆದ ಎಡವಟ್ಟೇನು ಗೊತ್ತಾ? ಇದು ಬೇಕಿತ್ತಾ

ಅದಾದ ನಂತರವೇ ನಾಯಕ ನಟನಾಗಿ ವಿಷ್ಣುವರ್ಧನ್ ಅವರು ಆಯ್ಕೆಯಾಗಿ ಸಿನಿಮಾ ಚಿತ್ರಿಕರಣ ನಡೆದು ಬಿಡುಗಡೆಯಾಗಿ ( Release ) ಶತದಿನೋತ್ಸವವನ್ನು ಈ ಸಿನಿಮಾ ಪೂರೈಸುತ್ತದೆ. ಕೆಲವೊಂದು ಸಿನಿಮಾಗಳ ಹಿಂದಿನ ನಿಜವಾದ ಕಥೆ ನಮಗೆ ಗೊತ್ತಿರುವುದಿಲ್ಲ ಆದರೆ ಗೊತ್ತಾದ ನಂತರ ಖಂಡಿತವಾಗಿ ನಾವು ಆಶ್ಚರ್ಯ ಪಡ್ತೇವೆ ಅವುಗಳಲ್ಲಿ ಇದು ಕೂಡ ಒಂದಾಗಿದೆ. ಬಂಧನ ಸಿನಿಮಾದ ಹಿಂದಿನ ಈ ಕಹಾನಿಯ ( Story ) ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!