KL Rahul: ಕೆ ಎಲ್ ರಾಹುಲ್ ಬರ್ತಡೆ ದಿನ ಮುದ್ದಿನ ಪತ್ನಿ ನೀಡಿದ ಗಿಫ್ಟ್ ಎಷ್ಟು ಬೆಲೆಯದ್ದು ಗೊತ್ತಾ? ಇದು ನಿಜವಾದ ಪ್ರೀತಿ ಅಂದ್ರೆ.

Athiya Shetty ಇಂದು ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವಂತಹ ಕೆಎಲ್ ರಾಹುಲ್(KL Rahul) ಅವರು ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಿಂದ ಭಾರತೀಯ ಕ್ರಿಕೆಟ್ ತಂಡದವರೆಗೂ ಕೂಡ ಕೆಎಲ್ ರಾಹುಲ್ ಅವರ ಪ್ರಯಾಣ ಎನ್ನುವುದು ನಿಜಕ್ಕೂ ಕೂಡ ಸ್ಪೂರ್ತಿದಾಯಕವಾದದ್ದು. ಸಾಕಷ್ಟು ಸೋಲು ಗೆಲುವುಗಳನ್ನು ತಮ್ಮ ಕರಿಯರ್ ನಲ್ಲಿ ಕೆ ಎಲ್ ರಾಹುಲ್ ಅವರು ಕಂಡಿದ್ದಾರೆ.

ಅದರಲ್ಲೂ ಈ ವರ್ಷವಂತೂ ಸಾಕಷ್ಟು ಸೋಲುಗಳನ್ನು ಕಂಡಿದ್ದರು ಕೂಡ ಇತ್ತೀಚಿಗಷ್ಟೇ ಲಕ್ನೋ(Lucknow) ತಂಡದ ಪರವಾಗಿ ಐಪಿಎಲ್ ನಲ್ಲಿ ಅರ್ಧಶತಕವನ್ನು ಬಾರಿಸುವ ಮೂಲಕ ಮತ್ತೆ ಕಂಬ್ಯಾಕ್ ಮಾಡುವ ಹವಣಿಕೆಯಲ್ಲಿದ್ದಾರೆ ನಮ್ಮೆಲ್ಲರ ನೆಚ್ಚಿನ ಕೆ ಎಲ್ ರಾಹುಲ್. ಇನ್ನು ಕೆಲವು ತಿಂಗಳುಗಳ ಹಿಂದಷ್ಟೇ ನಟಿ ಅಥಿಯ ಶೆಟ್ಟಿ(Athiya Shetty) ಅವರನ್ನು ಮದುವೆಯಾಗುವ ಮೂಲಕ ಕೆಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರಿಬ್ಬರೂ ಕೊನೆಗೂ ಕೂಡ ಮನೆಯವರ ಒಪ್ಪಿಗೆಯ ಮೇರೆಗೆ ಸರಳವಾಗಿ ವಿವಾಹವಾಗಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿದ್ದು ಈ ಬರ್ತಡೇಗೆ ತನ್ನ ಗಂಡನಿಗೆ ಅಥಿಯ ಶೆಟ್ಟಿ(Athiya Shetty) ನೀಡಿರುವ ಗಿಫ್ಟ್ ಕೂಡ ವಿಶೇಷವಾಗಿದೆ. ಬನ್ನಿ ಹಾಗಿದ್ದರೆ ಆ ವಿಶೇಷವಾದ ಗಿಫ್ಟ್ ಯಾವುದು ಹಾಗೂ ಅದರ ಬೆಲೆ ಎಷ್ಟು ಎಂಬುದನ್ನು ತಿಳಿಯೋಣ.

ಪ್ರೀತಿಯ ಗಂಡ ಆಗಿರುವಂತಹ ಕೆಎಲ್ ರಾಹುಲ್(KL Rahul) ಅವರಿಗೆ ಅಥಿಯ ಶೆಟ್ಟಿ(Athiya Shetty) 300000ಕ್ಕೂ ಅಧಿಕ ಬೆಲೆ ಬಾಳುವಂತಹ ಚಿನ್ನದ ಪೆಂಡೆಂಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಈ ಉಡುಗೊರೆಯಿಂದ ಕೆಎಲ್ ರಾಹುಲ್ ಖುಷಿಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Leave a Comment

error: Content is protected !!