KL Rahul: ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಕನ್ನಡಿಗ ಕೆಎಲ್ ರಾಹುಲ್!

ಸ್ನೇಹಿತರೆ ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್(KL Rahul) ಅವರು ಧಾರ್ಮಿಕ ವ್ಯಕ್ತಿ ಎಂದರೆ ತಪ್ಪಾಗಲಾರದು. ತಮ್ಮ ಬಿಡುವಿನ ಸಮಯದಲ್ಲೆಲ್ಲ ಪುಣ್ಯಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ದೈವ ಭಕ್ತಿಯನ್ನು ಮೆರೆಯುತ್ತಿರುತ್ತಾರೆ. ಹೀಗಿರುವಾಗ ಇಂದು ಮುಂಜಾನೆ ತುಮಕೂರಿನ ಪ್ರಸಿದ್ದಿ ಸಿದ್ದಗಂಗಾ ಮಠಕ್ಕೆ ಕೆ ಎಲ್ ರಾಹುಲ್(KL Rahul) ಅವರು ಭೇಟಿ ನೀಡಿದ್ದು, ಆ ಸಮಯದಲ್ಲಿ ತೆಗೆಯಲಾದಂತಹ ಸುಂದರ ಚಿತ್ರಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾ ನಎಟ್ಟಿಗರ ಗಮನ ಸೆಳೆಯುತ್ತಿವೆ.

ಹೌದು ಸ್ನೇಹಿತರೆ, ವಿಶ್ವದಾದ್ಯಂತ ತ್ರಿವಿಧ ಅನ್ನದಾಸೋಹ ಬಡ ಮಕ್ಕಳಿಗೆ ಊಟ ವಸತಿ ಹಾಗೂ ವಿದ್ಯೆಯನ್ನು ಕಲ್ಪಿಸಿ ಕೊಡುತ್ತಿರುವಂತಹ ಪುಣ್ಯಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ಶಿವಕುಮಾರ ಸ್ವಾಮೀಜಿಗಳ ಸಿದ್ದಗಂಗಾ ಮಠಕ್ಕೆ ಕೆಎಲ್ ರಾಹುಲ್ ಅವರು 19 ಫೆಬ್ರವರಿ 2024 ಸೋಮವಾರ ಬೆಳಗ್ಗೆ ಭೇಟಿ ನೀಡಿದ್ದು ಸಿದ್ದಗಂಗಾ ಬೆಟ್ಟಕ್ಕೆ ತೆರಳಿ ದೇವರ ಆಶೀರ್ವಾದ ಪಡೆಯುವುದರ ಜೊತೆಗೆ ಮಠಾಧೀಶರಾದ ಸಿದ್ದಲಿಂಗ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಅಲ್ಲಿನ ಮಕ್ಕಳೊಂದಿಗೆ ಅಮೂಲ್ಯವಾದಂತಹ ಸಮಯವನ್ನು ಕೆಎಲ್ ರಾಹುಲ್ ಕಳೆದಿದ್ದು,

ಈ ಫೋಟೋಗಳನ್ನು ವೀರಶೈವ ಲಿಂಗಾಯತ್ ಅಫೀಶಿಯಲ್ ಎಂಬ ಫೇಸ್ ಬುಕ್ ಖಾತೆಯಲ್ಲಿ ಖ್ಯಾತ ಕ್ರಿಕೆಟಿಗ ಕೆಎಲ್ ರಾಹುಲ್(KL Rahul) ಸಿದ್ಧಗಂಗಾ ಮಠಕ್ಕೆ ಭೇಟಿ ಎಂಬ ಶೀರ್ಷಿಕೆ ಬರೆದು ಪೋಸ್ಟ್ ಹಂಚಿಕೊಳ್ಳಲಾಗಿದೆ. ಸದ್ಯ ಈ ಫೋಟೋ ಎಲ್ಲೆಡೆ ಭಾರಿ ವೈರಲ್ ಆಗುತ್ತಿದ್ದು, ಓರ್ವ ಪ್ರಸಿದ್ಧಿ ಟೀಮ್ ಇಂಡಿಯಾ ಆಟಗಾರನಾದರೂ ಕೆ ಎಲ್ ರಾಹುಲ್ ಅವರಲ್ಲಿ ಇರುವಂತಹ ದೈವ ಭಕ್ತಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಕೋಟ್ಯಾಂತರ ರೂಪಾಯಿ ಆಸ್ತಿ ಮೌಲ್ಯದ ಒಡೆಯರಾದರೂ ಕೂಡ ಕೆ ರಾಹುಲ್ ಯಾವುದೇ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಂತಹ ಸಂದರ್ಭದಲ್ಲಿ ಬಹಳ ಸಿಂಪಲ್ಲಾದ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ ಇವರ ಸರಳತೆಗೆ ವಿಶೇಷ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ ಎಂದರೆ ತಪ್ಪಾಗಲಾರದು. ಇದೇ ಮಾರ್ಚ್ 22, 2024ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗುತ್ತಿದ್ದು, ಕೆ ಎಲ್ ರಾಹುಲ್ ಯಥಾಪ್ರಕಾರ ಲಕ್ನೋ ಸೂಪರ್ ಜೆಂಟ್ಸ್ (lucknow super gaints) ತಂಡದ ನಾಯಕನಾಗಿ ಜವಾಬ್ದಾರಿಯನ್ನು ತಂಡವನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!