Smriti Mandhana: ಆರ್ ಸಿ ಬಿ ಪಾಳೆಯಕ್ಕೆ ಸೇರಿದ ಸ್ಮೃತಿ ಮಂದನ ಸೇಲ್ ಆಗಿದ್ದು ಎಷ್ಟು ಕೋಟಿಗೆ ಗೊತ್ತಾ?

Smriti Mandhana ಇಡೀ ಪ್ರಪಂಚದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್. ಅದನ್ನು ಶಾರ್ಟ್ ಆಗಿ ಎಲ್ಲರೂ ಪ್ರೀತಿಯಿಂದ ಐಪಿಎಲ್ ಎನ್ನುದಾಗಿ ಕರೆಯುತ್ತಾರೆ. ಆಟಗಾರರನ್ನು ಕೋಟಿಗೆ ಬೆಲೆ ಇಲ್ಲದಷ್ಟು ಲೆಕ್ಕದಲ್ಲಿ ಕೋಟಿ ಕೋಟಿ ಹಣ ನೀಡಿ ಖರೀದಿಸುತ್ತಾರೆ. ಈ ಕ್ರಿಕೆಟ್ ಲೀಗ್ ಹಿನ್ನೆಲೆಯಿಂದಲೇ ನಮ್ಮ ಭಾರತೀಯ ಕ್ರಿಕೆಟ್ ಸಂಸ್ಥೆ ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದೆ.

ಇದೇ ಐಪಿಎಲ್ ನಿಂದ ಹಲವಾರು ಯುವ ಪ್ರತಿಭೆಗಳು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿವೆ. ಇನ್ನು ಈ ಬಾರಿ ಕೇವಲ ಪುರುಷರ ವಿಭಾಗದಲ್ಲಿ ಮಾತ್ರವಲ್ಲದೆ ಮಹಿಳೆಯರ ವಿಭಾಗದಲ್ಲಿ ಕೂಡ ಐಪಿಎಲ್ ಅನ್ನು ನಡೆಸಲು ಭಾರತೀಯ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಮಹಿಳೆಯರ ಐಪಿಎಲ್ ನ ಆಕ್ಷನ್ ಕೂಡ ನಡೆದಿದೆ. ಹರಾಜು ಪ್ರಕ್ರಿಯೆಯಲ್ಲಿ ನಮ್ಮ ಆರ್‌ಸಿಬಿ ತಂಡದ ಪಾಳೆಯಕೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅತ್ಯಂತ ಜನಪ್ರಿಯ ಆಟಗಾರ್ತಿ ಆಗಿರುವ ಸ್ಮೃತಿ ಮಂದನ ಆಯ್ಕೆಯಾಗಿದ್ದಾರೆ.

Smriti Mandhana RCB

ಹೌದು ಗೆಳೆಯರೇ, ವಿಶ್ವ ಕ್ರಿಕೆಟ್ ನಲ್ಲಿ ಸ್ಮೃತಿ ಮಂದನ ಉತ್ತಮ ಬ್ಯಾಟ್ಸ್ಮನ್ ಆಗಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದು ತಮ್ಮ ಸೌಂದರ್ಯದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಹಲ್ಚಲ್ ಸೃಷ್ಟಿಸಿದ್ದಾರೆ. ಇನ್ನು ಸ್ಮೃತಿ ಮಂದನ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಷ್ಟು ಕೋಟಿಗೆ ಖರೀದಿಸಿದೆ ಎಂಬುದನ್ನು ನೋಡೋಣ ಬನ್ನಿ.

ಹೌದು ಗೆಳೆಯರೇ ಎಲ್ಲರ ನೆಚ್ಚಿನ ಕ್ರಶ್ ಆಗಿರುವ ಸ್ಮೃತಿ ಮಂದನ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯಧಿಕ 3.4 ಕೋಟಿ ರೂಪಾಯಿ ಬೆಲೆಗೆ ಖರೀದಿಸಿದೆ. ಒಟ್ಟಾರೆಯಾಗಿ ಪುರುಷರ ತಂಡದಂತೆ ಮಹಿಳಾ ತಂಡವು ಕೂಡ ತಮ್ಮ ಅದ್ಭುತ ಆಟದ ಮೂಲಕ ಎಲ್ಲರ ಮನಸ್ಸಿನ ಜೊತೆಗೆ ಕಪ್ ಕೂಡ ಗೆಲ್ಲಲಿ ಎಂಬುದಾಗಿ ಹಾರೈಸೋಣ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಹಿಳಾ ಆಟಗಾರ್ತಿಯರ ಬಗ್ಗೆ ನಿಮಗಿರುವ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!