Kannada Bigg Boss Season 10 ಸ್ನೇಹಿತರೆ, ಬಿಗ್ ಬಾಸ್ ಸೀಸನ್ ಹತ್ತಿರ ಪ್ರೊಮೋ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಾರಿಯ ದೊಡ್ಮನೆಗೆ ಯಾವೆಲ್ಲ ಕಂಟೆಸ್ಟೆಂಟ್ಗಳು ಬರಬಹುದು ಎಂಬುದರ ಲೆಕ್ಕಾಚಾರವನ್ನು ನೆಟ್ಟಿಗರು ಬಹಳ ಜೋರಾಗಿ ಲೆಕ್ಕಾಚಾರ ತೊಡಗಿದರು ಇನ್ನಷ್ಟು ಜನ ಮನೆಗೆ ಯಾವ ಸ್ಪರ್ಧಿ ಬರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ instagram ಹಾಗೂ facebook ನಂತಹ ಜಾಲಗಳಲ್ಲಿ ತೀವ್ರವಾದ ಚರ್ಚೆಗೆ ಇಳಿದರು.
ಆದರೆ ಈಗ ಈ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಬಿದ್ದಿದ್ದು ಅಧಿಕೃತವಾಗಿ ಈ ಬಾರಿಯ ದೊಡ್ಮನೆಯಲ್ಲಿ ಸ್ಪರ್ಧಿಗಳಾಗಿ ಆಟವಾಡಲು ಸಿದ್ದರಾಗಿರುವ ಸೆಲೆಬ್ರಿಟಿಗಳು ಯಾರ್ಯಾರು ಎಂಬುದನ್ನು ಬಿಗ್ ಬಾಸ್(Big Boss) ತಂಡದವರು ಹಾಗೂ ಕಲರ್ಸ್ ಕನ್ನಡ ವಾಹಿನಿಯು ರಿವಿಲ್ ಮಾಡಿದೆ. ಹೌದು ಸ್ನೇಹಿತರೆ, ಮುಂದಿನ ತಿಂಗಳು ಅಂದರೆ ಅಕ್ಟೋಬರ್ ಎಂಟನೇ ತಾರೀಖಿನಿಂದ ಶುರುವಾಗಲಿರುವ ನೂರು ದಿನದ ಹಬ್ಬಕ್ಕೆ ಯಾವೆಲ್ಲ ಸೆಲೆಬ್ರಿಟಿಗಳು ಬರಲಿದ್ದಾರೆ? ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.
ಅನುಬಂಧ ಅವಾರ್ಡ್ಸ್(Anubandha Awards) ವೇದಿಕೆಯಲ್ಲಿ ಬಿಗ್ ಬಾಸ್ ತಂಡದಿಂದ ಮನೆಗೆ ಪ್ರವೇಶಿಸಲಿರುವ ಮೊದಲ ಸ್ಪರ್ಧಿ ಯಾರೆಂಬುದನ್ನು ಬಹಿರಂಗ ಪಡಿಸಿದರು. ಅದು ಯಾವ ಸ್ಟಾರ್ ನಟನು ಅಲ್ಲ, ಕಿರುತೆರೆ ನಟಿಯು ಅಲ್ಲ, ಬದಲಿಗೆ ರಕ್ಷಿತ್ ಶೆಟ್ಟಿ ಚಾರ್ಲಿ(Charlie) ಸಿನಿಮಾದಲ್ಲಿ ಅಭಿನಯಿಸಿ ತನ್ನ ಮೂಕ ನಟನೆಯ ಮೂಲಕವೇ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದುಕೊಂಡಂತಹ ಚಾರ್ಲಿ.
ಇನ್ನು ಎರಡನೆಯದಾಗಿ ಈಗಷ್ಟೇ ನಾಗಿಣಿ ಸೀರಿಯಲ್ ಯಾವುದೇ ಸಿನಿಮಾ ಹಾಗೂ ಸೀರಿಯಲ್ ಅನ್ನು ಒಪ್ಪಿಕೊಂಡಿರದ ನಟಿ ನಮೃತ ಗೌಡ ಹಾಗೂ ನಾಗಿಣಿ ಧಾರಾವಾಹಿಯ ನಾಯಕನಟ ನೀನಾದ ಹರಿತ್ಸ, ಅಗ್ನಿಸಾಕ್ಷಿ ಮತ್ತು ಲಕ್ಷ್ಮಿ ಎಂಬ ಎರಡು ಧಾರವಾಹಿಗಳಲ್ಲಿ ನಟಿಸಿ ಕನ್ನಡಿಗರ ಮನೆಮಗಳಾಗಿರುವ ನಟಿ ಸುಕೃತ ನಾಗ್, ಗೀತಾ ಸೀರಿಯಲ್ನ ನಾಯಕ ನಟಿ ಭವ್ಯ ಗೌಡ, ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್,
ತಮ್ಮ ಅದ್ಭುತ ಡ್ಯಾನ್ಸ್ ವಿಡಿಯೋಗಳಿಂದಾಗಿ ಪ್ರಖ್ಯಾತಿ ಪಡೆದಿರುವಂತಹ ಸೋಶಿಯಲ್ ಮೀಡಿಯಾದ ಸ್ಟಾರ್ ಭೂಮಿಕಾ ಬಸವರಾಜ್, ವರ್ಷ ಕಾವೇರಿ ಮತ್ತು ವರುಣ್ ಆರಾಧ್ಯ ಈ ಬಾರಿಯ ದೊಡ್ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ 2023 ಅಕ್ಟೋಬರ್ ತಿಂಗಳಲ್ಲಿ ಮಿಥುನ ರಾಶಿಯವರ ಲೈಫ್ ನಲ್ಲಿ ಏನೆಲ್ಲಾ ಬದಲಾಗುತ್ತೆ ಗೊತ್ತಾ..