Malashree: ಕನಸಿನ ರಾಣಿ ಮಾಲಾಶ್ರೀ ಅವರ ಸೀಮಂತ ಶಾಸ್ತ್ರದ ಸುಂದರ ಫೋಟೋಗಳು

Malashree: ಸ್ನೇಹಿತರೆ ತಮ್ಮ ಅಮೋಘ ನಟನೆಯ ಮೂಲಕ ಇಂದಿಗೂ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಂತಹ ಲೇಡಿ ಸೂಪರ್ ಸ್ಟಾರ್ ಕನಸಿನ ರಾಣಿ ಮಾಲಾಶ್ರೀ(Malashree) ಅವರು ಮಹಿಳಾ ಪ್ರಧಾನ ಪಾತ್ರಗಳ ಮೂಲಕ ಗಂಗಾ ದುರ್ಗಿಯಂತಹ ಚಿತ್ರಗಳನ್ನು ನೀಡುತ್ತಾ ಚಿತ್ರ ಪ್ರೇಕ್ಷಕನನ್ನು ರಂಜಿಸುತ್ತಿರುವಂತಹ ನಟಿ.

ತಮ್ಮಂತೆ ತನ್ನ ಮಗಳು ರಾಧನ ರಾಮ್ (Radhana Ram) ಕೂಡ ಬಹು ದೊಡ್ಡ ಮಟ್ಟದ ಹೆಸರನ್ನು ಮಾಡಬೇಕೆಂಬ ಮಹಾದಾಸೆಯನ್ನು ಹೊಂದಿದ್ದಂತಹ ಮಾಲಾಶ್ರೀ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಟೇರ ಸಿನಿಮಾದ ನಾಯಕ ನಟಿಯಾಗಿ ರಾಧನ ರಾಮ್ (Radhana Ram) ಅವರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ್ದಾರೆ. ಅಂದಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ಮಾಲಾಶ್ರೀ ಅವರು ಕೆಲ ಸುಂದರ ಹಾಗೂ ಅಪರೂಪದ ಫೋಟೋಗಳನ್ನು ಹಂಚಿಕೊಳ್ಳುತ್ತಾ ಪ್ರತಿದಿನ ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿರುತ್ತಾರೆ.

ಯಾವುದೇ ಹಬ್ಬ ಹರಿದಿನಗಳು ಬಂದರೂ ಅದನ್ನು ಬಹಳ ಅರ್ಥಪೂರ್ಣವಾಗಿ ತಮ್ಮ ಇಬ್ಬರು ಮುದ್ದಿನ ಮಕ್ಕಳಾದ ರಾಧನ ಮತ್ತು ಆರ್ಯನ್ ಜೊತೆಗೆ ಆಚರಿಸಿ ಸಂಭ್ರಮ ಪಡುತ್ತಾರೆ ಹಾಗೂ ಅದರ ಚಿತ್ರಣಗಳನ್ನು ತಮ್ಮ ಮೊಬೈಲ್ ಕ್ಯಾಮೆರಾದಿಂದ ಕ್ಯಾಪ್ಚರ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ಮಾಲಾಶ್ರೀ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ(Instagram Account) ತಮ್ಮ 22 ವರ್ಷದ ಹಳೆಯ ಸೀಮಂತ ಶಾಸ್ತ್ರದ ಫೋಟೋಗಳನ್ನು ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಹೌದು ಗೆಳೆಯರೇ 1997 ರಂದು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಾಲಾಶ್ರೀ ಅವರು 2001ರಲ್ಲಿ ಗರ್.ಭಿಣಿಯಾಗಿ ಮುದ್ದಿನ ಮಗಳಾದ ರಾಧನವರಿಗೆ ಜನ್ಮ ನೀಡಿದರು. ಆ ಸಮಯದಲ್ಲಿ ಬಸ.ರಿಯ ಬಯಕೆಯನ್ನೆಲ್ಲಾ ಈಡೇರಿಸುವ ಶಾಸ್ತ್ರ ಸೀಮಂತವನ್ನು ಬಹಳ ಅದ್ದೂರಿಯಾಗಿ ಆಯೋಜಿಸಿದಂತಹ ಕೋಟಿ ರಾಮು (Koti Ramu) ಅವರು ತಮ್ಮ ಪತ್ನಿಗೆ ಇಷ್ಟವಿರುವಂತಹ ಆಹಾರ ತಿಂಡಿಯನ್ನೆಲ್ಲ ನೀಡಿ ವಿರಾಜಮಾನವಾದಂತಹ ಆಸನದ ಮೇಲೆ ಕೂರಿಸಿ ಬಹಳ ಶಾಸ್ತ್ರೋತ್ತವಾಗಿ ಸೀಮಂತ ಕಾರ್ಯವನ್ನು ಮಾಡಿದ್ದಾರೆ. ಹಸಿರು ಬಣ್ಣದ ಸೀರೆಯುಟ್ಟ ಮಾಲಾಶ್ರೀ(Malashree) ಅವರ ಹಣೆಗೆ ಕೋಟಿ ರಾಮು ಅವರು ಕುಂಕುಮವನ್ನು ಇಟ್ಟು ಪ್ರೀತಿಯಿಂದ ಆಶೀರ್ವಾದ ಮಾಡಿರುವಂತಹ ಫೋಟೋಗಳು ವೈರಲ್ ಆಗಿವೆ.

Leave a Comment

error: Content is protected !!