KL Rahul: ಕೆ ಎಲ್ ರಾಹುಲ್ ಹಾಗೂ ಅವರ ಪತ್ನಿ ಅಥಿಯಾಶೆಟ್ಟಿ ಅವರ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ?

KL Rahul ಕರ್ನಾಟಕ ಮೂಲದ ಅದರಲ್ಲಿ ವಿಶೇಷವಾಗಿ ಕರಾವಳಿ ಮೂಲದ ಕ್ರಿಕೆಟಿಗ ಆಗಿರುವಂತಹ ಕೆ ಎಲ್ ರಾಹುಲ್ ರವರು ನಿಮಗಲ್ಲರಿಗೂ ಅತ್ಯಂತ ಚಿರಪರಿಚಿತ ವ್ಯಕ್ತಿ. ಎರಡು ವರ್ಷ ಆರ್ಸಿಬಿ ತಂಡದ ಪರವಾಗಿ ಆಡಿರುವಂತಹ ಕೆಎಲ್ ರಾಹುಲ್(KL Rahul) ಅವರು ಸದ್ಯಕ್ಕೆ ಐಪಿಎಲ್ ನಲ್ಲಿ ಲಕ್ನೋ(Lucknow) ತಂಡದ ಪರವಾಗಿ ನಾಯಕನಾಗಿ ಆಡುತ್ತಿದ್ದಾರೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಪ್ರಮುಖ ಆಟಗಾರನಾಗಿ ಕೂಡ ತಮ್ಮ ಸ್ಥಾನವನ್ನು ಹಲವಾರು ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದಾರೆ.

ಸಾಕಷ್ಟು ವರ್ಷಗಳ ಪ್ರೀತಿಯ ನಂತರ ಸುನಿಲ್ ಶೆಟ್ಟಿ(Suniel Shetty) ಅವರ ಮಗಳಾಗಿರುವಂತಹ ಬಾಲಿವುಡ್ ಚಿತ್ರರಂಗದ ಯುವ ಉದಯೋನ್ಮುಖ ನಟಿ ಅಥಿಯಾ ಶೆಟ್ಟಿ(Athiya Shetty) ರವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಕೂಡ ಈ ಮದುವೆಗೆ ಆಗಮಿಸಿ, ಹೊಸ ವಧು ವರರನ್ನು ಹಾರೈಸಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಶುಭಾಶಯಗಳು ತಿಳಿಸಿದ್ದರು.

ಸಾಕಷ್ಟು ವರ್ಷಗಳಿಂದಲೂ ಕೂಡ ಪರಸ್ಪರ ಡೇಟಿಂಗ್ ಮಾಡುತ್ತಿದ್ದ ಇವರಿಬ್ಬರು ಕೊನೆಗೂ ಮದುವೆ ಆಗಿರುವುದು ಪ್ರತಿಯೊಬ್ಬರಿಗೂ ಕೂಡ ಸಂತೋಷವನ್ನು ತರಿಸಿದೆ. ಇಂದಿನ ಲೇಖನಿಯಲ್ಲಿ ಪ್ರತಿಯೊಂದು ಜೋಡಿಗಳಂತೆ ಇವರಿಬ್ಬರ ವ ನಡುವಿನ ವಯಸ್ಸಿನ ಅಂತರದ ಕುರಿತಂತೆ ತಿಳಿದುಕೊಳ್ಳಲು ಹೊರಟಿದ್ದೇವೆ ಬನ್ನಿ ಇದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ.

ಆಶ್ಚರ್ಯ ಎನ್ನುವಂತೆ ಕೆ ಎಲ್ ರಾಹುಲ್(KL Rahul) ಹಾಗೂ ಅಥಿಯಾ ಶೆಟ್ಟಿ(Athiya Shetty) ಇಬ್ಬರ ವಯಸ್ಸು ಕೂಡ 30 ವರ್ಷ ವಯಸ್ಸಾಗಿದೆ. Athiya Shetty 1992ರ ನವೆಂಬರ್ 5ರಂದು ಜನಿಸಿದರೆ, KL Rahul ರವರು ಏಪ್ರಿಲ್ 18ರಂದು ಜನಿಸಿದ್ದಾರೆ. ಅಂದರೆ ಕೆಎಲ್ ರಾಹುಲ್ ಅವರು ತಮ್ಮ ಪತ್ನಿಗಿಂತ ಕೇವಲ ಏಳು ತಿಂಗಳ ದೊಡ್ಡವರಾಗಿದ್ದಾರೆ. ನಿಮಗೆ ಗೊತ್ತಿಲ್ಲದೆ ಇರುವಂತಹ ಈ ವಿಚಾರವನ್ನು ಈ ಲೇಖನಿಯ ಮೂಲಕ ನಿಮಗೆ ತಿಳಿಸಲು ಪ್ರಯತ್ನಿಸಿದ್ದೇವೆ.

Leave a Comment

error: Content is protected !!