Dhananjay: ಧನಂಜಯ್ ಅವರ ಪ್ರೇಯಸಿಯ ಹೆಸರನ್ನು ಎಲ್ಲರ ಎದುರೇ ಬಿಟ್ಟುಕೊಟ್ರಾ ನಟಿ ರಮ್ಯಾ?

Ramya ಡಾಲಿ ಧನಂಜಯ್(Daali Dhananjay) ನಾಯಕ ನಟನಾಗಿ ನಟಿಸಿರುವಂತಹ ಅವರ ಇಪ್ಪತ್ತೈದನೇ ಸಿನಿಮಾ ಹೊಯ್ಸಳ(Hoysala) ಈಗಾಗಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಸಾಕಷ್ಟು ಉತ್ತಮ ಸಾಮಾಜಿಕ ಸಂದೇಶವನ್ನು ಹೊಂದಿರುವಂತಹ ಈ ಸಿನಿಮಾ ಕಮರ್ಷಿಯಲ್ ವಿಚಾರದಲ್ಲಿ ಕೂಡ ಮಾಸ್ ಅಭಿಮಾನಿಗಳಿಗೆ ಹಬ್ಬದೂಟವಾಗಿದೆ.

ಇನ್ನು ಇದೇ ಸಂದರ್ಭದಲ್ಲಿ ಡಾಲಿ ಧನಂಜಯ್(Daali Dhananjay) ಅವರ ಮದುವೆ ವಿಚಾರ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಓಡಾಡುತ್ತಿದ್ದು ಒಬ್ಬ ನಟಿಯ ಜೊತೆಗೆ ಅವರ ಹೆಸರು ತಳಕು ಹಾಕಿಕೊಂಡಿರುವುದು ಕೂಡ ನಿಮಗೆಲ್ಲರಿಗೂ ತಿಳಿದಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚಿಗಷ್ಟೇ ಹೊಯ್ಸಳ ಸಿನಿಮಾದ ಪ್ರೀಮಿಯರ್ ಶೋ ನೋಡಿದ ನಂತರ ನಟಿ ರಮ್ಯಾ(Ramya) ಅವರು ಪ್ರತಿಕ್ರಿಯೆ ನೀಡುತ್ತಿದ್ದ ಸಂದರ್ಭದಲ್ಲಿ ಅದನ್ನು ರಿವೀಲ್ ಮಾಡಿದ್ದಾರೆ.

ಹೌದು ಮಿತ್ರರೇ ಹೊಯ್ಸಳ ಸಿನಿಮಾವನ್ನು ನೋಡಿದ ನಂತರ ನಟ ಧನಂಜಯ್(Dhananjay) ಹಾಗೂ ಆ ಸಿನಿಮಾದಲ್ಲಿ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಅಮೃತ ಅಯ್ಯಂಗಾರ್(Amrutha Iyengar) ಅವರ ಬಗ್ಗೆ ಕೇಳಿದಾಗ ರಮ್ಯಾ ಅವರು ನಿಜ ಜೀವನದಲ್ಲಿ ಹಾಗೂ ತೆರೆಯ ಮೇಲೆ ಎರಡರಲ್ಲೂ ಕೂಡ ಕೆಮೆಸ್ಟ್ರಿ ಚೆನ್ನಾಗಿದೆ ಎಂದು ಹೇಳುವ ಮೂಲಕ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಸುಳಿವನ್ನು ಬಿಟ್ಟು ಕೊಟ್ಟಿದ್ದಾರೆ.

ಒಟ್ಟಾರೆಯಾಗಿ ಕನ್ನಡ ಚಿತ್ರರಂಗದ ಅತ್ಯಂತ ಭರವಸೆಯ ಯುವ ನಾಯಕ ನಟ ಆಗಿರುವ ಡಾಲಿ ಧನಂಜಯ್(Daali Dhananjay) ಕೊನೆಗೂ ಕೂಡ ಗಾಳಿ ಸುದ್ದಿಗಳ ಮೂಲಕವೇ ಮದುವೆ ಆಗೋಕೆ ಹೊರಟಿದ್ದಾರೆ ಎಂಬುದಾಗಿ ತಿಳಿದು ಬಂದಿರುವುದು ಅವರ ಅಭಿಮಾನಿಗಳಿಗೆ ಸಂತೋಷವನ್ನು ತಂದಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಡಾಲಿ ಧನಂಜಯ್ ಯಾವ ಹೇಳಿಕೆಯನ್ನು ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!