IPL 2023: ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಕುಣಿಯೋಕೆ ರಶ್ಮಿಕಾ ಪಡಿತಿರೋ ಸಂಭಾವನೆ ಎಷ್ಟು? ಕೋಟಿಗೆ ಲೆಕ್ಕಾನೆ ಇಲ್ವಾ?

Rashmika Mandanna ನಟಿ ರಶ್ಮಿಕ(Rashmika) ಮಂದಣ್ಣ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವ ಮಟ್ಟದಲ್ಲಿ ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದಾರೆ ಅನ್ನುವುದು ತಿಳಿದಿದೆ. ಇನ್ನು ಅವರ ಜನಪ್ರಿಯತೆ ದಿನೇ ದಿನೇ ಬೇರೆಲ್ಲ ನಟಿಯರಿಗೆ ಹೋಲಿಸಿದರೆ ವೇಗವಾಗಿ ಬೆಳೆಯುತ್ತಿದೆ. ಈಗಾಗಲೇ ಲೇಡಿ ಸೂಪರ್ ಸ್ಟಾರ್ ಪಟ್ಟವನ್ನು ಕೂಡ ಪಡೆದುಕೊಂಡಿದ್ದಾರೆ ಎನ್ನುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಇನ್ನು ಇದೇ ಮಾರ್ಚ್ 31 ರಿಂದ ಪ್ರಾರಂಭವಾಗಲಿರುವ ಈ ವರ್ಷದ ಐಪಿಎಲ್ ನಲ್ಲಿ ಕೂಡ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಅಧಿಕೃತ ಮಾಹಿತಿಗಳು ಸಿಕ್ಕಿವೆ. ಹೀಗೆಂದ ಮಾತ್ರಕ್ಕೆ ಆಟಗಾರ್ತಿಯಾಗಿ ಭಾಗವಹಿಸುತ್ತಿದ್ದಾರೆ ಎಂದು ಭಾವಿಸುವುದು ಬೇಡ. ಹೌದು ಉದ್ಘಾಟನಾ ಕಾರ್ಯಕ್ರಮದಲ್ಲಿ ನೃತ್ಯ ಮಾಡುವುದಕ್ಕಾಗಿ ನಟಿ ರಶ್ಮಿಕ ಮಂದಣ್ಣ(Rashmika Mandanna) ಗುಜರಾತಿಗೆ ಪ್ರಯಾಣ ಬೆಳೆಸಲಿದ್ದಾರೆ.

ಹೌದು ಇದೇ ಮಾರ್ಚ್ 31ರಂದು ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ತಮ್ಮ ಮೊದಲ ಪಂದ್ಯವನ್ನು ಆಡುವ ಮೂಲಕ ಈ ಬಾರಿ ಐಪಿಎಲ್ ಗೆ ನಾಂದಿ ಹಾಡಲಿವೆ. ಇದೇ ಸಂದರ್ಭದಲ್ಲಿ ಹಲವಾರು ಸೆಲೆಬ್ರೆಟಿಗಳ ಜೊತೆ ರಶ್ಮಿಕ ಮಂದಣ್ಣ ಕೂಡ ನೃತ್ಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಲಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ನೃತ್ಯ ಮಾಡಲು ರಶ್ಮಿಕ ಮಂದಣ್ಣ(National Crush Rashmika Mandanna) ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ನೀವು ಕೂಡ ಕೋಟಿಗೆ ಬೆಲೆನೇ ಇಲ್ವಾ ಎಂಬುದಾಗಿ ಕೇಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಮಿತ್ರರೇ, ಸಾವಿರಾರು ಕೋಟಿಗಳ ಕ್ರಿಕೆಟ್ ಲೀಗ್ ಆಗಿರುವ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್(IPL) ನಲ್ಲಿ ಕುಣಿಯಲು ರಶ್ಮಿಕ ಮಂದಣ್ಣ ಭರ್ಜರಿ ಎರಡು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರಂತೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!