Vasishta Simha: ವಸಿಷ್ಠ ಸಿಂಹ ದಂಪತಿಗಳ ಎಂಗೇಜ್ಮೆಂಟ್ ಆನಿವರ್ಸರಿ! ಮುದ್ದಾದ ಫೋಟೋಗಳನ್ನು ಹಂಚಿಕೊಂಡು ಪತ್ನಿಗೆ ಶುಭ ಕೋರಿದ ವಶಿಷ್ಠ

(Vasishta Simha: ಸ್ನೇಹಿತರೆ, ಕಳೆದ ವರ್ಷ ಈ ಶುಭ ದಿನದಂದು ವಸಿಷ್ಟ ಸಿಂಹ (Vasishta Simha) ದಂಪತಿಗಳು ಉಂಗುರ ಬದಲಿಸಿಕೊಂಡು ಬಹಳ ಅದ್ದೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಗುಟ್ಟಾದ ಪ್ರೇಮ ಕಹಾನಿಯನ್ನು ಎಲ್ಲರ ಮುಂದೆ ರಿವೀಲ್ ಮಾಡಿ ಶೀಘ್ರದಲ್ಲಿ ಮದುವೆಯಾಗುತ್ತಿರುವ ಶುಭ ಸುದ್ದಿಯನ್ನು ಹಂಚಿಕೊಂಡರು. ಇವರ ಈ ವಿಚಾರ ಹಲವರಿಗೆ ಅಚ್ಚರಿಯನ್ನುಂಟು ಮಾಡಿದರೆ ಮತ್ತಷ್ಟು ಜನಕ್ಕೆ ಹರುಷವನ್ನು ತಂದಿತ್ತು.

ಸ್ಯಾಂಡಲ್ವುಡ್ನ ಮತ್ತೋರ್ವ ಸ್ಟಾರ್ ನಟ ನಟಿ ದಾಂಪತ್ಯ ಜೀವನದ ಕೊಂಡಿ ಬೆಸೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ ನೆಟ್ಟಿಗರು ಸಂತಸ ವ್ಯಕ್ತಪಡಿಸಿದರು. ಅದರಂತೆ ಜನವರಿ 26ನೇ ತಾರೀಕು 2023 ರಂದು ವಸಿಷ್ಟ ಸಿಂಹ (Vasishta Simha) ಮತ್ತು ಹರಿಪ್ರಿಯಾ(Haripriya) ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದು ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಬದುಕನ್ನು ಬರಮಾಡಿಕೊಂಡರು.

ಮದುವೆಯಾದ ದಿನದಿಂದ ಹಿಡಿದು ಇಲ್ಲಿಯವರೆಗೂ ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತ ನಮ್ಮ ಸ್ಯಾಂಡಲ್ವುಡ್ನ ಆದರ್ಶ ದಂಪತಿಗಳಾಗಿರುವ ಈ ಜೋಡಿ ಹಕ್ಕಿಗಳು ಎಂದು ತಮ್ಮ ಮೊದಲ ವರ್ಷದ ಎಂಗೇಜ್ಮೆಂಟ್ ಆನಿವರ್ಸರಿಯನ್ನು ಆಚರಿಸಿಕೊಳ್ಳುತ್ತಿದ್ದು, ಅದರ ಅಂಗವಾಗಿ ಹೆಂಡತಿ ಜೊತೆಗೆ ಮುದ್ದಾದ ಫೋಟೋಗಳನ್ನು ಹಂಚಿಕೊಂಡು ‘ಓ ನಮ್ಮ ಅಧಿಕೃತ ಎಂಗೇಜ್ಮೆಂಟ್ ಗೆ ಒಂದು ವರ್ಷಗಳು ಕಳೆದಿದೆ. ಪರಸ್ಪರದ ಹುಚ್ಚುತನವನ್ನು ನಿಭಾಯಿಸಿದ್ದಕ್ಕೆ ನಮಗೆ ಚಿಯರ್ಸ್’ ಎಂಬ ಕ್ಯಾಪ್ಶನ್ ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ.

ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ವಸಿಷ್ಠ ಸಿಂಹ (Vasishta Simha) ಮತ್ತು ಹರಿಪ್ರಿಯ ಜೋಡಿಗಳಿಗೆ ಕಮೆಂಟ್ ಮೂಲಕ ಶುಭ ಹಾರೈಸುತ್ತಿದ್ದಾರೆ. ತಮ್ಮ ಲವ್ ಲೀ ಸಿನಿಮಾದ ಶೂಟಿಂಗ್ ಕೆಲಸಗಳ ಜೊತೆಗೆ ಕನ್ನಡ ಸಿನಿಮಾ ರಂಗದ ಇತರ ನಟರೊಂದಿಗೆ ಸೇರಿ ಕನ್ನಡ ಚಲನಚಿತ್ರ ಕಪ್ (KCC) ನಲ್ಲಿ ಕ್ರಿಕೆಟ್ ಆಡುತ್ತಿದ್ದು,

ಹರಿಪ್ರಿಯಾ ಅವರ ಎಲ್ಲಾ ಕೆಲಸಗಳಿಗೆ ಪ್ರೋತ್ಸಾಹಿಸುತ್ತಾ ಯೂಟ್ಯೂಬ್ ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯರಾಗಿದ್ದಾರೆ. ಹೌದು ಗೆಳೆಯರೇ ಹರಿಪ್ರಿಯಾ ಸಿಂಹ ಎಂಬ ಯುಟ್ಯೂಬ್ ಚಾನೆಲ್ ಒಂದನ್ನು ಹೊಂದಿರುವ ಹರಿಪ್ರಿಯಾ (Haripriya) ಅವರು ಹೊಂದಿದ್ದು, ಅದರಲ್ಲಿ ಮಿನಿ ವ್ಲಾಗ್ ಗಳನ್ನು ಮಾಡುತ್ತಾ ಜನರಿಗೆ ಎಂಟರ್ಟೈನ್ಮೆಂಟ್ ನೀಡುತ್ತಿದ್ದಾರೆ. ಇವರು ಹಾಕುವಂತಹ ವಿಡಿಯೋಗಳಿಗೆ ವಿಶೇಷವಾದ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!