Yash & Radhika Pandit: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಚೊಚ್ಚಲ ಚಿತ್ರ ಮೊಗ್ಗಿನ ಮನಸ್ಸಿನ ಕೆಲ ಅಪರೂಪದ ದೃಶ್ಯಗಳು ಇಲ್ಲಿವೆ

ಸ್ನೇಹಿತರೆ ನಂದಗೋಕುಲ(Nandagokula) ಎಂಬ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದಂತಹ ಯಶ್ ಮತ್ತು ರಾಧಿಕಾ ಪಂಡಿತ್(Yash & Radhika Pandit) ಜೋಡಿಗಳು ಒಟ್ಟಿಗೆ ಬೆಳ್ಳಿ ತೆರೆಯನ್ನು ಮೊಗ್ಗಿನ ಮನಸ್ಸು (Moggina Manasu) ಎಂಬ ಸಿನಿಮಾದ ಮೂಲಕ ಪ್ರವೇಶಿಸುತ್ತಾರೆ. ಮೊದಲ ಸಿನಿಮಾದಲ್ಲಿಯೇ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಕಂಡಂತಹ ಈ ಜೋಡಿಗಳು ಚಿತ್ರರಂಗದಲ್ಲಿ ಕಂಡುಕೊಂಡರು.

ಪ್ರೀತಿ ಸ್ನೇಹ ಹಾಗೂ ಜೀವನದ ಮಹತ್ವವನ್ನು ತಿಳಿಸುವ ಕಥಾಹಂದರದ ಮೇಲೆ ನಿರ್ಧಾರಿತವಾಗಿರುವಂತಹ ಈ ಸಿನಿಮಾಗೆ ನಿರ್ದೇಶಕ ಶಶಾಂಕ್ ಅವರು ಆಕ್ಷನ್ ಕಟ್ ಹೇಳಿದರೆ ಹೊಸಬರನ್ನು ನಂಬಿ ಇ. ಕೃಷ್ಣಪ್ಪನವರು ಹಣ ಹೂಡಿಕೆ ಮಾಡಿರುತ್ತಾರೆ. ಹಾಗೆ ಸಿನಿಮಾದ ನಾಯಕಿಯರಾಗಿ ರಾಧಿಕಾ ಪಂಡಿತ್ ಹಾಗೂ ಶುಭಪುಂಜ ಮಿಂಚಿದ್ದು, ರಾಕಿಂಗ್ ಸ್ಟಾರ್ ಯಶ್ ಅವರು ಸಿನಿಮಾದ ನಾಯಕ ನಟನಾಗಿ ವೀಕ್ಷಕರ ಮನಸ್ಸನ್ನು ಸೆಳೆದರು.

ಹೀಗೆ ಜುಲೈ 18, 2018 ರಂದು ರಾಜ್ಯದಾದ್ಯಂತ ತೆರೆಕಂಡಂತಹ ಈ ಸಿನಿಮಾಗೆ ವಿಮರ್ಶಕರಿಂದ ಅದ್ಭುತ ಮೆಚ್ಚುಗೆ ವ್ಯಕ್ತವಾಯಿತು, ಚಿತ್ರದ ಅದ್ಭುತ ಕಥಾಹಂದರ ಹಾಗೂ ಮನೋ ಮೂರ್ತಿ(Manomurthy) ಯವರ ಸಂಗೀತ ಸಂಯೋಜನೆ, ಮನಸೂರೆ ಗೊಳಿಸುವಂತಹ ಹಾಡುಗಳಿದ್ದ ಕಾರಣ ವೀಕ್ಷಕರನ್ನು ಸೆಳೆದಂತಹ ಈ ಚಿತ್ರವು ಬೆಂಗಳೂರಿನ ಬಹುತೇಕ ಎಲ್ಲಾ ಥಿಯೇಟರ್ ಗಳಲ್ಲಿಯೂ 100 ದಿನಗಳ ಓಟವನ್ನು ಪೂರೈಸಿ, ಅದ್ಭುತ ಯಶಸ್ಸನ್ನು ಕಂಡುಕೊಳ್ಳುತ್ತದೆ.

ಆನಂತರ ತೆಲುಗಿನಲ್ಲಿ ಲೋಕಮೆ ಕೊತಗಾ(Lokame Kothaga) ಎಂದು ರಿಮೇಕ್ ಮಾಡಲಾಯಿತು ಹೀಗೆ ಮೊದಲ ಸಿನಿಮಾ ದಿಂದಲೇ ಭರ್ಜರಿ ಯಶಸ್ಸನ್ನು ಕಂಡಂತಹ ರಾಕಿಂಗ್ ಸ್ಟಾರ್ ಯಶ್(Yash) ಇಂದು ಪ್ರಶಾಂತ್ ನೀಲ್ ಅಬರ ಕೆ ಜಿ ಎಫ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಮುಂದಿನ ಟಾ+ಕ್ಸಿಕ್ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ದುಪ್ಪಟ್ಟಾಗಿದೆ. ಈ ಪುಟದಲ್ಲಿರುವ ಫೋಟೋಗಳ ಮೂಲಕ ನೀವು ಸಹ ಬರೋಬರಿ ಹದಿನೈದು ವರ್ಷದ ಹಳೆಯ ಮೊಗ್ಗಿನ ಮನಸ್ಸು (Moggina Manasu) ಸಿನಿಮಾ ಶೂಟಿಂಗ್ ಸಮಯದಲ್ಲಿ ತೆಗೆಯಲಾದಂತಹ ಕೆಲಸ ಸುಂದರ ಚಿತ್ರಣಗಳನ್ನು ಕಂಡುಕೊಳ್ಳಬಹುದಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!